CoronaVirus| ಓಣಂ ಹಬ್ಬದ ನಂತರ ಮುಂದಿನ ನಾಲ್ಕು ವಾರ ಕೇರಳಕ್ಕೆ ನಿರ್ಣಾಯಕ; ಕೊರೋನಾ ಬಗ್ಗೆ ಸಚಿವೆ ಎಚ್ಚರಿಕೆ!

ಕೇರಳದಲ್ಲಿ 10 ದಿನಗಳ ಓಣಂ ಹಬ್ಬಗಳು ಭಾನುವಾರ ಮುಕ್ತಾಯಗೊಂಡಿದೆ. ಹಬ್ಬದ ವಾರ ಶುರುವಾಗುವ ಮೊದಲೇ ದೇಶದ ಶೇ.50 ರಷ್ಟು ಕೊರೋನಾ ಪ್ರಕರಣಗಳು ಕೇರಳ ರಾಜ್ಯವೊಂದರಲ್ಲೇ ವರದಿಯಾಗುತ್ತಿತ್ತು.

ಕೇರಳದಲ್ಲಿ 10 ದಿನಗಳ ಓಣಂ ಹಬ್ಬಗಳು ಭಾನುವಾರ ಮುಕ್ತಾಯಗೊಂಡಿದೆ. ಹಬ್ಬದ ವಾರ ಶುರುವಾಗುವ ಮೊದಲೇ ದೇಶದ ಶೇ.50 ರಷ್ಟು ಕೊರೋನಾ ಪ್ರಕರಣಗಳು ಕೇರಳ ರಾಜ್ಯವೊಂದರಲ್ಲೇ ವರದಿಯಾಗುತ್ತಿತ್ತು.

ಕೇರಳದಲ್ಲಿ 10 ದಿನಗಳ ಓಣಂ ಹಬ್ಬಗಳು ಭಾನುವಾರ ಮುಕ್ತಾಯಗೊಂಡಿದೆ. ಹಬ್ಬದ ವಾರ ಶುರುವಾಗುವ ಮೊದಲೇ ದೇಶದ ಶೇ.50 ರಷ್ಟು ಕೊರೋನಾ ಪ್ರಕರಣಗಳು ಕೇರಳ ರಾಜ್ಯವೊಂದರಲ್ಲೇ ವರದಿಯಾಗುತ್ತಿತ್ತು.

 • Share this:
  ಕೊಚ್ಚಿ (ಆಗಸ್ಟ್ 23); ದೇಶದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಅಧಿಕವಾಗಿದ್ದ ಕಾಲದಲ್ಲಿ ಸಹ ಕೇರಳದಲ್ಲಿ ಕೊರೋನಾವನ್ನು ನಿಯಂತ್ರಿಸುವಲ್ಲಿ ಅಲ್ಲಿ ಪಿಣರಾಯಿ ವಿಜಯನ್ (Pinarayi Vijayan) ಸರ್ಕಾರ ಯಶಸ್ವಿಯಾಗಿತ್ತು. ಆದರೆ, ಇದೀಗ ಮೂರನೇ ಕೊರೋನಾ (Corona 3rd Wave) ಅಲೆ ಕಾಲದಲ್ಲಿ ಕೇರಳದಲ್ಲಿ (Kerala) ಕೊರೋನಾ ಸಂಖ್ಯೆ ದಿನೇ ದಿನೇ ಅಧಿಕವಾಗುತ್ತಲೇ ಇದೆ. ಈ ನಡುವೆ ಕೇರಳದಲ್ಲಿ ಓನಂ ಹಬ್ಬದ ಕಾರಣಕ್ಕೆ ಲಾಕ್​ಡೌನ್​ (LockDown) ಅನ್ನು ತೆಗೆದು ಹಾಕಲಾಗಿತ್ತು. "ಆರ್ಥಿಕ ಚಟುವಟಿಕೆಗಳು ನಡೆಯಬೇಕಾಗಿರು ವುದರಿಂದ ಲಾಕ್‌ಡೌನ್ ಅನ್ನು ಸಾರ್ವಕಾಲಿಕವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ. ಜೀವನ ಮತ್ತು ಜೀವನೋಪಾಯ ಎರಡನ್ನೂ ರಕ್ಷಿಸುವುದು ಸರ್ಕಾರದ ಜವಾಬ್ದಾರಿ ಯಾಗಿದೆ" ಎಂದು ಸರ್ಕಾರ ಸ್ಪಷ್ಟಪಡಿಸಿತ್ತು. ಆದರೆ, "ಓನಂ (Onam) ಕಾಲದ ವ್ಯತಿರೀಕ್ತ ಪರಿಣಾಮಗಳು ಮುಂಬರುವ ದಿನಗಳಲ್ಲಿ ತಿಳಿಯಲಿದೆ. ಹೀಗಾಗಿ ಮುಂಬರುವ ನಾಲ್ಕು ವಾರಗಳು ಕೇರಳ ರಾಜ್ಯಕ್ಕೆ ಬಹಳ ನಿರ್ಣಾಯಕ ವಾಗಲಿದೆ" ಎಂದು ಅಲ್ಲಿನ ಆರೋಗ್ಯ ಸಚಿವೆ ವೀಣಾ ಜಾರ್ಜ್​ (veena george) ಜನರಿಗೆ ಎಚ್ಚರಿಕೆ ನೀಡಿದ್ದಾರೆ.

  ಕೊರೋನಾ ಬಗ್ಗೆ ಎಚ್ಚರಿಕೆ ನೀಡಿರುವ ಆರೋಗ್ಯ ಸಚಿವೆ ವೀಣಾ ಜಾರ್ಜ್​, "ಎಲ್ಲಾ ಕೋವಿಡ್ ಪ್ರೋಟೋಕಾಲ್‌ಗಳು ನಿರ್ವಹಣೆಯಾಗುವಂತೆ ಖಚಿತಪಡಿಸಿಕೊಳ್ಳಲು ನಾವು ಸ್ಪಷ್ಟಪಡಿಸಿದ್ದೇವೆ. ಕೆಲವು ಕಡೆ ಅವುಗಳನ್ನು ಪಾಲಿಸಲಾಗಿದೆ. ಆದರೆ, ಅನೇಕ ಸ್ಥಳಗಳಲ್ಲಿ ನಾವು ಬಯಸಿದ ರೀತಿಯಲ್ಲಿ ನಡೆಯಲಿಲ್ಲ. ಡೆಲ್ಟಾ ರೂಪಾಂತರದ ಪತ್ತೆಯಾಗುತ್ತಿ ರುವುದು ನಮ್ಮ ಕಳವಳಕ್ಕೆ ಕಾರಣವಾಗಿದೆ. ಇದರ ಜೊತೆಗೆ ಮೂರನೇ ಅಲೆಯನ್ನು ಕೂಡಾ ನಿರೀಕ್ಷಿಸಲಾಗಿದೆ. ಆದ್ದರಿಂದ ಮುಂಬರುವ ವಾರಗಳು ಬಹಳ ನಿರ್ಣಾಯಕವಾಗಲಿವೆ" ಎಂದು ಅವರು ಹೇಳಿದ್ದಾರೆ.

  ಕೇರಳದಲ್ಲಿ 10 ದಿನಗಳ ಓಣಂ ಹಬ್ಬಗಳು ಭಾನುವಾರ ಮುಕ್ತಾಯಗೊಂಡಿದೆ. ಹಬ್ಬದ ವಾರ ಶುರುವಾಗುವ ಮೊದಲೇ ದೇಶದ ಶೇ.50 ರಷ್ಟು ಕೊರೋನಾ ಪ್ರಕರಣಗಳು ಕೇರಳ ರಾಜ್ಯವೊಂದರಲ್ಲೇ ವರದಿಯಾಗುತ್ತಿತ್ತು.

  ಇದನ್ನೂ ಓದಿ: World Bank| ಭಾರತದಲ್ಲಿ ಸುಮಾರು 1 ಲಕ್ಷ ಶಿಶುಗಳು ಕೊರೋನಾ ಪ್ರೇರಿತ ಆರ್ಥಿಕ ಕುಸಿತದಿಂದ ಸಾವು; ವಿಶ್ವಬ್ಯಾಂಕ್ ವರದಿ

  "ಮೂರನೇ ಅಲೆಯ ಸಾಧ್ಯತೆಯನ್ನು ಪರಿಗಣಿಸಿ, ಆರೋಗ್ಯ ಮೂಲಸೌಕರ್ಯವನ್ನು ಪರಿಷ್ಕರಿಸಲಾಗಿದೆ. ನಾವು ಪ್ರಸ್ತುತ 870 ಟನ್ ಆಕ್ಸಿಜನ್ ಸ್ಟಾಕ್ ಮತ್ತು 33 ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿದ್ದೇವೆ" ಎಂದು ವೀಣಾ ಜಾರ್ಜ್ ಹೇಳಿದ್ದಾರೆ.

  "ಸಾಧ್ಯವಾದಷ್ಟು ಜನರನ್ನು ಒಳಗೊಳ್ಳಲು ಲಸಿಕೆ ಅಭಿಯಾನವನ್ನು ವೇಗಗೊಳಿಸುವುದು ನಮ್ಮ ಗುರಿಯಾಗಿದೆ. ಲಸಿಕೆಗಳನ್ನು ಅನೇಕರು ತೆಗೆದುಕೊಂಡಿದ್ದರೂ, ಡೆಲ್ಟಾ ರೂಪಾಂತರವು ಬೇಗನೆ ಹರಡುವ ಸಾಧ್ಯತೆಗಳಿವೆ. ಆದ್ದರಿಂದ ಎಲ್ಲರೂ ಜಾಗರೂಕರಾಗಿರಬೇಕು ಮತ್ತು ಎಲ್ಲಾ ಸುರಕ್ಷತಾ ನಿಯಮಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ" ಆರೋಗ್ಯ ಸಚಿವರು ತಿಳಿಸಿದ್ದಾರೆ.

  ಇದನ್ನೂ ಓದಿ: Myntra| ಹಳೆಯ ಹಿಂದೂ ವಿರೋಧಿ ಪೋಸ್ಟರ್: ಮಾಡದ ತಪ್ಪಿಗೆ ಟ್ವಿಟ್ಟರ್‌ನಲ್ಲಿ ಮಿಂತ್ರಾ ತಲೆದಂಡ!

  ಭಾರತದಲ್ಲಿ ಕೊರೋನಾ ಮೂರನೇ ಅಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮಹಾರಾಷ್ಟ್ರದಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಅಧಿಕವಾಗುತ್ತಲೇ ಇದೆ. ಈ ನಡುವೆ ಮೂರನೇ ಅಲೆಯಲ್ಲಿ ಮಕ್ಕಳಿಗೂ ಅಧಿಕ ಸಂಖ್ಯೆಯಲ್ಲಿ ಕೊರೋನಾ ಸೋಂಕು ತಗುಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಈಗಾಗಲೆ ಎಚ್ಚರಿಕೆಯಿಂದ ಇರುವಂತೆ ಎಲ್ಲಾ ರಾಜ್ಯಗಳಿಗೂ ತಿಳಿಸಿದೆ. ಆದರೆ, ಓನಂ ಕಾರಣಕ್ಕೆ ಕಳೆದ 10 ದಿನಗಳ ಕಾಲ ಕೇರಳದಲ್ಲಿ ಲಾಕ್​ಡೌನ್ ಸಡಿಲಗೊಳಿಸಿದ್ದು, ಇದೀಗ ಮತ್ತೆ ಸೋಂಕಿನ ಸಂಖ್ಯೆ ಅಧಿಕವಾಗುವ ಎಲ್ಲಾ ಆತಂಕಗಳನ್ನು ಮುಂದಿಟ್ಟಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. 
  Published by:MAshok Kumar
  First published: