HOME » NEWS » Coronavirus-latest-news » KODAGU NARIYANDANDA VILLAGE ARE SEAL DOWN BECAUSE OF COVID INFECTION RSK SESR

ಸೋಂಕು ಇಳಿಕೆಯ ನಡುವೆ ಆಘಾತ: ಕೊಡಗಿನ ಗ್ರಾಮವೊಂದರಲ್ಲಿ 25 ಜನರಿಗೆ ಸೋಂಕು ದೃಢ

ಕಳೆದ ನಾಲ್ಕು ದಿನಗಳಲ್ಲಿ ಈ ಗ್ರಾಮದಲ್ಲಿ ಬರೋಬ್ಬರಿ 25 ಸೋಂಕು ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದು ಇಡೀ ಗ್ರಾಮವನ್ನು ಆತಂಕಕ್ಕೆ ದೂಡಿದೆ.

news18-kannada
Updated:June 15, 2021, 10:53 PM IST
ಸೋಂಕು ಇಳಿಕೆಯ ನಡುವೆ ಆಘಾತ: ಕೊಡಗಿನ ಗ್ರಾಮವೊಂದರಲ್ಲಿ 25 ಜನರಿಗೆ ಸೋಂಕು ದೃಢ
ಪ್ರಾತಿನಿಧಿಕ ಚಿತ್ರ
  • Share this:
ಕೊಡಗು (ಜೂ. 15):  ಕೊಡಗು ಜಿಲ್ಲೆಯಲ್ಲಿ ಸದ್ಯ ಕೊರೋನಾ ಸೋಂಕಿನ ಪ್ರಕರಣಗಳು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿವೆ. ಆದರೆ ಕೆಲವು ಗ್ರಾಮ ಪಂಚಾಯಿತಿ ಮತ್ತು ಗ್ರಾಮಗಳಲ್ಲಿ ಮಾತ್ರ ಕೋವಿಡ್​​ ಸೋಂಕು ಇನ್ನೂ ಅಬ್ಬರಿಸುತ್ತಲೇ ಇದೆ. ಮಡಿಕೇರಿ ತಾಲ್ಲೂಕಿನ ನರಿಯಂದಡ ಗ್ರಾಮ ಪಂಚಾಯಿತಿಯ ನರಿಯಂದಡ ಗ್ರಾಮದಲ್ಲಿ ಬರೋಬ್ಬರಿ 25 ಪಾಸಿಟಿವ್ ಪ್ರಕರಣಗಳಿವೆ. ಹೀಗಾಗಿಯೇ ಈ ಗ್ರಾಮವನ್ನೇ ಒಂದು ವಾರದ ಕಾಲ ಸಂಪೂರ್ಣ ಸೀಲ್ ಡೌನ್ ಮಾಡಲು ಪಂಚಾಯಿತಿಯ ಟಾಸ್ಕ್ ಫೋರ್ಸ್ ನಿರ್ಧರಿಸಿದೆ. ನಾಳೆಯಿಂದ ಅಂದರೆ ಜೂನ್ 17 ರಿಂದ ಇದೇ ಜೂನ್ 24 ರವರೆಗೆ ಅಂದರೆ ಏಳು ದಿನಗಳ ಕಾಲ ಗ್ರಾಮವನ್ನು ಸಂಪೂರ್ಣ ಸೀಲ್ ಡೌನ್ ಮಾಡಲು ನಿರ್ಧರಿಸಲಾಗಿದೆ.

ಇದುವರೆಗೆ ಗ್ರಾಮದಲ್ಲಿ 209  ಕೋವಿಡ್​ ಪಾಸಿಟಿವ್​​ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಮೊದಲ ಅಲೆಯಲ್ಲಿ ದಾಖಲಾಗಿದ್ದ ಪಾಸಿಟಿವ್ ಪ್ರಕರಣಗಳ ಸಂಖ್ಯೆಗಿಂತ ಎರಡನೇ ಅಲೆಯಲ್ಲಿ ದಾಖಲಾದ ಪ್ರಕರಣಗಳೇ ಹೆಚ್ಚು. ಇನ್ನು ಕಳೆದ ನಾಲ್ಕು ದಿನಗಳಲ್ಲಿ ಈ ಗ್ರಾಮದಲ್ಲಿ ಬರೋಬ್ಬರಿ 25 ಸೋಂಕು ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದು ಇಡೀ ಗ್ರಾಮವನ್ನು ಆತಂಕಕ್ಕೆ ದೂಡಿದೆ.

ನಾಳೆಯಿಂದ ಈ ಗ್ರಾಮಕ್ಕೆ ಹೊರಗಿನ ಯಾರು ಬರುವಂತಿಲ್ಲ, ಊರಿನವರು ಯಾರೂ ಗ್ರಾಮಬಿಟ್ಟು ಹೊರಗೆ ಹೋಗುವಂತಿಲ್ಲ. ಅಷ್ಟೇ ಅಲ್ಲ ಮನೆಯಿಂದಲೂ ಯಾರೂ ಹೊರಗೆ ಬರುವಂತಿಲ್ಲ. ಹೀಗೆ ಒಂದು ವಾರ ಬಂದ್ ಮಾಡುವುದರಿಂದ ಗ್ರಾಮದ ಜನರಿಗೆ ತೊಂದರೆಯಾಗಬಾರದು ಎಂದು ಪಂಚಾಯಿತಿಯಿಂದಲೇ ಮೂರು ವಾಹನಗಳಲ್ಲಿ ತರಕಾರಿ ಮತ್ತು ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅವರು ಮಾತ್ರವೇ ಗ್ರಾಮದಲ್ಲಿ ಓಡಾಡಿ ಮನೆ ಮನೆಗೆ ಹಣ್ಣು ತರಕಾರಿ ಮತ್ತು ಅಗತ್ಯ ವಸ್ತುಗಳನ್ನು ಪೂರೈಸಲಿದ್ದಾರೆ.

ಇದನ್ನು ಓದಿ : ಕೊರೊನಾ ಕರ್ತವ್ಯದ ನಡುವೆ ಪೊಲೀಸ್ ಅಧಿಕಾರಿಗಳಿಗೆ ತಲೆ ನೋವಾದ ಕಳ್ಳತನ, ನಾಪತ್ತೆ ಪ್ರಕರಣಗಳು

ಒಂದು ವೇಳೆ ಯಾರಾದ್ರು ಅನಗತ್ಯವಾಗಿ ಮನೆಯಿಂದ ಹೊರಗೆ ಬಂದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ. ಜೊತೆಗೆ ಸುಖಾಸುಮ್ಮನೆ ವಾಹನಗಳು ಓಡಾಡಿದಲ್ಲಿ ಅವುಗಳನ್ನು ಸೀಜ್ ಮಾಡಲು ಟಾಸ್ಕ್ ಫೋರ್ಸ್ ಸಮಿತಿ ನಿರ್ಧರಿಸಿದೆ. ಈ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸರನ್ನು ನಿಯೋಜಿಸುವಂತೆ ಈಗಾಗಲೇ ಪಂಚಾಯಿತಿ ವತಿಯಿಂದ ವಿರಾಜಪೇಟೆ ಪೊಲೀಸ್ ಠಾಣೆಗೆ ಮನವಿ ಮಾಡಲಾಗಿದೆ ಎನ್ನುತ್ತಾರೆ ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್.

ಇದನ್ನು ಓದಿ: ಹಾನಗಲ್ ಉಪಚುನಾವಣೆ ಅಭ್ಯರ್ಥಿ ಘೋಷಣೆ ಮಾಡಿದ ಜೆಡಿಎಸ್

ಇನ್ನು ಗ್ರಾಮದಲ್ಲಿ ಇಷ್ಟೊಂದು ಸೋಂಕಿನ ಪ್ರಕರಣಗಳು ದಾಖಲಾಗಿರುವುದಕ್ಕೆ ಕಾರಣವೇನು ಎಂದರು ವಿಚಾರಿಸಿದರೆ, ಗ್ರಾಮದ ಯಾರದೋ ಮನೆಯಲ್ಲಿ ಪಂಚಾಯಿತಿ ಅಧಿಕಾರಿಗಳಿಗೂ ಗೊತ್ತಿಲ್ಲದಂತೆ ಕಾರ್ಯಕ್ರಮ ಒಂದು ನಡೆದಿದೆ ಯಂತೆ. ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರಿಂದಲೇ ಗ್ರಾಮದಲ್ಲಿ ಸೋಂಕು ಇಷ್ಟೊಂದು ಪ್ರಮಾಣದಲ್ಲಿ ಹರಡುವುದಕ್ಕೆ ಕಾರಣ ಎನ್ನುತ್ತಾರೆ ಪಂಚಾಯಿತಿ ಪಿಡಿಓ ಆಶಾ. ಇನ್ನೂ ಅಚ್ಚರಿಯ ವಿಷಯವೆಂದರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಒಂದೇ ಕುಟುಂಬದ ಹತ್ತು ಜನರಿಗೆ ಸೋಂಕು ದೃಢಪಟ್ಟಿತ್ತು. ಹೀಗಾಗಿಯೇ ಗ್ರಾಮದಲ್ಲಿ ಹರಡಿರುವ ಸೋಂಕಿನ ಚೈನ್ ಮುರಿಯಲು ಗ್ರಾಮವನ್ನು ಒಂದು ವಾರ ಸೀಲ್ ಡೌನ್ ಮಾಡಲು ಮುಂದಾಗಿದ್ದು ಇದು ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಎಂಬುದನ್ನು  ಕಾದು ನೋಡಬೇಕಾಗಿದೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Seema R
First published: June 15, 2021, 10:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories