ಕೊರೋನಾ ಭೀತಿ ; ಮಹಿಳಾ ಸ್ವಸಹಾಯ ಸಂಘದಿಂದ ಕಡಿಮೆ ದರದಲ್ಲಿ ಮಾಸ್ಕ್ ವಿತರಣೆ

ಚಾಮರಾಜನಗರ ತಾಲೂಕಿನ ಬೂದಂಬಳ್ಳಿಯ ಶ್ರೀ ಭುವನೇಶ್ವರಿ ಮಹಿಳಾ ಸ್ವಸಹಾಯ ಸಂಘ ಗುಣಮಟ್ಟದ ಮಾಸ್ಕ್ ಗಳನ್ನು ತಯಾರಿಸಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಪೂರೈಸತೊಡಗಿದೆ

news18-kannada
Updated:March 19, 2020, 4:30 PM IST
ಕೊರೋನಾ ಭೀತಿ ; ಮಹಿಳಾ ಸ್ವಸಹಾಯ ಸಂಘದಿಂದ ಕಡಿಮೆ ದರದಲ್ಲಿ ಮಾಸ್ಕ್ ವಿತರಣೆ
ಮಾಸ್ಕ್ ತಯಾರಿಸುತ್ತಿರುವ ಮಹಿಳೆಯರು
  • Share this:
ಚಾಮರಾಜನಗರ (ಮಾ.19) : ಕೊರೊನಾ ಭೀತಿ ಶುರುವಾದ ನಂತರ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮಾಸ್ಕ್ ಗಳ ಕೊರತೆ ಎದುರಾಗಿದೆ. ಜಿಲ್ಲೆಯ ಮೆಡಿಕಲ್ ಸ್ಟೋರ್ ಗಳಲ್ಲಿ ಮಾಸ್ಕ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಹೆಚ್ಚಾದಂತೆ ಮಾಸ್ಕ್ ಗಳ ದರವೂ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಮಾಸ್ಕ್ ಗಳ ಅವಶ್ಯಕತೆಯನ್ನರಿತ ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘವೊಂದು ಗುಣ ಮಟ್ಟದ ಮಾಸ್ಕ್ ಗಳನ್ನು ತಯಾರಿಸಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಪೂರೈಸಲು ಆರಂಭಿಸಿದೆ.

ವಿಶ್ವದೆಲ್ಲೆಡೆ ಹರಡುತ್ತಿರುವ ಕೊರೋನಾ ಭೀತಿಯಿಂದ ಜನರು ಮಾಸ್ಕ್ ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅಗತ್ಯ ತಕ್ಕಂತೆ ಮಾಸ್ಕ್ ಗಳು ದೊರೆಯುತ್ತಿಲ್ಲ. ಜಿಲ್ಲೆಯ ಮೆಡಿಕಲ್ ಸ್ಟೋರ್ ಗಳಲ್ಲು ಮಾಸ್ಕ ಗಳು ಬೇಡಿಕೆಗೆ ಅನುಗುಣವಾಗಿ ಲಭ್ಯವಾಗುತ್ತಿಲ್ಲ

ಬೇಡಿಕೆ ಹೆಚ್ಚಾಗುತ್ತಿದ್ದಂತೆ ಮಾಸ್ಕ್ ಗಳ ದರವೂ ದುಪ್ಪಾಟಾಗುತ್ತಿದೆ. ಈ ಹಿನ್ನಲೆಯಲ್ಲಿ ಮಾಸ್ಕ್ ಗಳ ಅವಶ್ಯಕತೆಯನ್ನು ಅರಿತ ಚಾಮರಾಜನಗರ ತಾಲೂಕಿನ ಬೂದಂಬಳ್ಳಿಯ ಶ್ರೀ ಭುವನೇಶ್ವರಿ ಮಹಿಳಾ ಸ್ವಸಹಾಯ ಸಂಘ ಗುಣಮಟ್ಟದ ಮಾಸ್ಕ್ ಗಳನ್ನು ತಯಾರಿಸಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಪೂರೈಸತೊಡಗಿದೆ

ಜಿಲ್ಲಾ ಪಂಚಾಯತ್​ನ ಎನ್.ಆರ್.ಎಲ್ ಎಂ ಯೋಜನೆಯಡಿ ಸಾಲ ಸೌಲಭ್ಯ ಪಡೆದು ಹೊಲಿಗೆ ಯಂತ್ರ ಖರೀದಿಸಿ ಸ್ವಉದ್ಯೋಗ ಕೈಗೊಂಡಿದ್ದ ಇಲ್ಲಿನ ಭುವನೇಶ್ವರಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು ಮಾಸ್ಕ್ ಗಳನ್ನು ತಯಾರಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಜನಸಾಮಾನ್ಯರಿಗೆ ಕಡಿಮೆದರದಲ್ಲಿ ಗುಣಮಟ್ಟದ ಮಾಸ್ಕ್ ದೊರೆಯುವಂತೆ ಮಾಡುವ ಉದ್ದೇಶದಿಂದ ಮಾಸ್ಕ್ ತಯಾರಿಸುವ ಕೆಲಸ ಮಾಡುತ್ತಿದ್ದೇವೆ. ಆರೋಗ್ಯ ಇಲಾಖೆ ಒಪ್ಪಿಗೆ ನೀಡಿದ ಉತ್ತಮ ಗುಣಮಟ್ಟದ ಹತ್ತಿ ಬಟ್ಟೆ ಉಪಯೋಗಿಸಿ, ಬಳಸಲು ಸುಲಭವಾಗುವ ರೀತಿಯ ಮಾಸ್ಕ್ ಗಳನ್ನು ತಯಾರಿಸುತ್ತಿದ್ದೇವೆ ಎನ್ನುತ್ತಾರೆ ಸಂಘದ ಅಧ್ಯಕ್ಷೆ ನಾಗರತ್ನ.

ಇದನ್ನೂ ಓದಿ : ಚಾಮರಾಜನಗರ: ಕುಕ್ಕುಟ ಉತ್ಪನ್ನ ಸಾಗಾಣಿಕೆ, ಮಾರಾಟ ನಿಷೇಧ ಆದೇಶ ತೆರವು

ಈ ಮಾಸ್ಕ್ ಗಳು ಪುನರ್ ಬಳಸಬಹುದಾಗಿದ್ದು ಬೆಲೆಯು ಕೂಡ ಕಡಿಮೆ ಇದೆ. ಇಲ್ಲಿ ಮಾಸ್ಕ್ ಗಳು ಕಡಿಮೆ ಬೆಲೆಗೆ ದೊರೆಯುವುದನ್ನು ಮನಗಂಡು ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲೆ ಹಾಗು ಹೊರಜಿಲ್ಲೆಯ ಮೆಡಿಕಲ್ ಶಾಪ್ ಗಳಿಂದಲೂ ಬೇಡಿಕೆ ಬಂದಿದ್ದು ಬೇಡಿಕೆಗೆ ಅನುಗುಣವಾಗಿ ಮಾಸ್ಕ್ ಗಳನ್ನು ಪೂರೈಸಲು ಮಹಿಳೆಯರು ಹಗಲಿರುಳು ಶ್ರಮಿಸುತ್ತಿದ್ದಾರೆ.
First published:March 19, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading