HOME » NEWS » Coronavirus-latest-news » KOLAR CORONAVIRUS UPDATES A DEADLY CORONA INFECTION THAT APPEARED IN FIVE PEOPLE IN KOLARA A SINGLE DAY MAK

ಕೋಲಾರದಲ್ಲಿ ಕೊರೋನಾ ಕೇಕೆ; ಒಂದೇ ದಿನ ಐವರಲ್ಲಿ ಕಾಣಿಸಿಕೊಂಡ ಮಾರಣಾಂತಿಕ ಸೋಂಕು

Kolar Coronavirus Updates: ಮುಳಬಾಗಿಲು ತಾಲೂಕಿನಲ್ಲಿ  ಮಂಗಳವಾರ ಮಧ್ಯಾಹ್ನ ಐದು ಕೊರೊನಾ ಕೇಸ್ ಧೃಡವಾಗುತ್ತಿದ್ದಂತೆ  ಸ್ತಳಕ್ಕೆ ಕೋಲಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸೋಂಕಿತರನ್ನು ಕೋಲಾರದ ಕೋವಿಡ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಆರಂಬಿಸಿದ್ದಾರೆ.

MAshok Kumar | news18-kannada
Updated:May 13, 2020, 11:03 AM IST
ಕೋಲಾರದಲ್ಲಿ ಕೊರೋನಾ ಕೇಕೆ; ಒಂದೇ ದಿನ ಐವರಲ್ಲಿ ಕಾಣಿಸಿಕೊಂಡ ಮಾರಣಾಂತಿಕ ಸೋಂಕು
Kolar Coronavirus Updates: ಮುಳಬಾಗಿಲು ತಾಲೂಕಿನಲ್ಲಿ  ಮಂಗಳವಾರ ಮಧ್ಯಾಹ್ನ ಐದು ಕೊರೊನಾ ಕೇಸ್ ಧೃಡವಾಗುತ್ತಿದ್ದಂತೆ  ಸ್ತಳಕ್ಕೆ ಕೋಲಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸೋಂಕಿತರನ್ನು ಕೋಲಾರದ ಕೋವಿಡ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಆರಂಬಿಸಿದ್ದಾರೆ.
  • Share this:
ಕೋಲಾರ (ಮೇ 13); ಕೊರೊನಾ ಲಾಕ್ ಡೌನ್ ಘೋಷಣೆ ಹಿನ್ನಲೆ ಹಸಿರು ವಲಯದಲ್ಲಿದ್ದ ಕೋಲಾರ ಜಿಲ್ಲೆಗೆ ಕೊನೆಗೂ ಮಹಾಮಾರಿ ಕೊರೊನಾ ಪ್ರವೇಶ ಮಾಡಿದೆ. ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಒಂದೇ ಬಾರಿಗೆ ಐವರಲ್ಲಿ ಸೋಂಕು ದೃಡಪಟ್ಟಿದ್ದು ಜನ ಆತಂಕದಲ್ಲಿ ದಿನದೂಡುವಂತಾಗಿದೆ.

ಪಕ್ಕದ ಬೆಂಗಳೂರು, ಚಿಕ್ಕಬಳ್ಳಾಪುರ, ಆಂದ್ರ, ತಮಿಳುನಾಡು, ಹೀಗೆ ಸುತ್ತಲು ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಏರುತ್ತಿದ್ದರು ಗಡಿಯಲ್ಲಿ ಕಟ್ಟು ನಿಟ್ಟಾಗಿ ಕ್ರಮ ಕೈಗೊಳ್ಳೊ ಮೂಲಕ ಕೊರೊನಾ ಹರಡದಂತೆ ಎಚ್ಚರ ವಹಿಸಲಾಗಿತ್ತು. ಆದರೆ, ಜಿಲ್ಲಾಡಳಿತ ಕೈಗೊಂಡಿದ್ದ ಅಗತ್ಯ ಕ್ರಮಗಳ ಹೊರತಾಗಿ ಸೋಂಕು ಕಂಡುಬಂದಿದೆ.

ಮುಳಬಾಗಿಲು ತಾಲೂಕಿನಲ್ಲಿ  ಮಂಗಳವಾರ ಮಧ್ಯಾಹ್ನ ಐದು ಕೊರೊನಾ ಕೇಸ್ ಧೃಡವಾಗುತ್ತಿದ್ದಂತೆ  ಸ್ತಳಕ್ಕೆ ಕೋಲಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸೋಂಕಿತರನ್ನು ಕೋಲಾರದ ಕೋವಿಡ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಆರಂಬಿಸಿದ್ದಾರೆ. ಸೋಂಕಿತರಲ್ಲಿ ಯುವತಿ ಹಾಗು ಓರ್ವ ಸೇರಿ  ಐವರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.

ಸೋಂಕಿತರೆಲ್ಲರಿಗೂ ಪ್ರವಾಸದ ಇತಿಹಾಸವಿದೆ. ಒರಿಸ್ಸಾಗೆ ಹೋಗಿ ಬಂದಿದ್ದ ಇಬ್ಬರು ಚಾಲಕರು ಮತ್ತು  ಬೀದರ್ ನ ಹುಮ್ನಾಬಾದ್  ನಿಂದ ವಾಪಸ್ಸಾಗಿರುವ 22 ವರ್ಷದ ಯುವತಿ ಮತ್ತು ಚನ್ನೈ ಮಾರುಕಟ್ಟೆಗೆ ಹೋಗಿಬಂದಿದ್ದ ಓರ್ವ ವ್ಯಕ್ತಿ ಸೇರಿದಂತೆ,  ಬೆಂಗಳೂರಿನ ಜೆಪಿ ನಗರದಿಂದ ವಾಪಸ್ಸಾಗಿರುಗವ 70 ವರ್ಷದ ವೃದ್ದೆಯಲ್ಲಿ ಸೋಂಕು  ಕಂಡುಬಂದಿದೆ.

ಇನ್ನೂ  ಸ್ವಂತ ಊರುಗಳಿಂದ ವಾಪಸ್ಸಾಗುವ ವೇಳೆ ಈ ಎಲ್ಲರನ್ನೂ ಆರೋಗ್ಯ ಇಲಾಖೆಯ ಸರ್ವೇ ಕಾರ್ಯ ಮಾಡುವಾಗ ತಪಾಸಣೆ ನಡೆಸಿ ಕೊರೊನಾ ಪರೀಕ್ಷೆ ನಡೆಸಿ ಕ್ವಾರೆಂಟೈನ್ ಮಾಡಲಾಗಿತ್ತು. ಮಂಗಳವಾರ ಐವರ ವರದಿ  ಪಾಸಿಟಿವ್ ಹಿನ್ನಲೆ ಐವರನ್ನ ಆಸ್ಪತ್ರೆಗೆ ದಾಖಲುಮಾಡಲಾಗಿದ್ದು, ಸೋಂಕಿತರ ಜೊತೆಗೆ ಸಂಪರ್ಕ ಹೊಂದಿದ್ದ 24 ಮಂದಿಯನ್ನ ಆಸ್ಪತ್ರೆ ಕ್ವಾರೆಂಟೈನ್ ಮಾಡಲಾಗಿದೆ.

(ವರದಿ - ರಘುರಾಜ್)

ಇದನ್ನೂ ಓದಿ : ಕೊರೋನಾ ಭೀತಿ ನಡುವೆಯೂ ಲಾಕ್‌ಡೌನ್ ಸಡಿಲಿಕೆ ಕುರಿತು ಚಿಂತಿಸುತ್ತಿರುವ ಮಹಾರಾಷ್ಟ್ರ ಸರ್ಕಾರ
Youtube Video
First published: May 13, 2020, 10:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories