ಕೊಡಗಿನಲ್ಲಿ ನಿರ್ಗತಿಕರಿಗೆ ಮೂರೊತ್ತು ಊಟ ನೀಡಿ ಮಾನವೀಯತೆ ಮೆರೆದ ಪೊಲೀಸರು

ಮಡಿಕೇರಿ ಸೇರಿದಂತೆ ಇಡೀ ಕೊಡಗು ಜಿಲ್ಲೆಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟು, ಹೊಟೇಲ್‍ಗಳು ಸಂಪೂರ್ಣ ಬಂದ್ ಆಗಿದ್ದು, ನಿರ್ಗತಿಕರು ಮತ್ತು ಭಿಕ್ಷಕರಿಗೆ ಒಂದೊತ್ತಿನ ಅನ್ನ ನೀರು ಕೂಡ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪೊಲೀಸ್ ಕೆಲಸವೆಂದರೆ, ಕೇವಲ ರಕ್ಷಣೆ ಮಾಡೋದು ಕಾನೂನು ಪಾಲನೆ ಮಾಡೋದು ಅಷ್ಟೇ ಎನ್ನುವುದಕ್ಕೆ ಬದಲಾಗಿ ಹಸಿದವರ ಹೊಟ್ಟೆ ತುಂಬಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ.

news18-kannada
Updated:March 26, 2020, 4:00 PM IST
ಕೊಡಗಿನಲ್ಲಿ ನಿರ್ಗತಿಕರಿಗೆ ಮೂರೊತ್ತು ಊಟ ನೀಡಿ ಮಾನವೀಯತೆ ಮೆರೆದ ಪೊಲೀಸರು
ಕೊಡಗು ಪೊಲೀಸರು
  • Share this:
ಕೊಡಗು(ಮಾ.26): ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೊಡಗು ಸೇರಿದಂತೆ ಇಡೀ ಭಾರತವನ್ನೇ 21 ದಿನಗಳ ಲಾಕ್ ಡೌನ್ ಮಾಡಲಾಗಿದೆ. ಸದಾ ಪ್ರವಾಸಿಗರಿಂದಲೇ ಗಿಜಿಗಿಜಿಗುಡುವ ಕೊಡಗು ಜನ ಮತ್ತು ವಾಹನ ಸಂಚಾರವಿಲ್ಲದೇ ಬಹುತೇಕ ಸ್ತಬ್ದಗೊಂಡಿದೆ. ಸರ್ಕಾರದ ಆದೇಶದಂತೆ ಅಲ್ಲಲ್ಲಿ ಕೆಲ ಅಂಗಡಿ-ಮುಂಗಟ್ಟುಗಳಷ್ಟೇ ಬಾಗಿಲು ತೆರೆದಿವೆ. ರಸ್ತೆ ಬದಿ ಹೋಟೆಲ್​ಗಳೆಲ್ಲವೂ ಬಂದ್ ಆಗಿವೆ. ಬಡವರಿಗೆ ಊಟ ಮಾಡಲು ಅವಕಾಶ ಇದ್ದ ಎಲ್ಲಾ ಅವಕಾಶಗಳು ಮುಚ್ಚಿವೆ. ರಸ್ತೆಬದಿ ಹೋಟೆಲ್​ಗಳನ್ನು ನಂಬಿಕೊಂಡಿದ್ದ ನಿರ್ಗತಿಕರು ಊಟಕ್ಕಾಗಿ ಪರದಾಡುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ನಿರ್ಗತಿಕರ ಸಹಾಯಕ್ಕೆ ಕೊಡಗು ಪೊಲೀಸರು ಮುಂದಾಗಿದ್ಧಾರೆ.

ಹೌದು, ಭಿಕ್ಷುಕರು, ನಿರ್ಗತಿಕರಿಗೆ ಊಟ ನೀಡಿ ಕೊಡಗು ಪೊಲೀಸರು ಮಾನವೀಯತೆ ಮರೆದಿದ್ದಾರೆ. ಇದೀಗ ಕೊರೊನಾ ವೈರಸ್ ಹರಡುವ ಆತಂಕದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಈ ವೇಳೆ ಜನರು ರಸ್ತೆಗೆ ಇಳಿಯದಂತೆ ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಅಷ್ಟೇ ಅಲ್ಲ ಇದರ ನಡುವೆ ನಿರ್ಗತಿಕರಿಗೆ, ಭಿಕ್ಷುಕರನ್ನು ಹುಡುಕಿ ಅವರಿಗೆ ಊಟ ನೀಡಿ ಅವರ ಅಸಿವು ನೀಗಿಸುವ ಕೆಲವನ್ನೂ ಪೊಲೀಸರು ಮಾಡುತ್ತಿದ್ದಾರೆ.

ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಒಂದು ಪಾಸಿಟಿವ್ ಪ್ರಕರಣ ದೃಢಪಡುತ್ತಿದ್ದಂತೆ, ಜಿಲ್ಲೆಯನ್ನು ಮಾರ್ಚ್ 20 ರಿಂದಲೇ ಲಾಕ್ ಡೌನ್ ಮಾಡಲಾಗಿತ್ತು. ಅಂದಿನಿಂದ ಮಡಿಕೇರಿ ನಗರ ಸಿಪಿಐ ಅನೂಪ್ ಮಾದಪ್ಪ ಮತ್ತು ಅವರ ಸಿಬ್ಬಂದಿ ನಿರ್ಗತಿಕರು, ಬೀದಿಯಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದವರನ್ನು ಹುಡುಕಿ ಮೂರುತ್ತಿನ ಊಟ ಪೂರೈಕೆ ಮಾಡುತ್ತಿದ್ದಾರೆ. ಆ ಮೂಲಕ ನಿರ್ಗತಿಕರ ಹೊಟ್ಟೆ ತುಂಬಿಸಿ ಹಸಿವು ನೀಗಿಸುವ ಕೆಲಸ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ: ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೇ ಮನೆ ಖಾಲಿ ಮಾಡಿ ಎಂದ ಮಾಲೀಕರು; ಸಚಿವ ಶ್ರೀರಾಮುಲು ಎಚ್ಚರಿಕೆ

ಮಡಿಕೇರಿ ಸೇರಿದಂತೆ ಇಡೀ ಕೊಡಗು ಜಿಲ್ಲೆಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟು, ಹೊಟೇಲ್‍ಗಳು ಸಂಪೂರ್ಣ ಬಂದ್ ಆಗಿದ್ದು, ನಿರ್ಗತಿಕರು ಮತ್ತು ಭಿಕ್ಷಕರಿಗೆ ಒಂದೊತ್ತಿನ ಅನ್ನ ನೀರು ಕೂಡ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪೊಲೀಸ್ ಕೆಲಸವೆಂದರೆ, ಕೇವಲ ರಕ್ಷಣೆ ಮಾಡೋದು ಕಾನೂನು ಪಾಲನೆ ಮಾಡೋದು ಅಷ್ಟೇ ಎನ್ನುವುದಕ್ಕೆ ಬದಲಾಗಿ ಹಸಿದವರ ಹೊಟ್ಟೆ ತುಂಬಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ.
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading