ಕೆಲಸ ಹೋದರೆ ಚಿಂತೆ ಬೇಡ; ಮೋದಿ ಸರ್ಕಾರದ ಈ ಯೋಜನೆಯಿಂದ ನಿಮಗೆ ಸಿಗುತ್ತೆ 2 ವರ್ಷ ಸಂಬಳ

ಇವತ್ತು ದೇಶ ತೀವ್ರ ಬಿಕ್ಕಟ್ಟಿನಲ್ಲಿದೆ. ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಇನ್ನೂ ಅನೇಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ನೀವೂ ಇಂಥ ಸ್ಥಿತಿಯಲ್ಲಿದ್ದರೆ ಈ ಸುದ್ದಿ ತಪ್ಪದೇ ಓದಿ.

ಪ್ರಧಾನಿ ನರೇಂದ್ರ ಮೋದಿ.

ಪ್ರಧಾನಿ ನರೇಂದ್ರ ಮೋದಿ.

 • Share this:
  ನವದೆಹಲಿ: ಕೊರೋನಾ ವೈರಸ್ ಸೋಂಕು ಸಾಂಕ್ರಾಮಿಕಗೊಂಡು ಇಡೀ ಅರ್ಥ ವ್ಯವಸ್ಥೆಯನ್ನೇ ನಾಶ ಮಾಡುತ್ತಿದೆ. ಬಹುತೇಕ ಎಲ್ಲಾ ಉದ್ಯಮಗಳು ನೆಲಕಚ್ಚಿದ್ದು, ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಹಿಡಿಯಲಿದೆ. ಕೋಟ್ಯಂತರ ಉದ್ಯೋಗಿಗಳಿಗೆ ಸಂಚಕಾರ ಇದೆ. ಈಗಾಗಲೇ ಹಲವು ಕಂಪನಿಗಳು ಸಿಬ್ಬಂದಿ ವೆಚ್ಚ ಕಡಿತ ಮಾಡುತ್ತಿವೆ. ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ಧಾರೆ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರಿಗೆ ನೆರವಾಗಬಹುದಾದ ಕೇಂದ್ರ ಸರ್ಕಾರದ ಯೋಜನೆಯೊಂದು ಅಸ್ತಿತ್ವದಲ್ಲಿದೆ. ಅದೇ “ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ್” ಯೋಜನೆ.

  ಈ ಯೋಜನೆಯಲ್ಲಿ ಸಂತ್ರಸ್ತ ವ್ಯಕ್ತಿಗಳು 24 ತಿಂಗಳ ಕಾಲ, ಅಂದರೆ 2 ವರ್ಷಗಳವರೆಗೆ ಸಂಬಳ ಪಡೆಯುವ ಅವಕಾಶ ಇದೆ.

  ಎಷ್ಟು ಸಿಗುತ್ತೆ ಸಂಬಳ?

  ಕೆಲಸ ಕಳೆದುಕೊಳ್ಳುವ 90 ದಿನಗಳ ಮುಂಚಿನವರೆಗೂ ಇದ್ದ ಸರಾಸರಿ ಸಂಬಳದ ಶೇ. 25 ಭಾಗವನ್ನು ಸಂತ್ರಸ್ತರಿಗೆ ಸಂಬಳವಾಗಿ ನೀಡಲಾಗುತ್ತದೆ. ಅಂದರೆ, 20 ಸಾವಿರ ರೂ ಮಾಸಿಕ ಸಂಬಳ ಪಡೆಯುತ್ತಿದ್ದವರಿಗೆ ಪ್ರತೀ ತಿಂಗಳು 5 ಸಾವಿರ ರೂ ಸಿಗುತ್ತದೆ.

  ಇದನ್ನೂ ಓದಿ: ಆನ್​ಲೈನ್ ಶಿಕ್ಷಣದ ಹೆಸರಲ್ಲಿ ಶೋಷಣೆಯಾದರೆ ಕಠಿಣ ಕ್ರಮ: ಶಿಕ್ಷಣ ಸಂಸ್ಥೆಗಳಿಗೆ ಸುರೇಶ್ ಕುಮಾರ್ ಎಚ್ಚರಿಕೆ

  ಯಾರೆಲ್ಲಾ ಫಲಾನುಭವಿಗಳು?

  ಇದು ESIC (ಎಂಪ್ಲಾಯೀಸ್ ಸ್ಟೇಟ್ ಇನ್ಷೂರೆನ್ಸ್ ಕಾರ್ಪೊರೇಶನ್) ಸಂಸ್ಥೆಯ ಆರೋಗ್ಯ ವಿಮೆ ಅಳವಡಿಸಿರುವ ಸಂಸ್ಥೆಗಳ ಉದ್ಯೋಗಿಗಳಿಗೆ ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ ಅನ್ವಯವಾಗುತ್ತದೆ. ಸಂತ್ರಸ್ತಗೊಂಡವರು ಈ ಸಂಸ್ಥೆಯಲ್ಲಿ ಕನಿಷ್ಠ 2 ವರ್ಷ ಕೆಲಸ ಮಾಡಿರಬೇಕು. ಕೆಟ್ಟ ನಡವಳಿಕೆಯ ಕಾರಣದಿಂದ ಕಂಪನಿಯಿಂದ ಉಚ್ಛಾಟಿತಗೊಂಡಿರಬಾರದು. ಯಾವುದೇ ಕ್ರಿಮಿನಲ್ ಪ್ರಕರಣ ಹೊಂದಿರಬಾರದು. ಕಂಪನಿಯಿಂದ ವಿಆರ್​ಎಸ್ ಹೊಂದಿರಬಾರದು ಎಂಬುದು ಕೆಲ ಷರುತ್ತುಗಳು. ಹಾಗೆಯೇ, ಸಂತ್ರಸ್ತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಅನ್ನು ಲಿಂಕ್ ಮಾಡಿರಬೇಕು.

  ನೀವು ಹೆಚ್ಚಿನ ಮಾಹಿತಿಗೆ ESIC ವೆಬ್​ಸೈಟ್​ನ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಬಹುದು.

  https://www.esic.nic.in/attachments/circularfile/93e904d2e3084d65fdf7793e9098d125.pdf

  ಎರಡು ವರ್ಷದ ಹಿಂದೆ ಮಾಡಿದ ಈ ಯೋಜನೆ ಈಗ ಕೆಲ ಉದ್ಯೋಗಿಗಳಿಗೆ ತಾತ್ಕಾಲಿಕ ರಿಲೀಫ್ ಕೊಡಬಲ್ಲುದು.

  First published: