ಕೊರೋನಾ ಪೀಡಿತ ಕಾರ್ಮಿಕರಿಗೆ 28 ದಿನ ವೇತನಸಹಿತ ರಜೆ; ಸೂತ್ತೋಲೆ ಹೊರಡಿಸಿದ ಕಾರ್ಮಿಕ ಇಲಾಖೆ

ಕಾರ್ಮಿಕರು ಇಎಸ್​ಐನಿಂದ ನೀಡಲ್ಪಟ್ಟ ಪ್ರಮಾಣ ಪತ್ರವನ್ನು ತಮ್ಮ ಸಂಸ್ಥೆಯ ಆಡಳಿತವರ್ಗಕ್ಕೆ ಸಲ್ಲಿಸಿದ ತಕ್ಷಣ 28 ದಿನಗಳ ರಜೆಯನ್ನು ಕಡ್ಡಾತವಾಗಿ ಮಂಜೂರು ಮಾಡಬೇಕು.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಮಾ.05): ರಾಜ್ಯದಲ್ಲಿ ಕೊರೋನಾ ವೈರಸ್​ ಭೀತಿಯ ಹಿನ್ನೆಲೆಯಲ್ಲಿ ಕೊರೊನಾ ಪೀಡಿತ ಕಾರ್ಮಿಕರಿದ್ದರೆ ಸಂಬಂಧಪಟ್ಟ ಸಂಸ್ಥೆಗಳು 28 ದಿನ ವೇತನ ಸಹಿತ ರಜೆ ನೀಡಬೇಕು ಎಂದು ಕಾರ್ಮಿಕ ಇಲಾಖೆ ಸಂಬಂಧಪಟ್ಟ ಸಂಸ್ಥೆಗಳಿಗೆ ಸುತ್ತೋಲೆಯನ್ನು ಹೊರಡಿಸಿದೆ. 

  ವಿಶ್ವದೆಲ್ಲೆಡೆ ಆತಂಕ ಮೂಡಿಸಿರುವ ಕೊರೋನಾ ಸೋಂಕು ಭಾರತೀಯರ ನಿದ್ದೆಗೆಡಿಸಿದೆ. ಇದುವರೆಗೂ ದೇಶದಲ್ಲಿ 30 ಪ್ರಕರಣಗಳು ದಾಖಲಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ

  ರಾಜ್ಯದಲ್ಲಿ ಕೊರೋನಾವೈರಸ್ ಬಾಧಿತ ಕಾರ್ಮಿಕರಿಗೆ 28 ದಿನಗಳ ರಜೆ ಅಗತ್ಯವಿರುವುದರಿಂದ  ಇಎಸ್​ಐ ಕಾಯ್ದೆ ಅನ್ವಯವಾಗಲಿರುವ ಸಂಸ್ಥೆಗಳ ಕಾರ್ಮಿಕರು ತಮ್ಮ ಹತ್ತಿರದ ಇಎಸ್​ಐ ಆಸ್ಪತ್ರೆಗಳಿಗೆ ತೆರಳಿ ಆಸ್ಪತ್ರೆಗಳಲ್ಲಿನ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರವನ್ನು ಪಡೆಯಬೇಕು.

  ಈ ರೀತಿ ಪ್ರಮಾಣ ಪತ್ರ ಪಡೆಯಲು ಬರುವ ಕಾರ್ಮಿಕರಿಗೆ ಎಲ್ಲಾ ಇಎಸ್​ಐ ವೈದ್ಯಾಧಿಕಾರಿಗಳು ತುರ್ತಾಗಿ ಪರಿಶೀಲನೆ ನಡೆಸಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ನೀಡಬೇಕು. ಕಾರ್ಮಿಕರು ಇಎಸ್​ಐನಿಂದ ನೀಡಲ್ಪಟ್ಟ ಪ್ರಮಾಣ ಪತ್ರವನ್ನು ತಮ್ಮ ಸಂಸ್ಥೆಯ ಆಡಳಿತವರ್ಗಕ್ಕೆ ಸಲ್ಲಿಸಿದ ತಕ್ಷಣ 28 ದಿನಗಳ ರಜೆಯನ್ನು ಕಡ್ಡಾತವಾಗಿ ಮಂಜೂರು ಮಾಡಬೇಕು.

   order
  ಕಾರ್ಮಿಕ ಇಲಾಖೆಯ ಆದೇಶದ ಪ್ರತಿ


  ಇಎಸ್​ಐ ಕಾಯ್ದೆ ಅನ್ವಯವಾಗಿರುವ ಸಂಸ್ಥೆಗಳಲ್ಲಿ ಕೆಲಸ ಮಾಡತ್ತಿರುವ ನೌಕರರು ಕೊರೋನಾ ವೈರಸ್​​ ಬಾಧಿತರಾಗಿದ್ದಲ್ಲಿ  ಅವರಿಗೆ  ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ  ಸಂಸ್ಥೆಗಳ ಕಲಂ 15(3) ಅನ್ವಯ 28 ದಿನಗಳ ವೇತನ ಸಹಿತ ಅನಾರೋಗ್ಯದ ರಜೆ ಮತ್ತು ಇತರೆ ರಜೆಯನ್ನು ಕಡ್ಡಾಯವಾಗಿ ಮಾಡತಕ್ಕದ್ದು.

  ಇದನ್ನೂ ಓದಿ : ಕೊರೋನಾ ಭೀತಿ: ಬೆಂಗಳೂರಿಗೆ ಬಿಗ್​ ರಿಲೀಫ್​, ರಾಜೀವ್​ ಗಾಂಧಿ ಆಸ್ಪತ್ರೆ ದಾಖಲಾಗಿದ್ದವರಿಗಿಲ್ಲ ಸೋಂಕು

  ಪಿಆರ್​ಪಿಸಿ ಕಾಯ್ದೆಯ ಕಲಂ 144 ರ ಅನ್ವಯ ಜಿಲ್ಲೆಯ ಜಿಲ್ಲಾಧಿಕಾರಿಗಳು ತುರ್ತು ಸಂದರ್ಭದಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರವಿದ್ದು, ಅದರಂತೆ  ವೈರಸ್​​ ಬಾಧಿತ ವ್ಯಕ್ತಿಗಳು ಇತರೆ ಜನರ ಸಂಪರ್ಕಕ್ಕೆ ಬಾರದಂತೆ ಪ್ರತ್ಯೇಕವಾಗಿರಿಸಲು ಸೂಕ್ತ ಕ್ರಮಕೈಗೊಳ್ಳತಕ್ಕದ್ದು ಎಂದು ಕಾರ್ಮಿಕ ಇಲಾಖೆ  ಉಪ ಕಾರ್ಯದರ್ಶಿ ಸೂತ್ತೋಲೆ ಹೊರಡಿಸಿದ್ದಾರೆ.

   
  First published: