ರಾಜ್ಯದಲ್ಲಿ ಎರಡನೇ ಅಲೆ ಕೊರೋನಾ ಸೋಂಕು ಗಣನೀಯವಾಗಿ ಇಳಿಕೆ ಕಂಡಿದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ 2ಕ್ಕಿಂತ ಕಡಿಮೆಯಾಗಿದ್ದು, ಸರ್ಕಾರ ನಿಧಾನವಾಗಿ ಲಾಕ್ಡೌನ್ ನಿಯಮ ಸಡಿಲಿಕೆಗೆ ಮುಂದಾಗಿದೆ. ಇದೇ ವೇಳೆ ಲಾಕ್ಡೌನ್ನಿಂದ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿರುವ ದೇವಾಲಯಗಳ ಪ್ರವೇಶಕ್ಕೆ ಅನುಮತಿ ನೀಡುವಂತೆ ಒತ್ತಡ ಕೂಡ ಹೆಚ್ಚಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜನರು ದೇವಾಲಯ ತೆರೆದು ದೇವರ ದರ್ಶನ ಪಡೆಯಬೇಕು ಎಂದು ಕಾತರದಲ್ಲಿದ್ದಾರೆ. ಆದರೆ ತಜ್ಞರು ಒಂದೇ ಸಲ ನೂರಾರು ಜನರಿಗೆ ದರ್ಶನಕ್ಕೆ ಅವಕಾಶ ನೀಡಿದರೆ ಸಮಸ್ಯೆಯಾಗುತ್ತದೆ ಎಂದಿದ್ದಾರೆ. ಈ ಹಿನ್ನಲೆ ಈಗಲೇ ಈ ಕುರಿತು ಚಿಂತನೆ ನಡೆಸಿಲ್ಲ ಎಂದಿದ್ದಾರೆ.
ಧಾರ್ಮಿಕ ಕ್ಷೇತ್ರಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿದರೆ, ಜನದಟ್ಟಣೆ ಹೆಚ್ಚಾಲಿದೆ. ಸೋಂಕು ಇಳಿಕೆ ಕಂಡರು, ನಿವಾರಣೆಯಾಗಿಲ್ಲ. ಈಗಾಗಲೇ ಮೂರನೇ ಅಲೆ ಸೋಂಕಿನ ಬಗ್ಗೆ ಕೂಡ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಈ ಹಿನ್ನಲೆ ಜನ ದಟ್ಟಣೆಗೆ ಕಡಿವಾಣ ಹಾಕಬೇಕಾಗಿರುವುದು ಅನಿವಾರ್ಯ. ಇದು ಆರೋಗ್ಯ ಇಲಾಖೆಯ ತಜ್ಞರು ನೀಡಿರುವ ಅಭಿಪ್ರಾಯ. ಇದರಂತೆ ನಾವು ಕೂಡ ಕಾರ್ಯನಿರ್ವಹಿಸಬೇಕಿದೆ ಎಂದರು.
ಸೋಂಕಿನ ಪ್ರಮಾಣ ಇಳಿಕೆ ಕಂಡಿರುವ ಹಿನ್ನಲೆ ಜುಲೈ 5ರ ಬಳಿಕ ಲಾಕ್ ಡೌನ್ ನಿಯಮ ಮತ್ತಷ್ಟು ಸಡಿಲಿಕೆ ಆಗಲಿದೆ. ಕರೋನಾ ನಿಯಮಾವಳಿಗಳನ್ನು ಪಾಲಿಸುತ್ತಾ ದೇವಾಲಯ ಪ್ರವೇಶ ಮತ್ತು ಯಕ್ಷಗಾನ ಆರಂಭದ ಬಗ್ಗೆ ಚಿಂತಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.
ಇದನ್ನು ಓದಿ: ಜು. 19ರಿಂದ ಮುಂಗಾರು ಅಧಿವೇಶನ ಆರಂಭ ಸಾಧ್ಯತೆ
ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ನಿಯಮಗಳಿಂದಾಗಿ ಸೋಂಕು ಹತೋಟಿಗೆ ತರುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿರುವ ಹಿನ್ನಲೆ ಸರ್ಕಾರ ಇಂದಿನಿಂದ ಮತ್ತಷ್ಟು ಲಾಕ್ಡೌನ್ ನಿಯಮ ಸಡಿಲಿಕೆ ಮಾಡಿದೆ. ಮದುವೆಗಳನ್ನು ಫಂಕ್ಷನ್ ಹಾಲ್ಗಳಲ್ಲಿ ನಡೆಸಲಿ ಅವಕಾಶ ನೀಡಲಾಗಿದೆ. ಆದರೆ, 40 ಜನಕ್ಕಿಂತ ಹೆಚ್ಚಿಲ್ಲದಂತೆ ಭಾಗವಹಿಸದಂತೆ ಆದೇಶ ನೀಡಿದೆ. ಅಧಿಕಾರಿಗಳು ಈ ಹಿಂದೆ 10 ಪಾಸ್ಗಳಿಗೆ ಮಾತ್ರ ಅವಕಾಶ ನೀಡುತ್ತಿದ್ದರು. ಈಗ ಈ ಸಂಖ್ಯೆಯನ್ನು 40ಕ್ಕೆ ಏರಿಸಲಾಗಿದೆ.
ಇದನ್ನು ಓದಿ: ಜಾರ್ಖಂಡ್ ಶೂಟರ್ಗೆ 3 ಲಕ್ಷದ ರೈಫಲ್ ಉಡುಗೊರೆ ನೀಡಿದ ಸೋನು
ವಾಕ್ಸಿನ್ ಬಗ್ಗೆ ಅಪಪ್ರಚಾರ:
ಇದೇ ವೇಳೆ ಕೋವಿಡ್ ಲಸಿಕೆ ಕುರಿತು ಅಪಪ್ರಚಾರ ಕುರಿತು ಟೀಕಿಸಿದ ಅವರು, ಇಂದು ಸಾಕಷ್ಟು ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರಲ್ಲಿ ಈ ಭೀತಿ ಇನ್ನು ಮರೆಯಾಗಿಲ್ಲ. ಇದಕ್ಕೆ ಕಾರಣ ಲಸಿಕೆ ಬಗ್ಗೆ ನಡೆಸಿದ್ದ ಅಪಪ್ರಚಾರ. ಈ ಹಿಂದೆ ವ್ಯಾಕ್ಸಿಂಗ್ ಕೈಗೊಳ್ಳಬೇಡಿ ಅಂದವರು ಈಗ ಗುಟ್ಟಾಗಿ ಹೋಗಿ ವ್ಯಾಕ್ಸಿನ್ ಪಡೆದಿದ್ದರು. ಪಾಪ ಬಡವರು ಇವರ ಮಾತು ಕೇಳಿ ಮನೆಯಲ್ಲೇ ಲಸಿಕೆ ಪಡೆಯದೇ ಉಳಿದರು ಎಂದರು.
ರಾಜ್ಯದಲ್ಲಿ ಸೋಮವಾರ 2, 576 ಪ್ರಕರಣಗಳು ಕಂಡು ಬಂದಿದ್ದು, ಬೆಂಗಳೂರಿನಲ್ಲಿ 563 ಪ್ರಕರಣಗಳು ಕಂಡು ಬಂದಿದೆ. ಹಲವು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಮೂರು ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ಕಂಡು ಬಂದಿದೆ. ಜೊತೆಗೆ 100ಕ್ಕಿಂತ ಕಡಿಮೆ ಸಾವು ಕಂಡು ಬಂದಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ