HOME » NEWS » Coronavirus-latest-news » KSRTC BUS TRANSPORTATION WILL STARTS FROM MAY 4TH GNR

ಮೇ 4ರಿಂದ KSRTC ಬಸ್ ಸಂಚಾರ ಆರಂಭ - ಸಾರಿಗೆ ಸಚಿವ ಲಕ್ಷ್ಮಣ ಸವದಿ

ರಾಜ್ಯದ ವಿವಿಧ ಭಾಗಗಳಲ್ಲಿ ಸಿಕ್ಕಿಕೊಂಡಿರುವ ವಲಸಿಗ ಕಾರ್ಮಿಕರನ್ನು ತಮ್ಮ ಜಿಲ್ಲೆಗಳಿಗೆ ಕಳಿಸಲು ವಿಶೇಷ ಬಸ್​ ವ್ಯವಸ್ಥೆ ಮಾಡಲಾಗಿದೆ. ಈ ವೇಳೆ ಸಾಮಾಜಿಕ ಅಂತರ ಕಡ್ಡಯ ಪಾಲಿಸುವಂತೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.

news18-kannada
Updated:May 2, 2020, 8:49 PM IST
ಮೇ 4ರಿಂದ KSRTC ಬಸ್ ಸಂಚಾರ ಆರಂಭ - ಸಾರಿಗೆ ಸಚಿವ ಲಕ್ಷ್ಮಣ ಸವದಿ
ಡಿಸಿಎಂ ಲಕ್ಷ್ಮಣ ಸವದಿ.
  • Share this:
ಬೆಂಗಳೂರು(ಮೇ.02): ಮೇ 4ನೇ ತಾರೀಕಿನಿಂದ ರಾಜ್ಯಾದ್ಯಂತ ಕೆಎಸ್​​ಆರ್​​ಟಿಸಿ ಬಸ್​ ಸಂಚಾರ ಶುರುವಾಗಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.  ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕಂಟೇನ್ಮೆಂಟ್ ಮತ್ತು ರೆಡ್ ಜೋನ್​​​ ತಾಲೂಕುಗಳನ್ನು ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲೂ ಬಸ್​​ ಸಂಚಾರ ಆರಂಭಿಸಲು ಸಿಎಂ ಸಮ್ಮತಿ ನೀಡಿದ್ದಾರೆ ಎಂದರು.

ಸಂವಹನ ಕೊರತೆಯಿಂದಾಗಿ ಕೆಎಸ್​​ಆರ್​​ಟಿಸಿ ದುಪ್ಪಟ್ಟು ದರ ತೆಗೆದುಕೊಂಡಿದೆ. ಪ್ರಯಾಣಿಕರ ಜನರ ಹಿತದೃಷ್ಟಿಯಿಂದ ಈಗ ಒಂದೆಡೆ ದರ ಮಾತ್ರ ತೆಗೆದುಕೊಂಡು ಕಳಿಸುವಂತೆ ಆದೇಶಿಸಿದ್ದೇನೆ. ಈ ಬಗ್ಗೆ ಯಾವುದೇ ಗೊಂಡಲ ಬೇಡ ಎಂದರು.

ಹೀಗೆ ಮುಂದುವರೆದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ರಾಜ್ಯ ಸರ್ಕಾರ ಈಗಾಗಲೇ ಹಾಟ್​​​ಸ್ಪಾಟ್​​ಗಳನ್ನು ಗುರುತಿಸಿದೆ. ಕೊರೋನಾ ವೈರಸ್​​ ಇರುವ ತಾಲೂಕುಗಳಲ್ಲಿ ಮುಂದಿನ ಆದೇಶ ನೀಡುವವರೆಗೂ ಬಸ್​​ ಸಂಚಾರ ಇರುವುದಿಲ್ಲ. ಉಳಿದಂತೆ ಮೇ 4ರಿಂದ ಕೆಎಸ್​​ಆರ್​​ಟಿಸಿ ಬಸ್​ ಸಂಚಾರ ಶುರುವಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿಂದು 12 ಕೊರೋನಾ ಕೇಸ್​ ಪತ್ತೆ: ಒಟ್ಟು 25 ಮಂದಿ ಸಾವು, ಸೋಂಕಿತರ ಸಂಖ್ಯೆ 601ಕ್ಕೆ ಏರಿಕೆ​​

ರಾಜ್ಯದ ವಿವಿಧ ಭಾಗಗಳಲ್ಲಿ ಸಿಕ್ಕಿಕೊಂಡಿರುವ ವಲಸಿಗ ಕಾರ್ಮಿಕರನ್ನು ತಮ್ಮ ಜಿಲ್ಲೆಗಳಿಗೆ ಕಳಿಸಲು ವಿಶೇಷ ಬಸ್​ ವ್ಯವಸ್ಥೆ ಮಾಡಲಾಗಿದೆ. ಈ ವೇಳೆ ಸಾಮಾಜಿಕ ಅಂತರ ಕಡ್ಡಯ ಪಾಲಿಸುವಂತೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.
Youtube Video
First published: May 2, 2020, 8:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories