ನಾಳೆಯಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ; ಪಾಸ್​ ಇದ್ದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ

ಮೊದಲ ಹಂತವಾಗಿ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಕಂಟೇನ್ಮೆಂಟ್​ ಜೋನ್​ಗಳನ್ನು ಹೊರತುಪಡಿಸಿ ಪ್ರಯಾಣಿಕರ ದಟ್ಟಣೆ ಇರುವ ಮಾರ್ಗಗಳಲ್ಲಿ ಬಸ್​ಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಬಿಎಂಟಿಸಿ ಬಸ್

ಬಿಎಂಟಿಸಿ ಬಸ್

 • Share this:
  ಬೆಂಗಳೂರು (ಮೇ 18): ಕೊರೋನಾ ವೈರಸ್​ ಅಟ್ಟಹಾಸ ಹೆಚ್ಚಾಗಿರುವುದರಿಂದ ದೇಶದೆಲ್ಲೆಡೆ ಮೇ 31ರವರೆಗೆ ಲಾಕ್​ಡೌನ್​ ವಿಸ್ತರಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಲಾಕ್​ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, ನಾಳೆಯಿಂದ ಬಸ್​ಗಳು, ಕ್ಯಾಬ್, ಆಟೋ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

  ಬೆಂಗಳೂರಿನಲ್ಲಿ ನಾಳೆಯಿಂದ ಬಿಎಂಟಿಸಿ ಬಸ್​ಗಳ ಸಂಚಾರ ಶುರುವಾಗಲಿದೆ. ಒಂದು ಬಸ್​ನಲ್ಲಿ 30 ಜನರಿಗೆ ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಬಸ್​ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ದೃಷ್ಟಿಯಿಂದ ಈ ನಿಯಮ ಜಾರಿಗೊಳಿಸಲಾಗಿದೆ. ಬಿಎಂಟಿಸಿ ಬಸ್​ನಲ್ಲಿ ಸಂಚರಿಸಲು ಏಕಬೆಲೆಯ ಪಾಸ್​ಗಳನ್ನು ವಿತರಿಸಲಾಗುತ್ತದೆ. ಆ ಪಾಸ್​ಗಳನ್ನು ಹೊಂದಿವರಿಗೆ ಮಾತ್ರ ಬಸ್​ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ. ಬಸ್​ನಲ್ಲಿ ಟಿಕೆಟ್ ವಿತರಣೆ ಮಾಡುವುದರಿಂದ ಕೊರೋನಾ ಹರಡುವ ಅಪಾಯ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಮಾಡಲಾಗಿದೆ.

  ಇದನ್ನೂ ಓದಿ: ಬಿಎಂಟಿಸಿ ಸಿಬ್ಬಂದಿ ಕೊರೋನಾ ಪಿಡುಗಿನಿಂದ ಮೃತಪಟ್ಟರೆ 30 ಲಕ್ಷ ಪರಿಹಾರ; ಡಿಸಿಎಂ ಲಕ್ಷ್ಮಣ ಸವದಿ ಘೋಷಣೆ

  ದಿನದ ಪಾಸ್​, ವಾರದ ಪಾಸ್​, ತಿಂಗಳ ಪಾಸ್​ ಇರುವವರಿಗೆ ಮಾತ್ರ ಬಸ್​ಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ 300 ರೂ. ಮುಖಬೆಲೆಯ ಬಿಎಂಟಿಸಿ ಪಾಸ್​ಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ. ಈ ಪಾಸ್​ ಪಡೆದರೆ ವಾರ ಪೂರ್ತಿ ಬಿಎಂಟಿಸಿ ಬಸ್​ಗಳಲ್ಲಿ ಓಡಾಟ ಮಾಡಬಹುದು. ಸಮರ್ಪಕ ಮತ್ತು ಸುರಕ್ಷಿತ ಸಾರಿಗೆ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸುವ ಮತ್ತು ಕೊರೋನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

  ಬಿಎಂಟಿಸಿ ವಾರದ ಪಾಸ್​


  ಇದನ್ನೂ ಓದಿ: ನಾಳೆಯಿಂದ ಬಸ್ ಸಂಚಾರ ಆರಂಭ; ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್, ಗುರುತಿನ ಚೀಟಿ ಕಡ್ಡಾಯ

  ಮೊದಲ ಹಂತವಾಗಿ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಕಂಟೇನ್ಮೆಂಟ್​ ಜೋನ್​ಗಳನ್ನು ಹೊರತುಪಡಿಸಿ ಪ್ರಯಾಣಿಕರ ದಟ್ಟಣೆ ಇರುವ ಮಾರ್ಗಗಳಲ್ಲಿ ಬಸ್​ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ರಾತ್ರಿ ರಾಜ್ಯಾದ್ಯಂತ ಕರ್ಫ್ಯೂ ಇರುವುದರಿಂದ ಬೆಳಗ್ಗೆ 7 ಗಂಟೆಯಿಂದ ಸಂಜೆ 7ರವರೆಗೆ ಮಾತ್ರ ಬಸ್​ಗಳು ಸಂಚರಿಸಲಿವೆ. 300 ರೂ. ಮುಖಬೆಲೆಯ ವಾರದ ಪಾಸ್​ಗಳನ್ನು ಪಡೆಯಲು ಭಾವಚಿತ್ರ ಇರುವ ಯಾವುದಾದರೂ ಗುರುತಿನ ಚೀಟಿಯನ್ನು ನೀಡಬೇಕು. ಪಾಸುಗಳನ್ನು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಬಸ್​ ನಿಲ್ದಾಣಗಳಲ್ಲಿ ವಿತರಿಸಲಾಗುತ್ತದೆ.

  ಬಸ್​ನಲ್ಲಿ ಪ್ರಯಾಣದ ಕ್ರಮಗಳು:

  • ಒಂದು ಬಸ್ ನಲ್ಲಿ ಕೇವಲ 30 ಪ್ರಯಾಣಿಕರು ಮಾತ್ರ ಇರಬೇಕು.

  • ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ.

  • ಮಾಸ್ಕ್ ಇಲ್ಲದೆ ಬಸ್ ಹತ್ತುವಂತಿಲ್ಲ.

  • ಬಸ್ಸಿನಲ್ಲಿ ಸಾಮಾಜಿಕ ಅಂತರ ಕಡ್ಡಾಯ.

  • ಬಸ್ ನಿಲ್ದಾಣಗಳಲ್ಲಿ ಮಾತ್ರ ಪ್ರಯಾಣಿಕರು ಹತ್ತಬೇಕು.

  • ಎಸಿ ಬಸ್ ಸಂಚಾರ ಸ್ಥಗಿತ.

  • ಭಾನುವಾರ ಕೆಎಸ್​ಆರ್​ಟಿಸಿ ಬಸ್ ಸಂಚಾರ ಸ್ಥಗಿತ.

  • ಪ್ರಯಾಣಿಕರು ಗುರುತಿನ ಚೀಟಿ ಸಮೇತ ಬರುವಂತೆ ಸೂಚನೆ.


  First published: