HOME » NEWS » Coronavirus-latest-news » KERALA LOCKDOWN KERALA CM PINARAYI VIJAYAN ANNOUNCED COMPLETE LOCKDOWN FROM MAY 8 TO 16 IN KERALA SCT

Kerala Lockdown | ಕೇರಳದಲ್ಲಿ ಮೇ 8ರಿಂದ 16ರವರೆಗೆ ಲಾಕ್​ಡೌನ್ ಘೋಷಣೆ; ಅಗತ್ಯ ಸೇವೆಗಳು ಮಾತ್ರ ಲಭ್ಯ

Kerala Lockdown | ಕೇರಳದಲ್ಲಿ ಕೊರೋನಾ ಎರಡನೇ ಅಲೆಯ ಅಟ್ಟಹಾಸ ಹೆಚ್ಚಾಗಿರುವುದರಿಂದ ಮೇ 8ರಿಂದ 16ರವರೆಗೆ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಮೇ 8ರ ಬೆಳಗ್ಗೆ 6 ಗಂಟೆಯಿಂದ ಮೇ 16ರವರೆಗೆ ಕೇರಳದಲ್ಲಿ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿರಲಿವೆ.

Sushma Chakre | news18-kannada
Updated:May 6, 2021, 1:33 PM IST
Kerala Lockdown | ಕೇರಳದಲ್ಲಿ ಮೇ 8ರಿಂದ 16ರವರೆಗೆ ಲಾಕ್​ಡೌನ್ ಘೋಷಣೆ; ಅಗತ್ಯ ಸೇವೆಗಳು ಮಾತ್ರ ಲಭ್ಯ
ಪಿಣರಾಯಿ ವಿಜಯನ್
  • Share this:
ತಿರುವನಂತಪುರಂ (ಮೇ 6): ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಸೆಮಿ ಲಾಕ್​ಡೌನ್ ಘೋಷಿಸಿರುವ ಬೆನ್ನಲ್ಲೇ ನೆರೆಯ ರಾಜ್ಯವಾದ ಕೇರಳದಲ್ಲಿ ಸಂಪೂರ್ಣ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಕೇರಳದಲ್ಲಿ ಕೊರೋನಾ ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಮೇ 8ರಿಂದ 16ರವರೆಗೆ ಕೇರಳದಲ್ಲಿ ಲಾಕ್​ಡೌನ್ ಘೋಷಣೆಯಾಗಿದೆ. ಕೇರಳದಲ್ಲಿ ಕಳೆದ 24 ಗಂಟೆಯಲ್ಲಿ 42,000 ಕೊರೋನಾ ಕೇಸುಗಳು ಪತ್ತೆಯಾಗಿವೆ. ಇದುವರೆಗೂ ಕೇರಳದಲ್ಲಿ ದಾಖಲಾದ ಅತ್ಯಧಿಕ ಕೊರೋನಾ ಕೇಸ್ ಇದಾಗಿದೆ.

ಕೆಲವು ದಿನಗಳ ಹಿಂದಷ್ಟೇ ಕೇರಳದಲ್ಲಿ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಎಲ್​ಡಿಎಫ್​ ಜಯಭೇರಿ ಬಾರಿಸಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಟ್ವೀಟ್ ಮೂಲಕ ಲಾಕ್​ಡೌನ್ ಬಗ್ಗೆ ಮಾಹಿತಿ ನೀಡಿದ್ದು, ಕೇರಳದಲ್ಲಿ ಕೊರೋನಾ ಎರಡನೇ ಅಲೆಯ ಅಟ್ಟಹಾಸ ಹೆಚ್ಚಾಗಿರುವುದರಿಂದ ಮೇ 8ರಿಂದ 16ರವರೆಗೆ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಮೇ 8ರ ಬೆಳಗ್ಗೆ 6 ಗಂಟೆಯಿಂದ ಮೇ 16ರವರೆಗೆ ಕೇರಳದಲ್ಲಿ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿರಲಿವೆ. ಯಾವುದೇ ರೀತಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಅತ್ಯಗತ್ಯ ಸೌಲಭ್ಯಗಳು ಮಾತ್ರ ದೊರೆಯಲಿವೆ ಎಂದು ತಿಳಿಸಿದ್ದಾರೆ.ಕೇರಳದಲ್ಲಿ ಎರ್ನಾಕುಲಂ ಅತಿಹೆಚ್ಚು ಕೊರೋನಾ ಪೀಡಿತ ಜಿಲ್ಲೆಯಾಗಿದೆ. ಲಾಕ್​ಡೌನ್ ವೇಳೆ ಹಾಲು, ತರಕಾರಿ, ದಿನಸಿ ವಸ್ತುಗಳು, ಮೆಡಿಕಲ್ ಶಾಪ್ ಮುಂತಾದ ಅಗತ್ಯ ಸೇವೆಗಳು ಲಭ್ಯ ಇರಲಿವೆ.ಭಾರತದಲ್ಲಿ ಬುಧವಾರ 4,12,262 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಗುಣ ಆಗಿರುವವರು 3,29,113 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ ಎರಡು ಕೋಟಿ ದಾಟಿದ್ದು 2,10,77,410ಕ್ಕೆ ಏರಿಕೆ ಆಗಿದೆ.‌ ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ‌ ಸಾವನ್ನಪ್ಪುತ್ತಿದ್ದಾರೆ. ಬುಧವಾರ 3,980 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 23,01,68ಕ್ಕೆ ಏರಿಕೆ ಆಗಿದೆ.
Youtube Video

ಕರ್ನಾಟಕದಲ್ಲೂ ಕೊರೋನಾ ಅಬ್ಬರ ಹೆಚ್ಚಾಗಿದ್ದು, ಮೊದಲ ಬಾರಿಗೆ ಕರ್ನಾಟಕದಲ್ಲಿ ನಿನ್ನೆ ಅರ್ಧ ಲಕ್ಷ ಮಂದಿ 24 ಗಂಟೆಗಳ ಅವಧಿಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ. ನಿನ್ನೆ ಒಂದೇ ದಿನ ರಾಜ್ಯಾದ್ಯಂತ 50,112 ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಕರ್ನಾಟಕದಲ್ಲಿ ಕೊರೋನಾ ಕೇಸ್​ಗಳ ಸಂಖ್ಯೆ 17,41,053ಕ್ಕೆ ಏರಿಕೆಯಾಗಿದೆ. ಇದರಲ್ಲಿ 4,87,288 ಸಕ್ರಿಯ ಪ್ರಕರಣಗಳಿವೆ. ಇನ್ನು ಸಾವಿನ ಸಂಖ್ಯೆಯೂ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ ರಾಜ್ಯಾದ್ಯಂತ 346 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈವರೆಗೆ ಸೋಂಕಿನಿಂದ 16,884 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲೂ ಕೊರೋನಾ ಆರ್ಭಟ ಕೊಂಚವೂ ತಗ್ಗಿಲ್ಲ. ನಿನ್ನೆ 23,106 ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,63,380ಕ್ಕೆ ಏರಿಕೆಯಾಗಿದೆ.
Published by: Sushma Chakre
First published: May 6, 2021, 1:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories