ಕೊರೋನಾ ಭೀತಿ: ಜೂ.14ರಿಂದ ತೆರೆಯಲ್ಲ ಶಬರಿಮಲೆ, ಭಕ್ತರಿಗಿಲ್ಲ ಅಯ್ಯಪ್ಪನ ದರ್ಶನ

ಶಬರಿಮಲೆ ತೆರಯಬೇಕೇ ಬೇಡವೇ ಎನ್ನುವುದರ ಬಗ್ಗೆ ಗುರುವಾರ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸಭೆ ನಡೆಯಿತು. ಸಭೆಯಲ್ಲಿ ಕೇರಳದ ದೇವಸ್ವಂ ಖಾತೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ಸೇರಿದಂತೆ ಅರ್ಚಕರು ಭಾಗಿಯಾಗಿದ್ದರು.

ಶಬರಿಮಲೆ (ಪ್ರಾತಿನಿಧಿಕ ಚಿತ್ರ).

ಶಬರಿಮಲೆ (ಪ್ರಾತಿನಿಧಿಕ ಚಿತ್ರ).

 • Share this:
  ತಿರುವನಂತಪುರಂ(ಜೂ.11): ದೇಶದಲ್ಲಿ ಮಾರಕ ಕೊರೋನಾ ವೈರಸ್​​ ಸೋಂಕು ತೀವ್ರತೆ ಕಡಿಮೆಯಾಗದ ಕಾರಣ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ಓಪನ್​ ಮಾಡದಿರಲು ನಿರ್ಧರಿಸಲಾಗಿದೆ. ಕೇಂದ್ರದ ಮಾರ್ಗಸೂಚಿಯಂತೆ ಹತ್ತಾರು ಷರತ್ತುಗಳ ನಡುವೆ ದೇವಾಲಯ ತೆರೆಯಬಹುದಾಗಿದೆ. ಆದರೆ, ಅಯ್ಯಪ್ಪನ ದರ್ಶನಕ್ಕೆ ಭಕ್ತರು ಗಣನೀಯ ಸಂಖ್ಯೆಯಲ್ಲಿ ಆಗಮಿಸುವುದರಿಂದ ಸಾಮಾಜಿಕ ಅಂತರ ಸೇರಿದಂತೆ ಕೇಂದ್ರದ ಮಾರ್ಗಸೂಚಿ ಪಾಲನೆ ಮಾಡುವುದು ಕಷ್ಟಕರ. ಹೀಗಾಗಿ ಭಕ್ತರಿಗೆ ಜೂನ್​​ 14ರಿಂದ ಅಯ್ಯಪ್ಪನ ದರ್ಶನ ಇಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಿಳಿಸಿದೆ.

  ಕೇಂದ್ರ ಸರ್ಕಾರ ಇತ್ತೀಚೆಗೆ ದೇವಾಲಯಗಳು ಓಪನ್​​ ಮಾಡಲು ಒಂದಷ್ಟು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿತ್ತು. ಅದರಂತೆಯೇ ಜೂನ್ 14ರಿಂದ ಶಬರಿಮಲೆಯಲ್ಲಿ ಮಾಸಿಕ ಪೂಜೆ ನಡೆಸಬೇಕಿತ್ತು. ಆದರೀಗ, ಅಯ್ಯಪ್ಪನ ದರ್ಶನಕ್ಕೆ ಕೇವಲ ಕೇರಳ ಮಾತ್ರವಲ್ಲದೇ, ದೇಶದ ವಿವಿಧ ರಾಜ್ಯಗಳಿಂದ ಶಬರಿಮಲೆಗೆ ಆಗಮಿಸುತ್ತಾರೆ. ಇದರಿಂದ ಕೊರೋನಾ ಸೋಂಕು ಮತ್ತಷ್ಟು ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ. ಆದ್ದರಿಂದ ಶಬರಿಮಲೆ ದೇಗುವ ತೆರೆಯಲು ಸಾಧ್ಯವಿಲ್ಲ ಎಂದು ಟಿಡಿಬಿ ಹೇಳಿದೆ.

  ಶಬರಿಮಲೆ ತೆರಯಬೇಕೇ ಬೇಡವೇ ಎನ್ನುವುದರ ಬಗ್ಗೆ ಗುರುವಾರ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸಭೆ ನಡೆಯಿತು. ಸಭೆಯಲ್ಲಿ ಕೇರಳದ ದೇವಸ್ವಂ ಖಾತೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ಸೇರಿದಂತೆ ಅರ್ಚಕರು ಭಾಗಿಯಾಗಿದ್ದರು.

  ತಿಂಗಳ ಪೂಜೆ ನಡೆಸೋಣ. ಸದ್ಯಕ್ಕೆ ಅಯ್ಯಪ್ಪನ ದೇವಾಲಯದ ಬಾಗಿಲು ತೆಗೆಯುವುದು ಬೇಡ. ಜತೆಗೆ ದೇವಾಲಯದಲ್ಲಿ ನಡೆಯಬೇಕಿದ್ದ ಜಾತ್ರೆಯನ್ನು ರದ್ದುಗೊಳಿಸೋಣ ಎಂದು ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ.
  First published: