HOME » NEWS » Coronavirus-latest-news » KFC SUSPENDS ITS FINGER LICKIN GOOD SLOGAN AMID PANDEMIC GNR

ಇಟ್ಸ್​ ಫಿಂಗರ್​​ ಲಿಕ್ಕಿಂಗ್​​ ಗುಡ್​​: 64 ವರ್ಷದ ಹಳೇ ಸ್ಲೋಗನ್​​ ಕೈಬಿಟ್ಟ ಕೆಎಫ್​​ಸಿ; ಇಲ್ಲಿದೆ ಕಾರಣ

ಕೊರೋನಾ ಸಂದರ್ಭದಲ್ಲಿ ಫಿಂಗರ್​ ಲಿಕ್​ ಮಾಡಿ ಎಂದು ಹೇಳುವುದು ತಪ್ಪು. ಹೀಗಾಗಿ ಇದನ್ನು ತಾತ್ಕಲಿಕವಾಗಿ ಕೈಬಿಟ್ಟಿದ್ದೇವೆ. ಮುಂದೆ ಎಲ್ಲವೂ ಸುಧಾರಿಸಿದ ಬಳಿಕ ಮತ್ತೆ ಬಳಸುತ್ತೇವೆ ಎಂದರು ಕೇಟ್​ ವಾಲ್.​​

news18-kannada
Updated:August 26, 2020, 9:49 AM IST
ಇಟ್ಸ್​ ಫಿಂಗರ್​​ ಲಿಕ್ಕಿಂಗ್​​ ಗುಡ್​​: 64 ವರ್ಷದ ಹಳೇ ಸ್ಲೋಗನ್​​ ಕೈಬಿಟ್ಟ ಕೆಎಫ್​​ಸಿ; ಇಲ್ಲಿದೆ ಕಾರಣ
ಕೆಎಫ್​ಸಿ
  • Share this:
ಬೆಂಗಳೂರು(ಆ.26): ಇಡೀ ಪ್ರಪಂಚವೇ ಮಾರಕ ಕೊರೋನಾ ವೈರಸ್​ನಿಂದ ತತ್ತರಿಸಿ ಹೋಗಿದೆ. ಹೀಗಾಗಿ ಈ ಸೋಂಕನ್ನು ತಹಬದಿಗೆ ವೈದ್ಯರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಇದರ ಭಾಗವಾಗಿಯೇ ಕೊರೋನಾ ಸೋಂಕು ತಪ್ಪಿಸಲು ನಾವು ಯಾವುದೇ ಕಾರಣಕ್ಕೂ ನಮ್ಮ ಕೈಗಳನ್ನು ಮೂಗು, ಕಣ್ಣು ಮತ್ತು ಬಾಯಿಯಲ್ಲಿ ಪದೇ ಪದೇ ಇಡಬಾರದು. ಇದನ್ನು ತಪ್ಪಿಸಬೇಕು. ಇಲ್ಲದೇ ಹೋದಲ್ಲಿ ನಾವು ಹೀಗೆ ಮಾಡಿದರೆ ಅಜಾಗರೂಕತೆಯಿಂದ ಕೊರೋನಾ ವೈರಸ್ ನಮ್ಮ ದೇಹವನ್ನು ಪ್ರವೇಶಿಸಬಹುದು. ಆದ್ದರಿಂದ ಮೂಗು, ಕಣ್ಣು, ಬಾಯಿಯಲ್ಲಿ ನಮ್ಮ ಕೈಗಳನ್ನು ಇಡಬಾರದು ಎಂದು ವೈದ್ಯರು ಶಿಫಾರಸು ಮಾಡಿದ್ದಾರೆ. ಹೀಗಿರುವಾಗ ಇದನ್ನು ಬೆಂಬಲಿಸಿ ಪ್ರತಿಷ್ಠಿತ ಕೆಂಟುಕಿ ಫ್ರೈಡ್ ಚಿಕನ್(ಕೆಎಫ್​​ಸಿ) ಸಂಸ್ಥೆ, ಇಟ್ಸ್ ಫಿಂಗರ್ ಲಿಕ್ಕಿಂಗ್ ಗುಡ್ ಎನ್ನುವ ತನ್ನ 64 ವರ್ಷದ ಹಳೆಯ ಸ್ಲೋಗನ್​​ ಅನ್ನು ಕೈಬಿಟ್ಟಿದೆ. ಸರ್ಕಾರದ ರೂಲ್ಸ್​​ಗೆ ನಮ್ಮ ಸ್ಲೋಗನ್​​ ವಿರುದ್ಧವಾಗಿದೆ. ಹೀಗಾಗಿ ಇಂದಿಗೆ ನಮ್ಮ ಸ್ಲೋಗನ್​ ಸೂಕ್ತವಲ್ಲ ಎಂದು ಕೆಎಫ್​ಸಿ ಸಂಸ್ಥೆ ತಿಳಿಸಿದೆ. 

ಕೊರೋನಾ ವೈರಸ್​​ ಇಡೀ ಜಗತ್ತಿಗೆ ಮಾರಕವಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ನಾವು ಇಟ್ಸ್​ ಫಿಂಗರ್​ ಲಿಕ್ಕಿಂಗ್​​ ಗುಡ್​​ ಎಂದು ಬಳಸಬಾರದು. ಹೀಗಾಗಿ ನಾವು ತಾತ್ಕಲಿಕವಾಗಿ ಇದನ್ನು ಕೈಬಿಡುತ್ತಿದ್ದೇವೆ ಎಂದಿರುವ ಕೆಎಫ್​ಸಿ ಸಂಸ್ಥೆ, ಇತ್ತೀಚೆಗೆ ಆಗಸ್ಟ್​​ 24ನೇ ತಾರೀಕಿನಂದು ಲಾಂಚ್​ ಮಾಡಿದ ಅಭಿಯಾನದಲ್ಲಿ ಚಿಕನ್​​ ಬಕೆಟ್​ ಮೇಲಿದ್ದ ಇಟ್ಸ್​ ಫಿಂಗರ್​​ ಲಿಕ್ಕಿಂಗ್​​ ಗುಡ್​ ಎನ್ನುವ ಸ್ಲೋಗನ್​​ ಅಳಿಸಿ ಹಾಕಿದೆ.

ಈ ಸಂಬಂಧ ಮಾಧ್ಯಮದೊಂದಿಗೆ ಮಾತಾಡಿರುವ ಕೆಎಫ್​​ಸಿ ಸಂಸ್ಥೆ ರೀಟೆಲ್​ ಮುಖ್ಯಸ್ಥ ಕೇಟ್​ ವಾಲ್​​, ನಾವು 64 ವರ್ಷದಿಂದ ಈ ಸ್ಲೋಗನ್​ ಬಳಸುತ್ತಿದ್ದೆವು. ಇದು ಇಡೀ ಜಗತ್ತಿಗೆ ಗೊತ್ತಿರುವ ಫೇಮಸ್​ ಸ್ಲೋಗನ್​. ನಮ್ಮ ಚಿಕನ್​​ ತಿಂದ ಗ್ರಾಹಕರು ಯಾರೇ ಆಗಲಿ ಕೊನೆಗೂ ತಮ್ಮ ಬೆರಳನ್ನು ಲಿಕ್​ ಮಾಡುತ್ತಾರೆ. ಆದರೀಗ, ಕೊರೋನಾ ಇರುವುದರಿಂದ ಹೀಗೆ ಮಾಡಲಾಗುವುದಿಲ್ಲ. ನಮ್ಮ ಸ್ಲೋಗನ್​​ ಇಂದಿಗೆ ಸೂಕ್ತವಲ್ಲ ಎಂದು ತೆಗೆದು ಹಾಕಿದ್ದೇವೆ ಎಂದರು.

ಇದನ್ನೂ ಓದಿ: ಶಾಲಾ-ಕಾಲೇಜುಗಳ ರೀ-ಓಪನ್ ಮತ್ತೆ ವಿಳಂಬ; ಶೀಘ್ರವೇ ಕೇಂದ್ರದಿಂದ ಅಧಿಸೂಚನೆ?

ಕೊರೋನಾ ಸಂದರ್ಭದಲ್ಲಿ ಫಿಂಗರ್​ ಲಿಕ್​ ಮಾಡಿ ಎಂದು ಹೇಳುವುದು ತಪ್ಪು. ಹೀಗಾಗಿ ಇದನ್ನು ತಾತ್ಕಲಿಕವಾಗಿ ಕೈಬಿಟ್ಟಿದ್ದೇವೆ. ಮುಂದೆ ಎಲ್ಲವೂ ಸುಧಾರಿಸಿದ ಬಳಿಕ ಮತ್ತೆ ಬಳಸುತ್ತೇವೆ ಎಂದರು ಕೇಟ್​ ವಾಲ್.​​
Published by: Ganesh Nachikethu
First published: August 26, 2020, 9:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading