• Home
  • »
  • News
  • »
  • coronavirus-latest-news
  • »
  • ಮುಳಬಾಗಿಲು ಪೊಲೀಸ್ ಠಾಣೆ ಆರೋಪಿಗೆ ಕೊರೋನಾ; ಡಿವೈಎಸ್​ಪಿ ಸೇರಿ 22 ಸಿಬ್ಬಂದಿಗೆ ಹೋಂ ಕ್ವಾರಂಟೈನ್

ಮುಳಬಾಗಿಲು ಪೊಲೀಸ್ ಠಾಣೆ ಆರೋಪಿಗೆ ಕೊರೋನಾ; ಡಿವೈಎಸ್​ಪಿ ಸೇರಿ 22 ಸಿಬ್ಬಂದಿಗೆ ಹೋಂ ಕ್ವಾರಂಟೈನ್

ಮುಳಬಾಗಿಲು ಪೊಲೀಸ್ ಠಾಣೆ

ಮುಳಬಾಗಿಲು ಪೊಲೀಸ್ ಠಾಣೆ

ಈಗಾಗಲೇ ಮುಳಬಾಗಿಲು ನಗರ ಪೊಲೀಸ್ ಠಾಣೆ, ಡಿವೈಎಸ್ಪಿ ಕಚೇರಿಯಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡಿ, 3 ದಿನ ಸೀಲ್ ಡೌನ್ ಮಾಡಲಾಗಿದೆ.

  • Share this:

ಕೋಲಾರ (ಜೂ. 16): ಕೊರೋನಾ ಮಹಾಮಾರಿಯ ವಿರುದ್ದ ನಿರಂತರವಾಗಿ ಹೋರಾಟ ನಡೆಸುತ್ತಿರುವ ಕೊರೋನಾ ವಾರಿಯರ್ಸ್​ಗೆ ಕೋಲಾರ ಜಿಲ್ಲೆಯಲ್ಲಿ ಸೋಂಕಿನ ಭೀತಿ ಎದುರಾಗಿದೆ. ಜಿಲ್ಲೆಯ ಮುಳಬಾಗಿಲು ನಗರ ಠಾಣೆ ಪೊಲೀಸರು ಕಳೆದ ವಾರದ ಹಿಂದಷ್ಟೆ  ಪತಿಯ ವರದಕ್ಷಿಣೆ ಕಿರುಕುಳದಿಂದ ಪತ್ನಿ ಬೇಸತ್ತು, ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಬೆಂಗಳೂರಿನ ಕೆಆರ್ ಪುರಂ ನಿವಾಸಿಯನ್ನು ಬಂಧಿಸಲಾಗಿತ್ತು. ಕೊರೋನಾ ನಿಯಮಗಳ ಪ್ರಕಾರ ಆರೋಪಿಯ ಗಂಟಲು ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು.


ಸೋಮವಾರ ಮಧ್ಯಾಹ್ನ ಆರೋಪಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಇದೀಗ ಆರೋಪಿಯನ್ನು ಬಂಧಿಸಿದ್ದ ಮತ್ತು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದ ಪೊಲೀಸರಿಗೆ ಸೋಂಕಿನ ಭೀತಿ ಎದುರಾಗಿದೆ. ನಿನ್ನೆ ರಾತ್ರಿಯೇ ಮುಳಬಾಗಿಲು ನಗರ ಠಾಣೆ, ಡಿವೈಎಸ್ಪಿ ಕಚೇರಿಯನ್ನು 3 ದಿನಗಳ ಕಾಲ ಸೀಲ್ ಮಾಡಿದ್ದು, ಜೊತೆಗೆ ಡಿವೈಎಸ್ಪಿ, ಎಸ್​ಐ ಸೇರಿ ಒಟ್ಟು 22 ಸಿಬ್ಬಂದಿಯನ್ನು ಹೋಂ ಕ್ವಾರೆಂಟೈನ್ ಮಾಡಲಾಗಿದೆ. ಇಂದು ಆರೋಗ್ಯ ಇಲಾಖೆ ಪೊಲೀಸರಿಗೆ ಕೊರೋನಾ ಪರೀಕ್ಷೆ ನಡೆಸಲಿದೆ ಎಂದು ಕೋಲಾರ ಎಸ್​ಪಿ ಕಾರ್ತಿಕ್ ರೆಡ್ಡಿ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.


ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿಗೆ ಹೋದರೂ ಪಾದರಾಯನಪುರ ಕಾರ್ಪೊರೇಟರ್​ಗೆ ಬುದ್ಧಿ ಬರಲಿಲ್ಲ!


ಸೋಂಕಿತ ಆರೋಪಿಯನ್ನು ಕೋಲಾರ ಸರ್ಕಾರಿ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದು, ಆರೋಪಿಗೆ ಕೆಆರ್ ಪುರಂ ಮೂಲದಿಂದಲೇ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಮುಳಬಾಗಿಲು ನಗರ ಪೊಲೀಸ್ ಠಾಣೆ, ಡಿವೈಎಸ್ಪಿ ಕಚೇರಿಯಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡಿ, 3 ದಿನ ಸೀಲ್ ಡೌನ್ ಮಾಡಲಾಗಿದೆ. ಇನ್ನು, ನಗರ ವ್ಯಾಪ್ತಿಯ ಸಾರ್ವಜನಿಕರ ದೂರುಗಳನ್ನು ಆಲಿಸಲು ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಗರ ಠಾಣೆ ಕೊಠಡಿಯನ್ನು ತೆರೆಯಲಾಗಿದೆ ಎಂದು  ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

Published by:Sushma Chakre
First published: