HOME » NEWS » Coronavirus-latest-news » KSRTC EMPLOYEE IN PANIC BECAUSE OF HEALTH DEPARTMENT MISTAKE IN DHARWAD GNR

ಆರೋಗ್ಯ ಇಲಾಖೆ ಸಿಬ್ಬಂದಿ ಯಡವಟ್ಟು: ಕೊರೋನಾ ರಿಪೋರ್ಟ್​ ಗೊಂದಲ, ಆತಂಕದಲ್ಲಿ ಕೆಎಸ್​ಆರ್​ಟಿಸಿ ಸಿಬ್ಬಂದಿ

ಇದೀಗ ಕೋವಿಡ್​​-19 ರಿಪೋರ್ಟ್​ಗಾಗಿ ಕಾಯುತ್ತಿರುವ ವ್ಯಕ್ತಿ ಮಾತ್ರ ಸಿಬ್ಬಂದಿ ದ್ವಂದ್ವ ಹೇಳಿಕೆಯಿಂದ ಗೊಂದಲಕ್ಕೀಡಾಗಿದ್ದಾರೆ.‌ ತಾನು ಶಂಕಿತನೋ? ಸೋಂಕಿತನೋ ಅನ್ನೋ ಗೊಂದಲ ಇವರಲ್ಲಿ ಮೂಡಿದೆ.

news18-kannada
Updated:July 19, 2020, 8:56 PM IST
ಆರೋಗ್ಯ ಇಲಾಖೆ ಸಿಬ್ಬಂದಿ ಯಡವಟ್ಟು: ಕೊರೋನಾ ರಿಪೋರ್ಟ್​ ಗೊಂದಲ, ಆತಂಕದಲ್ಲಿ ಕೆಎಸ್​ಆರ್​ಟಿಸಿ ಸಿಬ್ಬಂದಿ
ಸಾಂದರ್ಭಿಕ ಚಿತ್ರ.
  • Share this:
ಧಾರವಾಡ(ಜು.19): ಕೊರೋನಾ ರಿಪೋರ್ಟ್​ ವಿಚಾರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಯಡವಟ್ಟು ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ನಗರದ ಹೆಬ್ಬಳ್ಳಿ ಅಗಸಿಯ ನಿವಾಸಿಯಾದ ಕೆಎಸ್​ಆರ್​​ಟಿಸಿ ಸಿಬ್ಬಂದಿಗೆ ರಿಪೋರ್ಟ್​ ನೀಡದೇ ಆರೋಗ್ಯ ಸಿಬ್ಬಂದಿ‌ ಯಡವಟ್ಟು ಮಾಡಿದ್ದಾರೆ. ಹೀಗಾಗಿ ಇದರಿಂದ ಕಂಗಾಲಾದ ಕೆಎಸ್​ಆರ್​ಟಿಸಿ ಸಿಬ್ಬಂದಿ ಮನೆಯಲ್ಲೇ ಕೂತಿದ್ದಾನೆ.

ತಮ್ಮದೇ ಇಲಾಖೆಯ ಸೋಂಕಿತ ಸಿಬ್ಬಂದಿಯೊಂದಿಗೆ ಇವರು ಪ್ರಥಮ ಸಂಪರ್ಕ ಹೊಂದಿದ್ದರು. ಈ ಹಿನ್ನೆಲೆ‌ಯಲ್ಲಿ ಕೊವಿಡ್ ಟೆಸ್ಟ್ ಮಾಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿಗಳು ಹೇಳಿದ್ದರು. ಅದರಂತೆ ಜು.1 ರಂದು ಸ್ವ್ಯಾಬ್ ಕೊಟ್ಟಿದ್ದ. ಬಳಿಕ ಜುಲೈ 17ಕ್ಕೆ ಇವರಿಗೆ ಕರೆ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ ನಿಮಗೆ ಪಾಸಿಟಿವ್ ಬಂದಿದೆ ಎಂದಿದ್ದರು.

ಹಾಗೆಯೇ ಆ್ಯಂಬುಲೆನ್ಸ್​ ಬರುತ್ತೆ. ಇದಕ್ಕಾಗಿ ವಿಳಾಸ ಸಹ ಕೇಳಿದ್ದರು. ಆದರೆ ಸಂಜೆಯವರೆಗೂ ಕಾದರೂ ಆ್ಯಂಬುಲೆನ್ಸ್​ ಬರಲೇ‌ ಇಲ್ಲಾ. ಸಂಜೆ ವಿಚಾರಿಸಿದಾಗ ನಿಮ್ಮ ರಿಪೋರ್ಟ್ ಬಂದಿಲ್ಲ ಎಂದು ಮೆಸೇಜ್ ಕಳುಹಿಸಿದ್ದಾರೆ ಆರೋಗ್ಯ ಇಲಾಖೆ ಸಿಬ್ಬಂದಿ.‌

ಇದೀಗ ಕೋವಿಡ್​​-19 ರಿಪೋರ್ಟ್​ಗಾಗಿ ಕಾಯುತ್ತಿರುವ ವ್ಯಕ್ತಿ ಮಾತ್ರ ಸಿಬ್ಬಂದಿ ದ್ವಂದ್ವ ಹೇಳಿಕೆಯಿಂದ ಗೊಂದಲಕ್ಕೀಡಾಗಿದ್ದಾರೆ.‌ ತಾನು ಶಂಕಿತನೋ? ಸೋಂಕಿತನೋ ಅನ್ನೋ ಗೊಂದಲ ಇವರಲ್ಲಿ ಮೂಡಿದೆ.

ಇನ್ನು, ದ್ವಂದ್ವ ಹೇಳಿಕೆಯಿಂದ ಪಾಸಿಟಿವ್ ಇದೆ ಅಂತ ಸ್ಥಳೀಯರಲ್ಲಿಯೂ ಆತಂಕ ಮೂಡಿದೆ. ಆದರೆ ಇನ್ನುವರೆಗೂ ಸ್ಪಷ್ಟತೆ ನೀಡದೆ ಗೊಂದಲದಲ್ಲಿದ್ದಾರೆ ವ್ಯಕ್ತಿ.

ಕೊರೋನಾ ಇದೆಯೋ? ಇಲ್ಲವೋ? ಎನ್ನುವ ಗೊಂದಲ ಮತ್ತು ಭಯದಲ್ಲಿ ಕುಳಿತ ವ್ಯಕ್ತಿ ಮತ್ತೆ  ಸಾಕಷ್ಟು ವಿಚಾರಿಸಿದ ಬಳಿಕ ಆಶಾ ಕಾರ್ಯಕರ್ತೆಯರು ನಿನ್ನೆ ಮನೆಗೆ ಭೇಟಿ ನೀಡಿ ಹೋಮ್ ಕ್ವಾರೈಂಟನ್ ಸೀಲ್ ಹಾಕಿದ್ದಾರೆ.
Youtube Video
ಇದನ್ನೂ ಓದಿ: Coronavirus Updates: ಕರ್ನಾಟಕದಲ್ಲಿ ಕೋವಿಡ್​​-19 ಕಾವು: ಇಂದು 4,120 ಹೊಸ ಕೇಸ್​​, 63 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಸದ್ಯ ಕೊರೋನಾ ಇದೆ ಎಂದು ಅಕ್ಕಪಕ್ಕದವರಿಗೂ ಆತಂಕ ಮೂಡಿದ್ದು, ದಯಮಾಡಿ ಆತಂಕ ದೂರಮಾಡಿ ಅಂತಾ ತಾನೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳ ಹರಿಬಿಟ್ಟು ಮನವಿ ಮಾಡಿದ್ದಾರೆ.
Published by: Ganesh Nachikethu
First published: July 19, 2020, 8:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories