• Home
  • »
  • News
  • »
  • coronavirus-latest-news
  • »
  • ಆಸ್ತಿ ಮಾರಿ ಲಾಕ್​ಡೌನ್ ಸಮಯದಲ್ಲಿ ಬಡವರಿಗೆ ನೆರವಾದ ಸಹೋದರರು; ಫೋನ್ ಮಾಡಿದರೆ ಮನೆಗೆ ಬರುತ್ತೆ ಉಚಿತ ರೇಷನ್!

ಆಸ್ತಿ ಮಾರಿ ಲಾಕ್​ಡೌನ್ ಸಮಯದಲ್ಲಿ ಬಡವರಿಗೆ ನೆರವಾದ ಸಹೋದರರು; ಫೋನ್ ಮಾಡಿದರೆ ಮನೆಗೆ ಬರುತ್ತೆ ಉಚಿತ ರೇಷನ್!

ಬಡವರಿಗೆ ಉಚಿತ ದಿನಸಿ ಪದಾರ್ಥ ಹಂಚುತ್ತಿರುವ ಸಹೋದರರು.

ಬಡವರಿಗೆ ಉಚಿತ ದಿನಸಿ ಪದಾರ್ಥ ಹಂಚುತ್ತಿರುವ ಸಹೋದರರು.

ಕೋಲಾರ ನಗರದಲ್ಲಿ ದಿನಸಿ ವಸ್ತುಗಳ ಬೇಕಿದ್ದಲ್ಲಿ ಈ ನಂಬರ್ ಗೆ ಕರೆ ಮಾಡಿ ಎಂದು ಸಹೋದರರು ಮನವಿ ಮಾಡಿದ್ದಾರೆ. 7899346674 ಮುಜ್ಮುಲ್ ಪಾಷಾ ಹಾಗೂ 7899414727 ತಜ್ಮುಲ್ ಪಾಷಾ.

  • Share this:

    ಕೋಲಾರ: ದೇಶದಾದ್ಯಂತ ಮಹಾಮಾರಿ ಕೊರೋನಾ ವೈರಸ್​ ನಿಯಂತ್ರಣಕ್ಕಾಗಿ ದೇಶವನ್ನು ಲಾಕ್​ಡೌನ್ ಮಾಡಲಾಗಿದೆ. ಲಾಕ್ ಡೌನ್​ನಿಂದಾಗಿ, ಕೂಲಿ ಕಾರ್ಮಿಕರು, ಬಡವರು, ರೈತರು ತತ್ತರಿಸಿ ಹೋಗಿದ್ದಾರೆ. ಅಸಂಘಟಿತ ಕಾರ್ಮಿಕ ವಲಯದ ಕುಟುಂಬಗಳು ದಿನ ದೂಡುವುದೇ ಕಷ್ಟಕರವಾಗಿದೆ. ಇಂತಹ ಸಮಯದಲ್ಲಿ ಕೋಲಾರ ನಗರದಲ್ಲಿ ಸಹೋದರರಿಬ್ಬರು ಬಡವರ ನೆರವಿಗೆ ನಿಂತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


    ಕೋಲಾರದಲ್ಲಿ ಫೋನ್ ಕರೆ ಮಾಡಿದವರಿಗೆ ಉಚಿತವಾಗಿ ಮನೆಗೆ ರೇಷನ್ ನೀಡುತ್ತಿದ್ದಾರೆ  ಹೌಸಿಂಗ್ ಬೋರ್ಡ್ ಬಡಾವಣೆಯ ಸಹೋದರರಾದ ತಜ್ಮುಲ್ ಪಾಷಾ, ಮುಜ್ಮುಲ್ ಪಾಷಾ. ಒಂದು ಪ್ಯಾಕೆಟ್​ನಲ್ಲಿ 10 ಕೆಜಿ ಅಕ್ಕಿ, ಬೇಳೆ, ಸಕ್ಕರೆ, ಗೋದಿ ಹಿಟ್ಟು, ಸಕ್ಕರೆ, ಮೈದಾ ಹಿಟ್ಟು, ರವೆ, ಎಣ್ಣೆ, ಟೀ ಪುಡಿ, ಮಸಾಲೆ ಪದಾರ್ಥಗಳು ಸೇರೆ ಒಟ್ಟು15 ಬಗೆಯ ದಿನಸಿ ಪದಾರ್ಥಗಳು ಸೇರಿ ಮಾಸ್ಕ್ , ಸ್ಯಾನಿಟೈಸರ್ ಪೂರೈಕೆ ಮಾಡುತ್ತಿದ್ದಾರೆ. ಬಾಳೆ ಹಣ್ಣು ವ್ಯಾಪಾರ ಮಾಡುತ್ತಿರುವ ಈ ಸಹೋದರರು ಆಹಾರ ದಿನಸಿ ಪೂರೈಸಲು ತಮ್ಮ ಸ್ವಂತದ ಖಾಲಿ ಶೆಡ್ ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ನಿತ್ಯ ಸಾಮಾಜ ಸೇವೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.


    ಮನೆಯಲ್ಲಿ ಸಂಗ್ರಹಿಸಿರುವ ದಿನಸಿ ಪದಾರ್ಥ.


    ಮನೆಯೇ ಗೋಡೌನ್, ಸಹೋದರರೇ ಡೆಲಿವರಿ ಬಾಯ್ಸ್!


    ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿನ ತಮ್ಮ ನಿವಾಸವನ್ನೆ ದಿನಸಿ ಪದಾರ್ಥಗಳನ್ನು  ಶೇಖರಣೆ ಮಾಡಿಕೊಳ್ಳಲು ಬಳಸಿಕೊಂಡಿದ್ದು, ದಿನಸಿ ಸಾಮಗ್ರಿಗಳಿಂದ ಮನೆಯ ಕೊಠಡಿಗಳೆಲ್ಲ ತುಂಬಿ ಹೋಗಿದೆ. ಇದುವರೆಗೆ 1400 ಪಾಕೆಟ್ ದಿನಸಿ ವಸ್ತುಗಳನ್ನು ಬಡವರಿಗೆ ಹಂಚಿರುವ ಸಹೋದರರು ಈಗ ಮತ್ತೊಮ್ಮೆ 1200 ದಿನಸಿ ಪಾಕೆಟ್ ಗಳನ್ನ ಕಟ್ಟಿ ಬಡವರ ಮನೆಗಳಿಗೆ ಹಂಚುವ ಮೂಲಕ 21 ದಿನಗಳ ಕಾಲ‌ ಮನೆಯಲ್ಲೇ ಇರುವ ಪ್ರಧಾನಿ ಮೋದಿ ಅವರ ಸಂದೇಶವನ್ನು ಪ್ರಚಾರ ಮಾಡ್ತಿದ್ದಾರೆ. ಸಹೋದರರ ಸಮಾಜಸೇವೆಗೆ ನಗರಾದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಮಾತನಾಡಿರುವ ಸಹೋದರರು ಸಮಾಜ ಸೇವೆಯಲ್ಲಿ ಯಾವುದೇ ಜಾತಿ, ಧರ್ಮ ಬೇಧ-ಭಾವವಿಲ್ಲದೆ ಉಚಿತವಾಗಿ ರೇಷನ್ ನೀಡುತ್ತಿದ್ದು, ಬಡವರು ದಯಮಾಡಿ ಹೊರಗೆ ಬಾರದೆ ಪ್ರಧಾನಿ ಮೋದಿಯವರ ಆಶಯವನ್ನು ಈಡೇರಿಸುವಂತೆ ಕೋರಿದ್ದಾರೆ. ಅಲ್ಲದೆ ರೇಷನ್ ಬೇಕೆಂದರೆ ತಮಗೆ ಕರೆ ಮಾಡಿದರೆ ಉಚಿತವಾಗಿ ಮನೆಗೆ ತಲುಪಿಸುವುದಾಗಿಯೂ ತಿಳಿಸಿದ್ದಾರೆ. ಜೊತೆಗೆ ತಮ್ಮನ್ನ ನೋಡಿ ಸಿರಿವಂತರು ಧಾನ ಧರ್ಮ ಮಾಡಿ ಬಡವರಿಗೆ ನೆರವಾಗಲಿ ಎಂದೂ ಮನವಿ ಮಾಡಿದ್ದಾರೆ.


    ಇದನ್ನು ಓದಿ:ಲಾಕ್​ಡೌನ್​ ಎಫೆಕ್ಟ್​: 2,100 ಕಿ.ಮೀ. ದೂರದಲ್ಲಿರುವ ಅಪ್ಪನನ್ನು ನೋಡಲು ಸೈಕಲ್​ನಲ್ಲಿ ಹೊರಟ ವಾಚ್​ಮನ್!


    ಕೋಲಾರ ನಗರದಲ್ಲಿ ದಿನಸಿ ವಸ್ತುಗಳ ಬೇಕಿದ್ದಲ್ಲಿ ಈ ನಂಬರ್ ಗೆ ಕರೆ ಮಾಡಿ ಎಂದು ಸಹೋದರರು ಮನವಿ ಮಾಡಿದ್ದಾರೆ.


    7899346674 ಮುಜ್ಮುಲ್ ಪಾಷಾ,
    7899414727 ತಜ್ಮುಲ್ ಪಾಷಾ


    • ವಿಶೇಷ ವರದಿ: ರಘುರಾಜ್


    Published by:HR Ramesh
    First published: