Rahul Gandhi: ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೋವಿಡ್-19 ಉತ್ತಮ ನಿರ್ವಹಣೆ: ರಾಹುಲ್ ಗಾಂಧಿ

ಕೊರೋನಾ ಸಂಕಷ್ಟ ನಿರ್ವಹಣೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಉತ್ತರ ಭಾರತಕ್ಕೆ ಹೋಲಿಸಿಕೊಂಡರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ವಿಕೇಂದ್ರೀಕರಣ ವ್ಯವಸ್ಥೆ ಇದೆ. ಅಲ್ಲದೆ ದಕ್ಷಿಣ ಭಾರತದ ಜನರಲ್ಲಿ ಯಾವುದಕ್ಕೆ ಹೇಗೆ ಸ್ಪಂದಿಸಬೇಕು ಎಂಬ ಯೋಚಿಸುವ ಶಕ್ತಿ ಇದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

  • Share this:
ನವದೆಹಲಿ: ಕಂಡುಕೇಳರಿಯದ ಕೊರೋನಾ ಮಹಾಮಾರಿಯ ಎಡೆಮುರಿ ಕಟ್ಟುವುದರಲ್ಲಿ ದಕ್ಷಿಣ ಭಾರತದ ರಾಜ್ಯಗಳು ಉತ್ತಮವಾಗಿ ಕೆಲಸ ಮಾಡಿವೆ ಎಂದು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರೂ ಸಂಸದರೂ ಆದ ರಾಹುಲ್ ಗಾಂಧಿ ವ್ಯಾಖ್ಯಾನಿಸಿದ್ದಾರೆ.

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ಭಾರತದಲ್ಲಿ ಪತ್ತೆಯಾಗಿದ್ದೇ ದಕ್ಷಿಣ ಭಾರತದ ರಾಜ್ಯವಾದ ಕೇರಳದಲ್ಲಿ. ಅಷ್ಟೇ ಅಲ್ಲ, ಇಡೀ ದೇಶದಲ್ಲಿ ಕೊರೋನಾ ಮಹಾಮಾರಿಯಿಂದ ಸಾವು ಸಂಭವಿಸಿದ್ದು ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದಲ್ಲಿ. ಆದರೆ ಆ ನಂತರ ಎರಡೂ ರಾಜ್ಯಗಳ ನಿರ್ವಹಣೆ ಉತ್ತಮವಾಗಿರುವುದರಿಂದ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿದೆ. ಇದೇ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಕ್ಷಿಣ ಭಾರತದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.

ಕೊರೋನಾ ಸಂಕಷ್ಟ ನಿರ್ವಹಣೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಉತ್ತರ ಭಾರತಕ್ಕೆ ಹೋಲಿಸಿಕೊಂಡರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ವಿಕೇಂದ್ರೀಕರಣ ವ್ಯವಸ್ಥೆ ಇದೆ. ಅಲ್ಲದೆ ದಕ್ಷಿಣ ಭಾರತದ ಜನರಲ್ಲಿ ಯಾವುದಕ್ಕೆ ಹೇಗೆ ಸ್ಪಂದಿಸಬೇಕು ಎಂಬ ಯೋಚಿಸುವ ಶಕ್ತಿ ಇದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಸಂದರ್ಶನ ನಡೆಸುವ ವಿಡಿಯೋ ಸರಣಿ ಆರಂಭಿಸಿದ್ದಾರೆ. ಸರಣಿಯ ಮೊದಲ ಸಂದರ್ಶನವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗೌವರ್ನರ್ ಡಾ. ರಘುರಾಮ್ ರಾಜನ್ ಜೊತೆ ನಡೆಸಿದ್ದರು. ಅವರೊಂದಿಗೆ ಕೋವಿಡ್ 19 ಮತ್ತು ಲಾಕ್ಡೌನ್ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕೆಂದು ರಘುರಾಮ್ ರಾಜನ್ ಜೊತೆ ಸಮಾಲೋಚನೆ ನಡೆಸುತ್ತಿದ್ದರು‌.‌ ಈ ವೇಳೆ ರಾಹುಲ್ ಗಾಂಧಿ ದಕ್ಷಿಣ ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: Rahul Gandhi: ಆರ್ಥಿಕ ತಜ್ಞರೊಂದಿಗೆ ವಿಡಿಯೋ ಸರಣಿ; ರಘುರಾಮ್ ರಾಜನ್​ ಜೊತೆ ಇಂದು ರಾಹುಲ್ ಗಾಂಧಿ ಸಂವಾದ

ಅಂದಹಾಗೆ ರಾಹುಲ್ ಗಾಂಧಿ ಈಗ ಕೇರಳದ ವಯ್ನಾಡಿನ ಸಂಸದರು. ಹಾಗೆಂದ ಮಾತ್ರಕ್ಕೆ ಅವರು ದಕ್ಷಿಣ ಭಾರತವನ್ನು ಮೆಚ್ಚಿಸಲು ಈ ರೀತಿ ಮಾತನಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಅವರು ಹಲವು ಬಾರಿ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ ಉದಾಹರಣೆ ಇದೆ. ಈ ವಿಷಯದಲ್ಲಿ ಅವರು ಇತರೆ ರಾಜಕಾರಣಿಗಳಂತೆ ಅಲ್ಲ. ಮೋದಿ, ರಾಷ್ಟ್ರಪತಿ ಮತ್ತು ಪಿಎಂಓ‌ ಕಚೇರಿಯ ಟ್ವೀಟರ್ ಖಾತೆಗಳನ್ನು ಅಮೆರಿಕದ ಶ್ವೇತಭವನ ಅನ್ ಫಾಲೋ ಮಾಡಿದಾಗ ರಾಹುಲ್ ಗಾಂಧಿ ಭಾರತದ ಪರ, ಮೋದಿ ಪರ ನಿಲುವು ವ್ಯಕ್ತಪಡಿಸಿ ಅಮೆರಿಕಾ ನಡೆಯನ್ನು ಖಂಡಿಸಿದ್ದರು.
First published: