ಮಾಲುರು(ಜು.27): ಸಿಎಂ ಬಿಎ.ಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದೆ. ಈ ಬಿಜೆಪಿ ಸರ್ಕಾರ ವರ್ಷಾಚರಣೆಗೆ ನನ್ನ ವಿರೋಧವಿದೆ. ಬಿಜೆಪಿ ಸರ್ಕಾರ ಒಂದು ವರ್ಷ ಕೆಟ್ಟ ಆಡಳಿತ ನೀಡಿದ ಸರ್ಕಾರ. ಇಂತಹ ನಾಲಾಯಕ್ ಸರ್ಕಾರದಲ್ಲಿ ನಾವೂ ಶಾಸಕರಾಗಿದ್ದೇವೆ. ಹೀಗಾಗಿ ವರ್ಷಾಚರಣೆ ಬದಲು ಬ್ಲಾಕ್ ಡೇ ಆಚರಿಸಬೇಕು ಎಂದು ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ವಾಗ್ದಾಳಿ ನಡೆಸಿದ್ದಾರೆ.
ಮಾಲೂರು ತಾಲೂಕಿನಲ್ಲಿ 500 ಬೆಡ್ಗಳು ಹೊಂದಿರುವ ಕೋವಿಡ್-19 ಕೇರ್ ಸೆಂಟರ್ವೊಂದನ್ನು ಆರಂಭಿಸಲು ಕೋಲಾರ ಜಿಲ್ಲಾಡಳಿತ ಅಡ್ಡಗಾಲು ಹಾಕಿದೆ. ಮಾಲೂರಿನಲ್ಲೇ ಎರಡು ಕಡೆ ಕೋವಿಡ್-19 ಕೇರ್ ಸೆಂಟರ್ ಆರಂಭಿಸಲು 500 ಬೆಡ್ಗಳು ಮತ್ತಿತರ ಸಲಕರಣೆಗಳನ್ನು ನಾನು ಖರೀದಿ ಮಾಡಿದ್ದೇನೆ. ಮೊದಲಿಗೆ ಕೋವಿಡ್-19 ಕೇರ್ ಸೆಂಟರ್ ಆರಂಭಿಸಲು ಒಪ್ಪಿದ್ದ ಜಿಲ್ಲಾಡಳಿತ ಈಗ ಜಿಲ್ಲೆಯಲ್ಲಿರುವ ಪ್ರಭಾವಿ ರಾಜಕಾರಣಿಗಳು ಒತ್ತಡ ಹಾಕಿದ್ದರಿಂದ ದಿಢೀರ್ ಅನುಮತಿ ನಿರಾಕರಿಸಿದ್ಧಾರೆ ಎಂದು ಕುಟುಕಿದರು.
ಹೀಗೆ ಮುಂದುವರಿದ ಕೆ.ವೈ ನಂಜೇಗೌಡ, ಕೋವಿಡ್-19 ವಿಚಾರದಲ್ಲಿ ಬಿಜೆಪಿ ಸರ್ಕಾರ ಕಾಂಗ್ರೆಸ್ ವಿಫಲವಾಗಿದೆ. ಈಗ ಬೇಕಂತೆಲೇ ಕಾಂಗ್ರೆಸ್ ಶಾಸಕರು ಮಾಡುವ ಸಮಾಜ ಸೇವೆಯನ್ನು ರಾಜಕೀಯ ದೃಷ್ಟಿಯಿಂದ ನೋಡುತ್ತಿದೆ. ಹಾಗಾಗಿ ನಮ್ಮ ಸಮಾಜ ಸೇವೆಯನ್ನು ಡಿಸಿ ಮೂಲಕ ತಡೆಯುವಂತೆ ಮಾಡಿ ರಾಜಕಾರಣ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿರುವ ಇವರು, ಕಲಾಪದಲ್ಲಿ ವಿಚಾರ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Chines App Ban - ಭಾರತದಲ್ಲಿ ಮತ್ತೆ 47 ಚೀನೀ ಆ್ಯಪ್ಗಳ ನಿಷೇಧ? PUBG ಸೇರಿ 275 ಆ್ಯಪ್ಗಳು ಸರ್ಕಾರದ ಕಣ್ಗಾವಲಿನಲ್ಲಿ
ಇದೇ ವೇಳೆ ಮಾತಾಡಿದ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯ ಕೆ. ಚಂದ್ರಾರೆಡ್ಡಿ, ಕಳೆದ ವರ್ಷ ಮಳೆಹಾನಿ ಪ್ರದೇಶಗಳಲ್ಲಿ ಕೈಗೊಂಡ ಕಾರ್ಯ ಇನ್ನೂ ಮುಗಿದಿಲ್ಲ. ಪೂರ್ಣ ಪ್ರಮಾಣದಲ್ಲಿ ಸಂತ್ರಸ್ತರಿಗೆ ಪರಿಹಾರವೂ ನೀಡಿಲ್ಲ. ಈಗ ಕೊರೋನಾ ಸಮಯದಲ್ಲಿ ಸರ್ಕಾರ ಹಣವನ್ನ ಲೂಟಿ ಮಾಡಿದೆ. ಇದರ ಲೆಕ್ಕ ಕೇಳಿದವರ ವಿರುದ್ದವೇ ಆರೋಪಗಳನ್ನ ಮಾಡುತ್ತಿದೆ. ರಾಜ್ಯ ಸರ್ಕಾರದ ಒಂದು ವರ್ಷ ಸಾಧನೆಯೆಂದರೆ, ಸರ್ಕಾರದ ಬೊಕ್ಕಸ ಖಾಲಿ ಮಾಡಿದ್ದು ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ