ಸಕ್ಕರೆನಾಡಲ್ಲಿ ಕೊರೋನಾ ವಾರಿಯರ್ಸ್​ಗೂ ವಕ್ಕರಿಸಿದ ಸೋಂಕು; ಕೆ.ಆರ್.ಪೇಟೆಯಲ್ಲಿ 2 ಪೊಲೀಸ್ ಠಾಣೆ, ಮಳವಳ್ಳಿ ಸಿಡಿಪಿಒ ಕಚೇರಿ ಸೀಲ್ಡೌನ್

ಒಟ್ಟಾರೆ ಸಕ್ಕರೆನಾಡು ಮಂಡ್ಯದಲ್ಲಿ ರಣಕೇಕೆ  ಹಾಕುತ್ತಿರುವ ಕೊರೋನಾ ಸೋಂಕು ಇದೀಗ ಕೊರೋನಾ ವಾರಿಯರ್ಸ್​ಗೂ ಹಬ್ಬುವ ಮೂಲಕ ಮತ್ತಷ್ಟು ತನ್ನ ಕರಾಳ ಮುಖವನ್ನು ಪ್ರದರ್ಶಿಸಿದೆ. ಒಂದು ಕಡೆ ಮುಂಬೈ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಸಿಗದೆ ಏರಿಕೆಯಾಗುತ್ತಿದ್ದರೆ ಇತ್ತ ಕೊರೋನಾ ವಾರಿಯರ್ಸ್​ಗೂ ಸೋಂಕು ಹರಡುತ್ತಿರುವುದು ಜಿಲ್ಲಾಡಳಿತ ಮತ್ತು ಜನರ ಆತಂಕಕ್ಕೆ ಕಾರಣವಾಗಿದೆ. 

ಸೀಲ್​ಡೌನ್​ ಮಾಡಲಾದ ಕೆ.ಆರ್.ಪೇಟೆ ಪೊಲೀಸ್ ಠಾಣೆ.

ಸೀಲ್​ಡೌನ್​ ಮಾಡಲಾದ ಕೆ.ಆರ್.ಪೇಟೆ ಪೊಲೀಸ್ ಠಾಣೆ.

  • Share this:
ಮಂಡ್ಯ: ಸಕ್ಕರೆ ನಾಡು‌ ಮಂಡ್ಯದಲ್ಲಿ ಕೊರೋನಾ  ಇದೀಗ ಸಮುದಾಯಕ್ಕೂ ಹರಡುವ ಆತಂಕ ಎದುರಾಗಿದೆ. ಇದುವರೆಗೂ ತಬ್ಲಿಘಿ, ಮುಂಬೈ, ಜ್ಯುಬಿಲಿಯಂಟ್ ಸೋಂಕಿನಿಂದ ಹರಡುತ್ತಿದ್ದ ಸೋಂಕು ಇದೀಗ ಕೊರೋನಾ ವಾರಿಯರ್ಸ್​ಗೂ ಅಂಟಿದೆ. ಕೊರೋನಾ ವಾರಿಯರ್ಸ್​ಗಳಿಗೆ ಸೋಂಕು ಹರಡುತ್ತಿರುವುದು ಇದೀಗ ಜಿಲ್ಲಾಡತದ ಆತಂಕಕ್ಕೆ ಕಾರಣವಾಗಿದೆ.

ನೆನ್ನೆ ಸರ್ಕಾರಿ ನೌಕರರಾದ ಮಳವಳ್ಳಿ ತಾಲೂಕಿನ ಸಿಡಿಪಿಒ ಮತ್ತು ಕೆ.ಆರ್.ಪೇಟೆಯ ಪೊಲೀಸ್ ಕಾನ್ಸ್​ಟೇಬಲ್​ಗೆ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಮಳವಳ್ಳಿ ಸಿಡಿಪಿಒ ಕಚೇರಿ ಮತ್ತು ಕೆ.ಆರ್.ಪೇಟೆಯ ಎರಡು ಪೊಲೀಸ್ ಠಾಣೆ ಸೀಲ್​ಡೌನ್​ ಮಾಡಲಾಗಿದೆ. ಈಗ ಈ ವಾರಿಯರ್ಸ್ ಜೊತೆ ಸಂಪರ್ಕದಲ್ಲಿದ್ದವರಿಗೂ ಆತಂಕ ತಂದಿದೆ.

ಮಳವಳ್ಳಿ ತಾಲೂಕಿನ ಸಿಡಿಪಿಒ ಗೆ ಸೋಂಕು ದೃಢವಾಗುತ್ತಿದಂತೆ ಇಡೀ ತಾಲೂಕು ಆಡಳಿತ ಬೆಚ್ಚಿ ಬಿದ್ದಿದೆ. ಇಡೀ ತಾಲೂಕು ಆಡಳಿತದ ಅಧಿಕಾರಿಗಳಿಗೆ ಆತಂಕ ಶುರುವಾಗಿದೆ. ಈಗಾಗಲೇ ಸಿಡಿಪಿಒ ಕಚೇರಿಗೆ ಬರಲು ಸಿಬ್ಬಂದಿಗಳು ಹಿಂದೇಟು‌ ಹಾಕುತ್ತಿದ್ದಾರೆ. ಕಚೇರಿಯನ್ನು ಸೀಲ್​ಡೌನ್​ ಮಾಡಿ ಸ್ಯಾನಿಟೇಜ್ ಮಾಡಲಾಗುತ್ತಿದೆ. ಮತ್ತೊಂದು ಕಡೆ ಅಧಿಕಾರಿಗಳು ಆತಂಕದಿಂದ ಸ್ವತಃ ಕೊವೀಡ್ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಸೋಂಕಿತ ಪಿಡಿಒನ ಟ್ರಾವೆಲ್ ಹಿಸ್ಟ್ರಿ ಜಿಲ್ಕಾಡಳಿತಕ್ಕೆ ಆತಂಕ ತಂದಿದ್ದು, ಈ ಸೋಂಕಿತ ಅಧಿಕಾರಿಯಿಂದ ಬರೋಬ್ಬರಿ ಸಾವಿರ ಜನರು ಕ್ವಾರೆಂಟೈನ್ ಮಾಡಬೇಕಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಕೆ.ಆರ್.ಪೇಟೆ ಪಟ್ಟಣದ ಮುಖ್ಯಪೇದೆಗೂ ಕೊರೋನಾ ಸೋಂಕು ದೃಢವಾಗಿದ್ದು, ಇಡೀ ಪೊಲೀಸ್ ಇಲಾಖೆಯೇ ಬೆಚ್ಚಿ ಬಿದ್ದಿದ್ದೆ‌‌. ಈಗಾಗಲೇ  ಕೆ.ಆರ್.ಪೇಟೆ ಪಟ್ಟಣ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಿ ಜಿಲ್ಲಾ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ. ತಡರಾತ್ರಿಯೇ ಎಸ್ಪಿ ಕೆ.ಆರ್.ಪೇಟೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಎರಡು ಠಾಣೆಯನ್ನು ಸೀಲ್ ಡೌನ್ ಮಾಡಿಸಿದ್ದಾರೆ. ಅಲ್ಲದೇ ತಾಲೂಕಿನ‌ ಎಲ್ಲಾ ಪೊಲೀಸರಿಗೂ ಕೊವೀಡ್ ಟೆಸ್ಟ್ ಮಾಡಿಸಲು ಸೂಚನೆ ನೀಡಿ, ಕಿಕ್ಕೇರಿ ಠಾಣೆಗೆ ಈ ಎರಡು ಠಾಣೆಯ ಕಾರ್ಯಭಾರವನ್ನು ವರ್ಗಾಯಿಸಿ 30 ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ.

ಈ  ಸೋಂಕಿತ ಕಾನ್ಸ್​ಟೇಬಲ್ ಟ್ರಾವಲ್ ಹಿಸ್ಟರಿ ಬಗ್ಗೆ ಆರೋಗ್ಯಾಧಿಕಾರಿಗಳು ವಿಚಾರಣೆ ನಡೆಸಿ ಪರಿಶೀಲಿಸುತ್ತಿದ್ದಾರೆ. ಈ ಪೇದೆ ಸಾರ್ವಜನಿಕರು ಮತ್ತು ಅಧಿಕಾರಗಳ  ಜೊತೆ ಸಂಪರ್ಕದಲ್ಲಿರುವ ಕಾರಣಕ್ಕೆ ನೂರಾರು ಜನರು ಕ್ವಾರೆಂಟೈನ್ ಮಾಡುವ ಬಗ್ಗೆ  ಚಿಂತನೆ ನಡೆಸಲಾಗುತ್ತಿದ್ದು, ಇದು ಕೂಡ ಸಮುದಾಯದ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಇದನ್ನು ಓದಿ: ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ; ಸೈಕಲ್ ಉಚಿತ ವಿತರಣೆ ನಿಲ್ಲಿಸುವುದು ಬೇಡ ಎಂದ ಸಿಎಂ ಬಿಎಸ್​ವೈ

ಒಟ್ಟಾರೆ ಸಕ್ಕರೆನಾಡು ಮಂಡ್ಯದಲ್ಲಿ ರಣಕೇಕೆ  ಹಾಕುತ್ತಿರುವ ಕೊರೋನಾ ಸೋಂಕು ಇದೀಗ ಕೊರೋನಾ ವಾರಿಯರ್ಸ್​ಗೂ ಹಬ್ಬುವ ಮೂಲಕ ಮತ್ತಷ್ಟು ತನ್ನ ಕರಾಳ ಮುಖವನ್ನು ಪ್ರದರ್ಶಿಸಿದೆ. ಒಂದು ಕಡೆ ಮುಂಬೈ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಸಿಗದೆ ಏರಿಕೆಯಾಗುತ್ತಿದ್ದರೆ ಇತ್ತ ಕೊರೋನಾ ವಾರಿಯರ್ಸ್​ಗೂ ಸೋಂಕು ಹರಡುತ್ತಿರುವುದು ಜಿಲ್ಲಾಡಳಿತ ಮತ್ತು ಜನರ ಆತಂಕಕ್ಕೆ ಕಾರಣವಾಗಿದೆ.
First published: