ಹಾಸನ (ಮಾರ್ಚ್ 05); "ನಾನು ಈ ಹಿಂದೆಯೇ ಹೇಳಿದ್ದೆ, ಮದ್ದಿಲ್ಲದ ಖಾಯಿಲೆ ಬರುತ್ತೆ ಅಂತ ಅದು ಈಗ ನಿಜವಾಗಿದೆ. ಪ್ರಸ್ತುತ ಇಡೀ ಜಗತ್ತಿಗೆ ಆವರಿಸಿರುವ ಕೊರೋನಾ ವೈರಸ್ ಸಾವಿರಾರು ಸಂಖ್ಯೆಯಲ್ಲಿ ಜೀವ ಬಲಿ ಪಡೆಯಲಿದೆ. ಆದರೆ, ಈ ಮದ್ದಿಲ್ಲದ ಸೋಂಕಿಗೆ ಭಾರತದ ಮಂತ್ರಶಕ್ತಿಯಲ್ಲಿ ಮಾತ್ರ ಪರಿಹಾರ ಇದೆ" ಎಂದು ಕೋಡಿ ಮಠದ ಕೋಡಿ ಶ್ರೀ ಭವಿಷ್ಯ ನುಡಿದಿದ್ದಾರೆ.
ಕೊರೋನಾ ವೈರಸ್ ಸೋಂಕಿನ ಕುರಿತು ಇಂದು ಹಾಸನ ತಾಲೂಕಿನ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದು, "ಈಗ ಬಂದಿರುವ ಕೊರೋನಾ ವೈರಸ್ ಇಡೀ ವಿಶ್ವವನ್ನು ಆವರಿಸಲಿದೆ, ಇನ್ನೂ ಸಾವಿರಾರು ಜನ ಈ ಸೋಂಕಿಗೆ ಬಲಿಯಾಗಲಿದ್ದಾರೆ. ನಾನು ಈ ಹಿಂದೆಯೇ ಹೇಳಿದ್ದೆ ಮದ್ದಿಲ್ಲದ ಖಾಯಿಲೆ ಬರುತ್ತೆ ಅಂತ. ಆದರೆ, ಆ ಭವಿಷ್ಯ ಈಗ ನಿಜವಾಗಿದೆ. ಈಗ ಬಂದ ಖಾಯಿಲೆ ಭವಿಷ್ಯದಲ್ಲಿ ಜಡತ್ವದಂತಹ ಕಲ್ಲು, ಮಣ್ಣು, ಮರಗಳಿಗೂ ಆವರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
"ಮಹಾಮಾರಿಯಾಗಿರುವ ಈ ಸೋಂಕಿಗೆ ಮದ್ದು ಕಂಡು ಹಿಡಿಯುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ, ಇದಕ್ಕೆ ಭಾರತದಲ್ಲಿ ಮಾತ್ರ ಪಡಿಹಾರ ಇದೆ. ಕರೋನಾ ವೈರಸ್ ಗೆ ತಂತ್ರಕ್ಕಿಂತ ಭಾರತದ ಮಂತ್ರ ಶಕ್ತಿಯಲ್ಲೇ ಪರಿಹಾರವಿದೆ. ಋಷಿ ಮುನಿಗಳು ಕೊಟ್ಟ ಗಿಡಮೂಲಿಕೆ, ಹಳ್ಳಿ ನಾಟಿ ವೈದ್ಯರಿಂದ ಮಾತ್ರ ಈ ಸೋಂಕನ್ನು ಗುಣಪಡಿಸಲು ಸಾಧ್ಯ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಕೊರೋನಾ ಸೋಂಕು ತಗುಲಿರುವ ಶಂಕೆ; ಭಯದಿಂದ ಹೆಂಡತಿಯನ್ನು ಸ್ನಾನಗೃಹದಲ್ಲೇ ಕೂಡಿ ಹಾಕಿದ ಗಂಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ