Kunigal MLA Dr. Ranganath: ಶಾಸಕ ಭರತ್‌ ಶೆಟ್ಟಿ ಬೆನ್ನಲ್ಲೀಗ ಕುಣಿಗಲ್​​ ಶಾಸಕ ಡಾ. ರಂಗನಾಥ್​ಗೆ ಕೊರೋನಾ ಪಾಸಿಟಿವ್​​​

ಇನ್ನು, ಕೊರೋನಾ ಬಗ್ಗೆ ಎಷ್ಟೇ ಎಚ್ಚರಿಕೆ ವಹಿಸಿದರೂ ಸೋಂಕು ತಗುಲಿದೆ. ನಾನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿದ್ದೇನೆ. ಕ್ಷೇತ್ರದ ಜನ ನನ್ನ ಬಗ್ಗೆ ಚಿಂತಿಸುವುದು ಬೇಡ, ಬದಲಿಗೆ ನಿಮ್ಮ ಆರೋಗ್ಯದ ಕುರಿತು ಕಾಳಜಿವಹಿಸಿ ಎಂದು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

news18-kannada
Updated:July 6, 2020, 1:27 PM IST
Kunigal MLA Dr. Ranganath: ಶಾಸಕ ಭರತ್‌ ಶೆಟ್ಟಿ ಬೆನ್ನಲ್ಲೀಗ ಕುಣಿಗಲ್​​ ಶಾಸಕ ಡಾ. ರಂಗನಾಥ್​ಗೆ ಕೊರೋನಾ ಪಾಸಿಟಿವ್​​​
ಕುಣಿಗಲ್​ ಶಾಸಕ ಡಾ. ರಂಗನಾಥ್​
  • Share this:
ಬೆಂಗಳೂರು(ಜು.06): ರಾಜ್ಯದ ಜನಪ್ರತಿನಿಧಿಗಳಿಗೂ ಮಾರಕ ಕೊರೋನಾ ವೈರಸ್​ ಬಿಸಿ ತಟ್ಟಿದೆ. ಇತ್ತೀಚೆಗೆ ಮಂಗಳೂರು ಬಿಜೆಪಿ ಶಾಸಕ ಭರತ್‌ ಶೆಟ್ಟಿಗೆ ಕೊರೋನಾ ವೈರಸ್​ ಪಾಸಿಟಿವ್​​ ಕಾಣಿಸಿಕೊಂಡಿತ್ತು. ಈ ಬೆನ್ನಲ್ಲೀಗ ಮತ್ತೋರ್ವ ರಾಜಕಾರಣಿಗೆ ಕೋವಿಡ್​​-19 ವಕ್ಕರಿಸಿದೆ. ಕುಣಿಗಲ್ ಕ್ಷೇತ್ರದ ಕಾಂಗ್ರೆಸ್​ ಶಾಸಕ ಡಾ. ರಂಗನಾಥ್​ಗೆ ಕೂಡ ಸೋಂಕು ದೃಢಪಟ್ಟಿದೆ.

ನಿನ್ನೆಯಷ್ಟೇ ಜುಲೈ 5ನೇ ತಾರೀಕಿನಂದು ಭಾನುವಾರ ಡಾ. ರಂಗನಾಥ್‌ ಕೊರೋನಾ ತಪಾಸಣೆಗೊಳಗಾಗಿದ್ದರು. ಇದೀಗ ರಂಗನಾಥ್​​​ ಕೊರೋನಾ ರಿಪೋರ್ಟ್​ ಬಂದಿದ್ದು, ಸೋಂಕು ಖಾತ್ರಿಯಾಗಿದೆ. ಹೀಗಾಗಿ ಇವರಿಗೆ ಪ್ರತ್ಯೇಕ ಆಸ್ಪತ್ರೆಯಲ್ಲಿರಿಸಿ ಕೋವಿಡ್​​-19 ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು, ಕೊರೋನಾ ಬಗ್ಗೆ ಎಷ್ಟೇ ಎಚ್ಚರಿಕೆ ವಹಿಸಿದರೂ ಸೋಂಕು ತಗುಲಿದೆ. ನಾನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿದ್ದೇನೆ. ಕ್ಷೇತ್ರದ ಜನ ನನ್ನ ಬಗ್ಗೆ ಚಿಂತಿಸುವುದು ಬೇಡ, ಬದಲಿಗೆ ನಿಮ್ಮ ಆರೋಗ್ಯದ ಕುರಿತು ಕಾಳಜಿವಹಿಸಿ ಎಂದು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೋವಿಡ್​​-19 ಅಕ್ರಮ: ದಾಖಲೆ ಸಮೇತ ಆರೋಪ ಮಾಡುವಂತೆ ಸಿದ್ದರಾಮಯ್ಯಗೆ ಸಿಎಂ ಬಿ.ಎಸ್​​ ಯಡಿಯೂರಪ್ಪ ಸವಾಲ್​

ಹೀಗೆ ಮುಂದುವರಿದ ಅವರು, ಆರೋಗ್ಯದ ಬಗ್ಗೆ ಎಲ್ಲರೂ ಗಮನಹರಿಸಿ. ಏನಾದರೂ ಸಮಸ್ಯೆ ಇದ್ದರೆ ಕೂಡಲೇ ಗಮನಕ್ಕೆ ತನ್ನಿ. ಕ್ಷೇತ್ರದ ಜನ, ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಫೋನ್​​ನಲ್ಲಿ ಸಂಪರ್ಕಕ್ಕೆ ಲಭ್ಯವಿರುತ್ತೇನೆ. ಮುಂದಿನ 15 ದಿನಗಳ ಯಾರನ್ನು ಭೇಟಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
Published by: Ganesh Nachikethu
First published: July 6, 2020, 1:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading