3 ದಿನ ಸರಣಿ ರಜೆ: ಬೆಂಗಳೂರಿನಲ್ಲಿ ಶನಿವಾರ ಭಣಗುಡುತ್ತಿದೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ

ಇವತ್ತು ರಾಜ್ಯಾದ್ಯಂತ 3 ಸಾವಿರ ಬಸ್ಸುಗಳು ಓಡಾಡುತ್ತಿವೆ. ಬೆಂಗಳೂರಿನಿಂದಲೇ 900 ಬಸ್ಸುಗಳು ವಿವಿಧ ಜಿಲ್ಲೆಗಳಿಗೆ ಸಂಚರಿಸುತ್ತಿವೆ.

news18-kannada
Updated:May 23, 2020, 9:32 AM IST
3 ದಿನ ಸರಣಿ ರಜೆ: ಬೆಂಗಳೂರಿನಲ್ಲಿ ಶನಿವಾರ ಭಣಗುಡುತ್ತಿದೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ
ಕೆಎಸ್​ಆರ್​ಟಿಸಿ
  • Share this:
ಬೆಂಗಳೂರು(ಮೇ 23): ಇವತ್ತೂ ರಾಜ್ಯದ ವಿವಿಧೆಡೆ ಬಸ್ ಸಂಚಾರ ಮುಂದುರಿದಿದೆ. ಆದರೆ, ಬೆಂಗಳೂರಿನಲ್ಲಿ ಬಹುತೇಕ ಬಸ್ಸುಗಳು ಖಾಲಿ ಓಡುತ್ತಿವೆ. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಬಸ್ ಸಂಚಾರ ಪುನಾರಂಭಗೊಂಡ ನಂತರ ಪ್ರಯಾಣಿಕರ ಸಂಖ್ಯೆ ಅತಿ ಕಡಿಮೆ ಇರುವುದು ಇವತ್ತೇ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ಧಾರೆ.

ನಾಳೆ ಭಾನುವಾರ ಸಂಪೂರ್ಣ ಲಾಕ್​ಡೌನ್ ಇರುವುದರ ಎಫೆಕ್ಟ್ ಇದು. ಜೊತೆಗೆ, ಇವತ್ತಿನಿಂದ ಮೂರು ದಿನ ಸರಣಿ ರಜೆ ಇದೆ. ಇವತ್ತು ಎರಡನೇ ಶನಿವಾರದ ರಜೆ, ನಾಳೆ ಭಾನುವಾರ, ನಾಡಿದ್ದು ಸೋಮವಾರ ರಂಜಾನ್ ಪ್ರಯುಕ್ತ ರಜೆ ಇದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಬರುತ್ತಿಲ್ಲ. ಮುಂಜಾನೆಯಿಂದಲೂ ಬಸ್ ನಿಲ್ದಾಣದ ಪ್ಲಾಟ್​ಫಾರಂಗಳು ಖಾಲಿ ಇವೆ. ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೆ ಹೋಗುವವರು ಬಹುತೇಕ ಇಲ್ಲದಂತಿದ್ದಾರೆ.

ಲಾಕ್ ಡೌನ್ ನಿಯಮಾವಳಿ ಸಡಿಲಿಸಿದ ಬಳಿಕ ಕೆಎಸ್ಸಾರ್ಟಿಸಿ ಬಸ್ಸುಗಳನ್ನು ಬೆಳಗ್ಗೆ 7ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಓಡಿಸಲಾಗುತ್ತಿದೆ. ಭಾನುವಾರ ಮಾತ್ರ ಕಟ್ಟುನಿಟ್ಟಾಗಿ ಲಾಕ್ ಡೌನ್ ನಿಯಮ ಜಾರಿಯಲ್ಲಿದ್ದು, ಅಂದು ಯಾವುದೇ ಬಸ್ ಸಂಚಾರ ಇರುವುದಿಲ್ಲ. ಅಂದರೆ ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ಬಸ್ ಸೇವೆ ಸ್ಥಗಿತಗೊಂಡಿರುತ್ತದೆ.

ಇದನ್ನೂ ಓದಿ: Biggest Banyan Tree - ವಿಶ್ವದ ಅತಿದೊಡ್ಡ ಆಲದ ಮರಕ್ಕೆ ಚಂಡಮಾರುತದಿಂದ ಧಕ್ಕೆ

ಇವತ್ತು ರಾಜ್ಯಾದ್ಯಂತ 3 ಸಾವಿರ ಬಸ್ಸುಗಳು ಓಡಾಡುತ್ತಿವೆ. ಬೆಂಗಳೂರಿನಿಂದಲೇ 900 ಬಸ್ಸುಗಳು ವಿವಿಧ ಜಿಲ್ಲೆಗಳಿಗೆ ಸಂಚರಿಸುತ್ತಿವೆ. ಆದರೆ, ಪ್ರಯಾಣಿಕರ ಕೊರತೆ ಇರುವುದರಿಂದ ಕೆಎಸ್ಸಾರ್ಟಿಸಿಗೆ ಇವತ್ತು ನಷ್ಟದ ದಿನವಾಗಬಹುದು.JavascriptFirst published: May 23, 2020, 9:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading