news18-kannada Updated:June 25, 2020, 7:22 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು(ಜೂ.25): ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಎಸಿ ಬಸ್ ಸೇವೆ ಆರಂಭ ಮಾಡುತ್ತಿದೆ. ಇಂದಿನಿಂದ ರಾಜ್ಯದ ಹಲವೆಡೆ ಎಸಿ ಬಸ್ ಸೇವೆ ಆರಂಭ ವಾಗುತ್ತಿದೆ. ಈಗಾಗಲೇ ಬುಕ್ಕಿಂಗ್ ಸಹ ಶುರುವಾಗಿದೆ.
ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ರಾಜಧಾನಿ ಬೆಂಗಳೂರು ಕೊರೋನಾದಲ್ಲಿ ಸಮುದಾಯ ಹರಡುವಿಕೆ ಲಕ್ಷಣ ಕಾಣುತ್ತಿದೆ. ಕೊರೋನಾ ಸೋಂಕು ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಇದರ ವೇಗ ಹಾಗೂ ರೀತಿ ನೋಡುತ್ತಿದ್ದಂತೆ ಸಮುದಾಯ ಹರಡುವಿಕೆ ಆಗಿದೆ ಏನೋ ಎಂಬಂತೆ ಭಾಸವಾಗುತ್ತಿದೆ. ಕಳೆದೊಂದು ವಾರದಿಂದ ಕೊರೋನಾ ಪಾಸಿಟಿವ್ ದೃಢವಾಗಿರುವ ಹಲವು ಕೇಸುಗಳಲ್ಲಿ ಸೋಂಕಿನ ಮೂಲ ಪತ್ತೆಯಾಗುತ್ತಿಲ್ಲ. ಸೋಂಕು ಹೊಂದಿದವರ ಟ್ರಾವೆಲ್ ಹಿಸ್ಟರಿ ಕಂಡು ಹಿಡಿಯುವುದೇ ಕಷ್ಟಸಾಧ್ಯವಾಗುತ್ತಿದೆ.
ಎಲ್ಲೆಲ್ಲಿ ಎಸಿ ಬಸ್ ಸೇವೆ ಆರಂಭ.. ?
ಇಂಥ ಸಂದರ್ಭದಲ್ಲಿ ಸಾರಿಗೆ ನಿಗಮ ರಾಜ್ಯದಾದ್ಯಂತ ಹವಾ ನಿಯಂತ್ರಿತ ಬಸ್ ಗಳ ಸೇವೆಯನ್ನು ಹಂತ ಹಂತವಾಗಿ ಆರಂಭಿಸಲು ಮುಂದಾಗಿದೆ. ಇಂದಿನಿಂದ ರಾಜ್ಯದ ವಿವಿಧ ಭಾಗಗಳಿಗೆ ಹವಾನಿಯಂತ್ರಿತ ಬಸ್ ಕಾರ್ಯಾಚರಣೆ ಆರಂಭಿಸುತ್ತಿದೆ. ಮೈಸೂರು, ಮಂಗಳೂರು, ಕುಂದಾಪುರ, ಚಿಕ್ಕಮಗಳೂರು, ಮಡಿಕೇರಿ, ದಾವಣಗೆರೆ, ಶಿವಮೊಗ್ಗ, ವಿರಾಜಪೇಟೆ ಮಾರ್ಗದ ಎಸಿ ಬಸ್ ಸೇವೆ ಆರಂಭಿಸಲಾಗಿದೆ.
ಪ್ರಯಾಣಿಕರೇ ಬೆಡ್ ತರಬೇಕು !
ಕೊರೋ ಮುಂಚೆ ರಾತ್ರಿ ಪಾಳಿಯ ಸಾರಿಗೆ ಬಸ್ ಗಳಲ್ಲಿ ಹವಾನಿಯಂತ್ರಿತ ಬಸ್ ಗಳಲ್ಲಿ ಕುಡಿಯುವ ನೀರು, ಹೊದಿಕೆ ಕೊಡುತ್ತಿದ್ದರು. ಆದರೀಗ ಸಾರಿಗೆ ನಿಗಮ ಹೊದಿಕೆ ಕೊಡುವ ಸಾಹಸ ಮಾಡುತ್ತಿಲ್ಲ. ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಹೊದಿಕೆ ಕೊಟ್ಟರೆ ಅವುಗಳ ಸ್ಯಾನಿಟೈಸ್, ಶುದ್ಧತೆ ಕೆಲಸ ಸಾರಿಗೆ ನಿಗಮ ಮಾಡುವುದು ಕಷ್ಟವಾಗುತ್ತದೆ. ಕೊರೋನಾ ಮುಂಜಾಗ್ರತಾ ಕ್ರಮವಾಗಿ ಇನ್ನು ಮುಂದೆ ಪ್ರಯಾಣಿಕರೇ ಹೊದಿಕೆ ತರುವಂತೆ ಮಾಹಿತಿ ನೀಡಿದೆ.

ಇದರಿಂದ ರಾತ್ರಿ ದೂರ ದೂರದ ತಮ್ಮೂರಿಗೆ ತೆರಳುವ ಪ್ರಯಾಣಿಕರು ಹವಾನಿಯಂತ್ರಿತ ಸಾರಿಗೆ ಸ್ಲೀಪರ್ ಬಸ್ ಗಳಲ್ಲಿ ಬರುವವರು ತಾವೇ ಹೊದಿಕೆ ತರಬೇಕು. ಸಾರಿಗೆ ನಿಗಮದ ಎಸಿ ಬಸ್ಗಳಲ್ಲಿ 24-25 ಸೆಂಟಿಗ್ರೇಡ್ ತಾಪಮಾನವಿರಲಿದೆ. ಮೊದಲೆಲ್ಲ ಹವಾಮಾನ ತಕ್ಕಂತೆ ತಾಪಮಾನ ಬದಲಾಯಿಸಬಹುದಿತ್ತು. ಆದರೆ ಕೊರೋನಾ ಮುಂಜಾಗ್ರತಾ ಕ್ರಮವಾಗಿ ಇಲ್ಲಿಯವರೆಗೆ ಬಂದ್ ಆಗಿದ್ದ ಎಸಿ ಬಸ್ ಗಳ ರಾಜ್ಯದಾದ್ಯಂತ ಕಾರ್ಯಾಚರಣೆ ಶುರುವಾಗುತ್ತಿದೆ. ಮುಂದೆ ಹಂತಹಂತವಾಗಿ ರಾಜ್ಯದೆಲ್ಲೆಡೆ ಎಸಿ ಬಸ್ ಸೇವೆ ನೀಡಲಾಗುವುದು ಎಂದು ಸಾರಿಗೆ ನಿಗಮ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ :
ಸರ್ಕಾರ ಕೈಚೆಲ್ಲಿ ಕೂತಿದೆ; ಜೀವ ಉಳಿಸಿಕೊಳ್ಳಲು ಜನರೇ ಲಾಕ್ಡೌನ್ ಮಾಡಿಕೊಳ್ಳಬೇಕು : ಕುಮಾರಸ್ವಾಮಿ
ಬೆಂಗಳೂರಿನಲ್ಲಿ ಬಿಎಂಟಿಸಿ ಎಸಿ ಬಸ್ ಗಳ ಸೇವೆ ಈಗಾಗಲೇ ಶುರುವಾಗಿದೆ. ಆದರೆ ಎಸಿ ಬಸ್ ಗಳಿಗೆ ಪ್ರಯಾಣಿಕರು ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ವೈಟ್ ಫೀಲ್ಡ್, ಹೆಚ್ ಎಸ್ ಆರ್ ಲೇ ಔಟ್ ಕಡೆ ಕೆಲ ಎಸಿ ವಾಹನಗಳಲ್ಲಿ ಶೇ.40ರಷ್ಟು ಪ್ರಯಾಣಿಕರು ಬರುತ್ತಿಲ್ಲ. ಉಳಿದೆಡೆ ಮಾರ್ಗದ ಎಸಿ ಬಸ್ ಗಳಲ್ಲಿ ಶೇ.30ರಷ್ಟು ಕಲೆಕ್ಷನ್ ಆಗುತ್ತಿಲ್ಲ.
ಇಲ್ಲಿಯವರೆಗೆ ಮಾಮೂಲಿ ಸಾರಿಗೆ ವಾಹನಗಳೇ ಪ್ರಯಾಣಿಕರಿದ್ದೇ ಖಾಲಿ ಖಾಲಿ ಹೊಡೆಯುತ್ತಿದೆ. ಕೊರೊನಾ ಹೆಚ್ಚಾಗುತ್ತಿರುವ ಇಂಥ ಸಂದರ್ಭದಲ್ಲಿ ರಾಜ್ಯದಾದ್ಯಂತ ರಾತ್ರಿ ಎಸಿ ಬಸ್ ಗಳ ಓಡಾಟ ಶುರು ಮಾಡಿದ್ದು ಇದಕ್ಕೆ ಪ್ರಯಾಣಿಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೋ?
First published:
June 25, 2020, 7:22 AM IST