HOME » NEWS » Coronavirus-latest-news » KERALA RETURNS 1 LAKH UNUSED REMEDESIVIR VIALS TO CENTRE SESR

ಕೋವಿಡ್​ ನಿರ್ವಹಣೆಯಲ್ಲಿ ಯಶಸ್ವಿ; 1 ಲಕ್ಷ ರೆಮ್ಡಿಸಿವರ್​ ಔಷಧವನ್ನು ಕೇಂದ್ರಕ್ಕೆ ಮರಳಿಸಿದ ಕೇರಳ

ಪ್ರತಿ ರಾಜ್ಯದಲ್ಲಿ ರೆಮಿಡಿಸಿವರ್​ ಅವಶ್ಯಕತೆಯನ್ನು ಪರಿಗಣಿಸಿ ಮತ್ತು ಅದರ ಸಮರ್ಪಕ ಲಭ್ಯತೆಗೆ ಅನುಗುಣವಾಗಿ ಮೇ 16ರಂದು ಔಷಧಗಳ ಹಂಚಿಕೆ ಮಾಡಲಾಗಿತ್ತು.

news18-kannada
Updated:May 12, 2021, 6:41 PM IST
ಕೋವಿಡ್​ ನಿರ್ವಹಣೆಯಲ್ಲಿ ಯಶಸ್ವಿ; 1 ಲಕ್ಷ ರೆಮ್ಡಿಸಿವರ್​ ಔಷಧವನ್ನು ಕೇಂದ್ರಕ್ಕೆ ಮರಳಿಸಿದ ಕೇರಳ
ಪಿಣರಾಯಿ ವಿಜಯನ್
  • Share this:
ಕೋವಿಡ್​ ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿಯಾಗಿರುವ ರಾಜ್ಯ ಕೇರಳ. ಸೋಂಕಿನ ಹತೋಟಿಗೆ ಯಶಸ್ವಿಯಾಗಿ ಕಾರ್ಯಚಾರಣೆ ನಡೆಸಿರುವ ಕೇರಳ ಸರ್ಕಾರ ಇದೀಗ ಬಳಕೆಯಾಗದಿರುವ 1 ಲಕ್ಷದಷ್ಟು ರೆಮಿಡಿಸಿವರ್​ ಔಷಧಿಯನ್ನು ಕೇಂದ್ರಕ್ಕೆ ವಾಪಸ್ಸು ನೀಡಿದೆ. ರಾಜ್ಯದಲ್ಲಿ ಅಗತ್ಯವಾಗಿರುವಷ್ಟು ಔಷಧ ಇರುವ ಹಿನ್ನಲೆ ಇವುಗಳನ್ನು ವಾಪಸ್ಸು ಮರಳಿಸಲಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ. ದೇಶದ ಹಲವು ರಾಜ್ಯಗಳಲ್ಲಿ ರೆಮಿಡಿಸವರ್​ ಕೊರತೆ ಕಂಡು ಬಂದಿತು. ಈ ಹಿನ್ನಲೆ ಕಳೆದವಾರವಷ್ಟೇ ಕೇಂದ್ರ ಸರ್ಕಾರ ಹಲವು ರಾಜ್ಯಗಳಿಗೆ ರೆಮಿಡಿಸಿವರ್​ ಔಷಧಿಯನ್ನು ಹಂಚಿಕೆ ಮಾಡಲಾಗಿತ್ತು. ಕೇಂದ್ರ ರಸಗೊಬ್ಬರ ಸಚಿವ ಡಿವಿ ಸದಾನಂದ ಗೌಡ ಅವರು ಈ ಹಂಚಿಕೆಯನ್ನು ಪ್ರಕಟಿಸಿದ್ದರು.
ಪ್ರತಿ ರಾಜ್ಯದಲ್ಲಿ ರೆಮಿಡಿಸಿವರ್​ ಅವಶ್ಯಕತೆಯನ್ನು ಪರಿಗಣಿಸಿ ಮತ್ತು ಅದರ ಸಮರ್ಪಕ ಲಭ್ಯತೆಗೆ ಅನುಗುಣವಾಗಿ ಮೇ 16ರಂದು ಔಷಧಗಳ ಹಂಚಿಕೆ ಮಾಡಲಾಗಿತ್ತು.

ಸೋಂಕಿತರ ಚಿಕಿತ್ಸೆಯಲ್ಲಿ ರೆಮಿಡಿಸಿವರ್​ ಔಷಧ ಬಳಕೆಯಾಗುತ್ತಿದ್ದು, ಇದರ ಕೊರತೆ ಕಂಡು ಬಂದಿತು. 5. 300. 000 ಬಾಟಲ್​ ಔಷಧಗಳನ್ನು ಹಂಚಿಕೆ ಮಾಡಲಾಗಿತ್ತು
ಕೋವಿಡ್​ ನಿರ್ವಹಣೆ ವಿಚಾರದಲ್ಲಿ ಈಗಾಗಲೇ ದೇಶಕ್ಕೆ ಮಾದರಿಯಾಗಿ ಕೇರಳ ಮಾಡೆಲ್​ ಹೊರ ಹೊಮ್ಮಿದೆ. ಕೋವಿಡ್​ ಸಂಕಷ್ಟದಲ್ಲಿರುವವರಿಗೆ ವಿಶೇಷ ಪ್ಯಾಕೇಜ್​, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಏಕ ರೂಪದ ದರ ವಿಧಿಸುವ ಮೂಲಕ ಸರ್ಕಾರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ದೇಶದೆಲ್ಲೆಡೆ ಲಸಿಕೆ ಕೊರತೆ ಕೂಗು ಕೇಳಿ ಬಂದಿರುವ ಹೊತ್ತಿನಲ್ಲಿ ಕೇರಳ ರಾಜ್ಯ ಒಂದು ಹನಿ ಲಸಿಕೆ ವ್ಯರ್ಥ ಮಾಡದೇ ಪ್ರಧಾನಿಗಳ ಮೆಚ್ಚುಗೆಗೆ ಕೂಡ ಪಾತ್ರವಾಗಿದೆ.


ಒಬ್ಬರಿಗೆ ಲಸಿಕೆ ನೀಡಿದ ನಂತರ ಉಳಿಯುವ, ವ್ಯರ್ಥವಾಗಬಹುದಾದ ಲಸಿಕೆಯನ್ನು ಬಳಸಿಕೊಂಡು ನಾವು 74,26,164 ಡೋಸ್ ಲಸಿಕೆ ನೀಡಿದ್ದೇವೆ. ನಮ್ಮ ಆರೋಗ್ಯ ಕಾರ್ಯಕರ್ತರು, ದಾದಿಯರು ಈ ನಿಟ್ಟಿನಲ್ಲಿ ದಕ್ಷತೆಯಿಂದ ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಟ್ವೀಟ್​ ಮೂಲಕ ತಿಳಿಸಿದ್ದರು.

ಕೇರಳ ಲಸಿಕೆ ಸದ್ಭಳಕೆ ಮಾಡಿಕೊಂಡ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿದ್ದರು. ಈ ಕುರಿತು ಟ್ವೀಟ್​ ಮಾಡಿದ ಅವರು, ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಕೊರೊನಾ ಲಸಿಕೆಗಳು ಅನಗತ್ಯವಾಗಿ ವ್ಯರ್ಥವಾಗುವುದನ್ನು ತಪ್ಪಿಸುವುದು ಕೊರೊನಾ ವಿರುದ್ಧದ ಭಾರತದ  ಹೋರಾಟಕ್ಕೆ ಬಲ ತುಂಬಿದೆ ಎಂದರು.
Published by: Seema R
First published: May 12, 2021, 6:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories