Manish Sisodia| ಶಾಲೆ ತೆರೆಯಲು ಇನ್ನೂ ವಿಳಂಬವಾದರೆ ಇಡೀ ಪೀಳಿಗೆಯ ನಡುವೆ ಜ್ಞಾನದ ಅಂತರವಾಗಲಿದೆ; ಮನೀಶ್ ಸಿಸೋಡಿಯಾ

ಚಿಕ್ಕ ಮಕ್ಕಳಿಗೆ ಕಡಿಮೆ ಅಪಾಯವಿರುವುದರಿಂದ ತಜ್ಞರು ಕೂಡಾ ಪ್ರಾಥಮಿಕ ಶಾಲೆಗಳನ್ನು ಪುನಃ ತೆರೆಯಬಹುದು ಎಂದು ಹೇಳಿದ್ದಾರೆ. ಆದ್ದರಿಂದ ನಾವು 9 ರಿಂದ 12 ನೇ ತರಗತಿಯ ಶಾಲೆಗಳನ್ನು ಆರಂಭಿಸಲು ಯೋಚಿಸಿದ್ದೇವೆ" ಎಂದು ಸಿಸೋಡಿಯಾ ತಿಳಿಸಿದ್ದಾರೆ.

ಮನೀಶ್ ಸಿಸೋಡಿಯಾ.

ಮನೀಶ್ ಸಿಸೋಡಿಯಾ.

 • Share this:
  ನವ ದೆಹಲಿ (ಸೆಪ್ಟೆಂಬರ್​ 01); ಕೊರೋನಾ ವೈರಸ್​ ಕಾರಣಕ್ಕೆ ಕಳೆದ 1.5 ವರ್ಷಗಳಿಂದ ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು. ಹಲವೆಡೆ ಎಸ್​ಎಸ್​ಎಲ್​ಸಿ ಪರೀಕ್ಷೆಗಳನ್ನು ನಡೆಸಲಾಗದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ಆದರೆ, ಇದೀಗ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ಅನೇಕ ರಾಜ್ಯಗಳು ಮತ್ತೆ ಶಾಲೆಗಳನ್ನು ತೆರೆಯಲು ಮುಂದಾಗಿದ್ದಾರೆ. ಹೀಗಾಗಿ ದೆಹಲಿಯ ಎಎಪಿ ಸರ್ಕಾರ ಸಹ ಕೊರೊನಾದಿಂದಾಗಿ ಬಂದ್‌ ಆಗಿದ್ದ ಶಾಲೆಗಳನ್ನು ಸುಮಾರು 1.5 ವರ್ಷಗಳ ನಂತರ ಕಟ್ಟುನಿಟ್ಟಾದ ಸುರಕ್ಷತಾ ಪ್ರೋಟೋಕಾಲ್ ನಡುವೆ ಇಂದಿನಿಂದ ಶಾಲೆಗಳನ್ನು ಆರಂಭಿಸಿದೆ. "9-12 ತರಗತಿಗಳಿಗೆ ಮಾತ್ರ ದೆಹಲಿ ಸರ್ಕಾರ ಅನುಮತಿ ನೀಡಿದ್ದು, ಶಾಲೆಗಳನ್ನು ಮತ್ತೆ ತೆರೆಯುವ ನಿರ್ಧಾರವನ್ನು ಇನ್ನು ಮುಂದೆ ವಿಳಂಬ ಮಾಡಲಾಗುವುದಿಲ್ಲ" ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

  ಈ ಬಗ್ಗೆ  ಹೇಳಿಕೆ ನೀಡಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ "ಕೊರೋನಾ ಕಾರಣಕ್ಕೆ ಶಾಲೆಗಳನ್ನು ತೆರೆಯಲು ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಒಂದು ವೇಳೆ ಇನ್ನೂ ವಿಳಂಬ ಮಾಡಿದರೆ ಇಡೀ ಪೀಳಿಗೆಯು ಜ್ಞಾನದ ಅಂತರವನ್ನು ಅನುಭವಿಸುತ್ತದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಲಿದೆ" ಎಂದು ಸಿಸೋಡಿಯಾ ತಿಳಿಸಿದ್ದಾರೆ.

  ಶಿಕ್ಷಕರಿಗೆ ವ್ಯಾಕ್ಸಿನೇಷನ್, ತರಗತಿಗಳಲ್ಲಿ ಶೇ.50 ರಷ್ಟು ಆಸನ ಸಾಮರ್ಥ್ಯ, ತೆರೆದ ಪ್ರದೇಶದಲ್ಲಿ ಊಟದ ವಿರಾಮಗಳು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಶಾಲೆಗಳಲ್ಲಿ ಈ ಎಲ್ಲಾ ನಿರ್ಬಂಧಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಎಂದು ರಾಜ್ಯ ಸರ್ಕಾರವು ಹೇಳಿದೆ.

  "ಕಳೆದ 1.5 ವರ್ಷಗಳಿಂದ ಶಾಲೆಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸಿದ್ದಾರೆ. ನಾವೆಲ್ಲರೂ ಅವರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದೇವೆ. ಜೊತೆಗೆ ಅವರ ಅಧ್ಯಯನದ ಬಗ್ಗೆಯು. ಶಾಲೆ ತೆರೆಯುವ ಬಗ್ಗೆ ನಾವು ಸಲಹೆಗಳನ್ನು ಕೇಳಿದಾಗ, ಶೇ.70 ರಷ್ಟು ಪೋಷಕರು ಶಾಲೆಗಳನ್ನು ತೆರೆಯಲು ಬಯಸಿದ್ದಾರೆ. ಹೆಚ್ಚಿನ ಪೋಷಕರು ಪ್ರೋಟೋಕಾಲ್ ಅನ್ನು ಅನುಸರಿಸುವಂತೆ ಒತ್ತಾಯಿಸಿದ್ದಾರೆ" ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.

  "ಚಿಕ್ಕ ಮಕ್ಕಳಿಗೆ ಕಡಿಮೆ ಅಪಾಯವಿರುವುದರಿಂದ ತಜ್ಞರು ಕೂಡಾ ಪ್ರಾಥಮಿಕ ಶಾಲೆಗಳನ್ನು ಪುನಃ ತೆರೆಯಬಹುದು ಎಂದು ಹೇಳಿದ್ದಾರೆ. ಆದ್ದರಿಂದ ನಾವು 9 ರಿಂದ 12 ನೇ ತರಗತಿಯ ಶಾಲೆಗಳನ್ನು ಆರಂಭಿಸಲು ಯೋಚಿಸಿದ್ದೇವೆ" ಎಂದು ಸಿಸೋಡಿಯಾ ತಿಳಿಸಿದ್ದಾರೆ.

  ಇದನ್ನೂ ಓದಿ: LPG Gas Price Hike| ಬೆಲೆ ಏರಿಕೆ ಅನ್ಯಾಯದ ವಿರುದ್ಧ ದೇಶವು ಒಗ್ಗೂಡುತ್ತಿದೆ; ಕೇಂದ್ರದ ವಿರುದ್ಧ ರಾಹುಲ್ ಕಿಡಿ

  ಸಾಂಕ್ರಾಮಿಕ ರೋಗದಿಂದಾಗಿ ನಿರ್ಣಾಯಕ ವರ್ಷವನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ, ದೆಹಲಿ ಸರ್ಕಾರವು ಸೇತು ಬಂಧ ಕೋರ್ಸ್‌ಗಳನ್ನು ನಡೆಸಲು ಯೋಜಿಸಿದೆ. "ಸಾಂಕ್ರಾಮಿಕ ರೋಗವು ನಮ್ಮ ದಾರಿಯಲ್ಲಿ ಸಾಕಷ್ಟು ಸವಾಲುಗಳನ್ನು ಒಡ್ಡಿದೆ. ವಿದ್ಯಾರ್ಥಿಗಳು ಈಗಾಗಲೇ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಇದನ್ನು ಅಪಾಯಕಾರಿ ನಿರ್ಧಾರ ಎಂದು ಕರೆಯಬಹುದು, ಆದರೆ ವಿದ್ಯಾರ್ಥಿಗಳು ಅವರಿಗೆ ಬೇಕಾಗದ ಸಾಕಷ್ಟು ಸಂಪನ್ಮೂಲಗಳನ್ನು ಪಡೆಯಲು ಸಾಧ್ಯವಾಗದೆ ಅಪಾಯದಲ್ಲಿದ್ದಾರೆ" ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

  "ಪ್ರಸ್ತುತ, ದೆಹಲಿಯಲ್ಲಿ ಪ್ರತಿದಿನ 30-35 ಕೊರೊನಾ ಪ್ರಕರಣಗಳು ವರದಿಯಾಗುತ್ತಿದೆ. ನಾವೀಗ ಮುಂದುವರೆಯಬೇಕು, ಈ ನಿರ್ಧಾರವು ಇನ್ನಷ್ಟು ವಿಳಂಬವಾದರೆ, ಇಡೀ ಪೀಳಿಗೆಯು ಜ್ಞಾನದ ಅಂತರವನ್ನು ಅನುಭವಿಸುತ್ತದೆ" ಎಂದು ದೆಹಲಿ ಡಿಸಿಎಂ ಸಿಸೋಡಿಯಾ ತಿಳಿಸಿದ್ದಾರೆ.

  ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಶ್ವಾನಗಳು; ನಮ್ಮ ಮಿಲಿಟರಿ ಪಡೆಯದ್ದಲ್ಲ ಎಂದ ಅಮೆರಿಕ!

  ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: