ರಾಜ್ಯದ 21 ಲಕ್ಷ ಕಾರ್ಮಿಕರಿಗೆ 1 ಸಾವಿರ ರೂ ಸಹಾಯಧನ ಮಾಸ್ಕ್​, ಸ್ಯಾನಿಟೈಸರ್​ ಬಿಡುಗಡೆ ಮಾಡಿದ ಕಾರ್ಮಿಕ ಇಲಾಖೆ

ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್​ ಮನವಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ಕಾರ್ಮಿಕ ಇಲಾಖೆವತಿಯಿಂದ ರಾಜ್ಯದ ಸುಮಾರು 21 ಲಕ್ಷ ಕಟ್ಟಡ ಕಾರ್ಮಿಕರಿಗೆ 1 ಸಾವಿರ ರೂಪಾಯಿಯಂತೆ ಸಹಾಯಧನವನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ.

ಕಾರ್ಮಿಕ ಸಚಿವ ಶಿವರಾಮ್​ ಹೆಬ್ಬಾರ್​

ಕಾರ್ಮಿಕ ಸಚಿವ ಶಿವರಾಮ್​ ಹೆಬ್ಬಾರ್​

 • Share this:
  ಬೆಂಗಳೂರು(ಮಾ.27) : ರಾಜ್ಯದಲ್ಲಿ ದಿನೇ ದಿನೇ  ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಯವರು ಎಪ್ರಿಲ್ 14 ವರೆಗೆ ಲಾಡ್​​ ಡೌನ್ ಮಾಡಿದ್ದಾರೆ. ಇದರಿಂದ ರಾಜ್ಯದ ಲಕ್ಷಾಂತರ ಬಡ ಕಾರ್ಮಿಕರು ತೊಂದರೆ ಆಗುತ್ತಿದೆ. ಇದನ್ನು ಮನಗಂಡ ರಾಜ್ಯದ ಕಾರ್ಮಿಕ ಇಲಾಖೆ  ಪ್ರತಿಯೊಬ್ಬ ಕಾರ್ಮಿಕರಿಗೆ  1 ಸಾವಿರ ರೂಪಾಯಿಯಂತೆ ಸಹಾಯ ಧನವನ್ನುಬಿಡುಗಡೆ ಮಾಡಿದೆ. 

  ರಾಜ್ಯದಕಾರ್ಮಿಕ ಇಲಾಖೆಯಲ್ಲಿ ಸುಮಾರು 21 ಲಕ್ಷ ನೊಂದಾಯಿತ ಕಟ್ಟಡ ಹಾಗೂ ಇತರೆ ಕಾರ್ಮಿಕರಿಗೆ 1 ಸಾವಿರ ರೂಪಾಯಿಯಂತೆ ಸಹಾಯಧನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್​ ನ್ಯೂಸ್​​18 ಕನ್ನಡಕ್ಕೆ ತಿಳಿಸಿದ್ದಾರೆ.

  ಕಾರ್ಮಿಕ ಇಲಾಖೆಯ ಆದೇಶದ ಪ್ರತಿ


  ರಾಜ್ಯ ಸರಕಾರ ಈಗಾಗಲೇ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ಯಾವುದೇ ಕಾರ್ಮಿಕ ಅಥವಾ ಉದ್ಯೋಗಿ ಕೊರೋನಾ ಸೋಂಕಿಗೆ ಒಳಗಾದರೆ, ಆತನಿಗೆ 28 ದಿನಗಳ ವೇತನ ಸಹಿತ ರಜೆ ನೀಡಬೇಕು ಎಂದು ರಾಜ್ಯ ಕಾರ್ಮಿಕ ಇಲಾಖೆಯು ಈಗಾಗಲೇ ಸುತ್ತೋಲೆ ಹೊರಡಿಸಿದೆ.

  ಲಾಕ್ ಡೌನ್ ನಿಂದ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದ ಖಾಸಗಿ ನೌಕರರು, ಗುತ್ತಿಗೆ ಕೆಲಸಗಾರರು ಮತ್ತು ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡದೇ, ಸಂಬಳ ಸಹಿತ ರಜೆ ನೀಡಬೇಕು ಎಂದು ಕಾರ್ಮಿಕ ಇಲಾಖೆ ಎಲ್ಲ ಕಾರ್ಮಿಕ ಸಂಘಟನೆಗಳು ಮತ್ತು ಉದ್ಯಮಗಳ ಮಾಲೀಕರಿಗೆ ಮನವಿ ಮಾಡಿದೆ. ಈ ಸಂಬಂಧ ಉದ್ಯಮಿಗಳ ಜತೆ ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರ್​ ಮಾತನಾಡಿದ್ದು, ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಕಾರ್ಮಿಕರ ಸುರಕ್ಷತೆ ಮತ್ತು ಹಕ್ಕುಗಳಿಗೆ ತೊಂದರೆಯಾದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.


  ವಿಶ್ವವೇ ಕೊರೊನಾ ವೈರಸ್ ಸೋಂಕಿನಿಂದ ನಲುಗುತ್ತಿದೆ. ಈ ಸಂದರ್ಭದಲ್ಲಿ ಕೊರೋನಾ ವೈರಸ್‌ ಕಾರಣದಿಂದ ಲಾಕ್‌ಡೌನ್ ಕಾರಣದಿಂದ ಕಚೇರಿಗೆ ಅಥವಾ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ, ಅಂತಹ ನೌಕರರನ್ನು ಕರ್ತವ್ಯ ನಿರತರಾಗಿದ್ದಾರೆ ಎಂದು ಪರಿಗಣಿಸಬೇಕು. ಅವರನ್ನು ಕೆಲಸದಿಂದ ವಜಾಗೊಳಿಸಬಾರದೆಂದು ಶಿವರಾಂ ಹೆಬ್ಬಾರ್​ ತಾಕೀತು ಮಾಡಿದ್ದಾರೆ.

  ಇದನ್ನೂ ಓದಿ : ಕ್ವಾರಂಟೈನ್ ಮನೆ ಸುತ್ತ ಭದ್ರತೆಗೆ ರಾಮುಲು ಸೂಚನೆ; ಖಾಸಗಿ ಕ್ಲಿನಿಕ್ ಮುಚ್ಚಿದರೆ ಕಠಿಣ ಕ್ರಮದ ಎಚ್ಚರಿಕೆ

  ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಎನ್​​​ಜಿಓ ಸಂಸ್ಥೆಗಳ ಸಹಕಾರದೊಂದಿಗೆ 1 ಲಕ್ಷಕ್ಕೂ ಹೆಚ್ಚು ನೌಕರರಿಗೆ ಸಾನಿಟೈಸರ್, ಮಾಸ್ಕ್ ಒದಗಿಸಲಾಗಿದೆ. ಕರೋನಾ ಮೆಡಿಕಲ್ ಸೇವೆಯಲ್ಲಿ ನಿರತ ರೆಡ್ ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರಿಗೆ ಅವಶ್ಯಕ ಸಲಕರಣೆಗಳನ್ನು ಒದಗಿಸಲಾಗುತ್ತಿದೆ.

  ಪಿಆರ್​ಪಿಸಿ ಕಾಯ್ದೆಯ ಕಲಂ 144 ರ ಅನ್ವಯ ಜಿಲ್ಲೆಯ ಜಿಲ್ಲಾಧಿಕಾರಿಗಳು ತುರ್ತು ಸಂದರ್ಭದಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರವಿದ್ದು, ಅದರಂತೆ  ವೈರಸ್​​ ಬಾಧಿತ ವ್ಯಕ್ತಿಗಳು ಇತರೆ ಜನರ ಸಂಪರ್ಕಕ್ಕೆ ಬಾರದಂತೆ ಪ್ರತ್ಯೇಕವಾಗಿರಿಸಲು ಸೂಕ್ತ ಕ್ರಮಕೈಗೊಳ್ಳತಕ್ಕದ್ದು ಎಂದು ಕಾರ್ಮಿಕ ಇಲಾಖೆ ಉಪ ಕಾರ್ಯದರ್ಶಿ ಸೂತ್ತೋಲೆ ಹೊರಡಿಸಿದ್ದಾರೆ.
  First published: