ಕೊಡಗಿನಲ್ಲಿ ಕೊರೋನಾ ರಣಕೇಕೆ: ಒಂದೇ ದಿನ 20 ಮಂದಿಗೆ ಸೋಂಕು

ರಾಜ್ಯದ ವಿವಿಧ ಜಿಲ್ಲೆಗಳಂತೆಯೇ ಕೊಡಗಿನಲ್ಲೂ ಕೊರೋನಾ ವೈರಸ್​ ಹಾವಳಿ ಮುಂದುವರಿದಿದೆ. ಇದರ ಪರಿಣಾಮ ಕೋವಿಡ್​-19 ವೈರಸ್​​ಗೆ ಜಿಲ್ಲೆಯಲ್ಲಿ ಮತ್ತೊಬ್ಬರು ಬಲಿಯಾಗಿದ್ದಾರೆ. ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪದ ಅಚ್ಚಪ್ಪ ಬಡಾವಣೆಯ 86 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಡಗು(ಜು.12): ಕಿತ್ತಳೆ ನಾಡು ಕೊಡಗಿಗೆ ಕೊರೋನಾ ಮಹಾಮಾರಿ ಭಾರೀ ಆಘಾತ ನೀಡುತ್ತಿದೆ. ಜಿಲ್ಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಿಯಂತ್ರಣದಲ್ಲಿದ್ದ ಕೊರೋನಾ ಮತ್ತೆ ಸ್ಪೋಟಗೊಂಡಿದೆ. ಶನಿವಾರ ಒಂದೇ ದಿನ ಕೊಡಗು ಜಿಲ್ಲೆಯಲ್ಲಿ ಬರೋಬ್ಬರಿ 20 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಜನರಲ್ಲಿ ಕೊರೋನಾ ಮತ್ತಷ್ಟು ಆತಂಕ ಮೂಡಿಸಿದೆ.

ಹೌದು, ಶನಿವಾರ ಬೆಳಗ್ಗೆ 10 ಪ್ರಕರಣಗಳು ದಾಖಲಾಗಿದ್ದವು, ನಂತರ ಸಂಜೆ ವೇಳೆಗೆ ಮತ್ತೆ 10 ಹೊಸ ಕೋವಿಡ್​​-19 ಕೇಸ್​ ದಾಖಲಿದ್ದರಿಂದ ಒಟ್ಟು 20 ಮಂದಿಗೆ ಕೊರೋನಾ ವಕ್ಕರಿಸಿದೆ. ಇತ್ತೀಚೆಗೆ ಮಕ್ಕಳನ್ನು ಕಾಡುತ್ತಿದ್ದ ವೈರಸ್ ಈಗ ಬ್ಯಾಂಕ್ ಉದ್ಯೋಗಿಗಳನ್ನು ಕಾಡಲಾರಂಭಿಸಿದೆ.

ಇನ್ನು, ವಿರಾಜಪೇಟೆ ತಾಲ್ಲೂಕಿನ ಶಾಂತಿನಗರದ ಸೋಂಕಿತ ವ್ಯಕ್ತಿಯಿಂದಲೇ ಮಹಾಮಾರಿ ನಾಲ್ವರ ಹೆಗಲೇರಿದೆ. ಒಟ್ಟಿನಲ್ಲಿ ಕೊಡಗಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಪ್ರಕರಣಗಳು ಮಿತಿಮೀರುತ್ತಿದ್ದು, ಜನರು ತೀವ್ರ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ರಾಜ್ಯದ ವಿವಿಧ ಜಿಲ್ಲೆಗಳಂತೆಯೇ ಕೊಡಗಿನಲ್ಲೂ ಕೊರೋನಾ ವೈರಸ್​ ಹಾವಳಿ ಮುಂದುವರಿದಿದೆ. ಇದರ ಪರಿಣಾಮ ಕೋವಿಡ್​-19 ವೈರಸ್​​ಗೆ ಜಿಲ್ಲೆಯಲ್ಲಿ ಮತ್ತೊಬ್ಬರು ಬಲಿಯಾಗಿದ್ದಾರೆ. ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪದ ಅಚ್ಚಪ್ಪ ಬಡಾವಣೆಯ 86 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ.

ಜುಲೈ 6ನೇ ತಾರೀಕಿನಂದು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧೆಯನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮಾರನೇ ದಿನ ಏಳರಂದು ವೃದ್ದೆಗೆ ಕೊರೋನಾ ಇರುವುದು ದೃಢಪಟ್ಟಿತ್ತು. ತೀರ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಗೆ ವೆಂಟಿಲೇಟರ್​​ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

ವೃದ್ದೆಗೆ ಹಲವು ವರ್ಷಗಳಿಂದ ಅಧಿಕ ರಕ್ತದೊತ್ತಡ, ಮಧುಮೇಹ ಕಾಯಿಲೆಗಳು ಇದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಹೀಗಾಗಿ ಡೆಡ್ಲಿ ವೈರಸ್ ಕೊರೋನಾ ಮಹಾಮಾರಿಗೆ ಕೊಡಗಿನಲ್ಲಿ ಇದು ಎರಡನೆ ಬಲಿ ಆಗಿದೆ. ಮೃತ ವೃದ್ದೆಯ ಅಂತ್ಯ ಸಂಸ್ಕಾರವು ಸರ್ಕಾರದ ಮಾರ್ಗಸೂಚಿಯಂತೆ ನಿಗದಿತ ಸ್ಮಶಾನದಲ್ಲಿ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಮಾರಕ ಕೊರೋನಾಗೆ ಎರಡನೇ ಬಲಿ: ಸೋಂಕಿತರ ಸಂಖ್ಯೆ 156ಕ್ಕೆ ಏರಿಕೆ

ಇನ್ನು, ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಜಿಲ್ಲೆಯಲ್ಲಿ ಮತ್ತೆ ಶನಿವಾರ ಐದು ಜನರಿಗೆೆ ಸೋಂಕು ಕಾಣಿಸಿಕೊಂಡಿದೆ. ಅದರಲ್ಲೂ ಕೊರೋನಾ ವಾರಿಯರ್ಸ್​ ಎಂದೇ ಕರೆಯುವ ಆರೋಗ್ಯ ಕಾರ್ಯಕರ್ತರಿಗೆ ಬೆಂಬಿಡದೇ ಕೊರೋನಾ ಪದೇಪದೇ ಕಾಡುುತ್ತಿದೆ. ಹೀಗಾಗಿ ಮೂವರು ಆರೋಗ್ಯ ಕಾರ್ಯಕರ್ತೆಯರಿಗೆ ಸೋಂಕು ಬಂದಿದೆ.

ಬೆಂಗಳೂರಿಂದ ಕೊಡಗು ಜಿಲ್ಲೆಗೆ ಬಂದ ವ್ಯಕ್ತಿಗೆ ಬಂದ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೂ ಕೊರೋನಾ ಕಾಣಿಸಿಕೊಂಡಿದೆ. ಇದುವರೆಗೂ ಕೊಡಗಿನಲ್ಲಿ ಒಟ್ಟು ಕೊರೋನಾ ಪೀಡಿತರ ಸಂಖ್ಯೆ 156 ಆಗಿದೆ.
Published by:Ganesh Nachikethu
First published: