ಕೇರಳದಲ್ಲಿ ಬಹುತೇಕ ನಿಯಂತ್ರಣಕ್ಕೆ ಬಂದ ಕೊರೋನಾ: ಇಂದು ಕೇವಲ ಮೂರು ಕೋವಿಡ್​​-19 ಕೇಸ್​ ಪತ್ತೆ

ಇದುವರೆಗೂ ಕೇರಳದಲ್ಲಿ ಒಟ್ಟು 502 ಜನರಿಗೆ ಕೊರೋನಾ ಬಂದಿದೆ. ಈ ಪೈಕಿ 462 ಮಂದಿ ಗುಣಮುಖರಾಗಿದ್ದಾರೆ. ಸದ್ಯ 40 ಆ್ಯಕ್ಟೀವ್​​​​​ ಕೇಸುಗಳ ಮಾತ್ರ ಉಳಿದಿವೆ.

news18-kannada
Updated:May 5, 2020, 10:10 PM IST
ಕೇರಳದಲ್ಲಿ ಬಹುತೇಕ ನಿಯಂತ್ರಣಕ್ಕೆ ಬಂದ ಕೊರೋನಾ: ಇಂದು ಕೇವಲ ಮೂರು ಕೋವಿಡ್​​-19 ಕೇಸ್​ ಪತ್ತೆ
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್
  • Share this:
ನವದೆಹಲಿ(ಮೇ.05): ಕೇರಳದಲ್ಲಿ ಸೋಂಕು ಹರಡುವಿಕೆ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಇದಕ್ಕೆ ಸಾಕ್ಷಿಯೇ ನಿನ್ನೆ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ ಎಂಬುದು. ಇನ್ನು ಇಂದು ಕೂಡ ಕೇವಲ 3 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿದೆ. ಈ ಮೂರು ಕೇಸ್​ಗಳು ವಯನಾಡ್ ಜಿಲ್ಲೆಯವರದ್ದು. ಸದ್ಯ ಒಟ್ಟು 37 ಮಂದಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಎಂ ಪಿಣರಾಯ್​​ ವಿಜಯನ್​​ ತಿಳಿಸಿದ್ದಾರೆ.

ಇದುವರೆಗೂ ಕೇರಳದಲ್ಲಿ ಒಟ್ಟು 502 ಜನರಿಗೆ ಕೊರೋನಾ ಬಂದಿದೆ. ಈ ಪೈಕಿ 462 ಮಂದಿ ಗುಣಮುಖರಾಗಿದ್ದಾರೆ. ಸದ್ಯ 40 ಆ್ಯಕ್ಟೀವ್​​​​​ ಕೇಸುಗಳ ಮಾತ್ರ ಉಳಿದಿವೆ.

ಭಾರತದಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗುತ್ತಲೇ ಇದೆ. ಇಂದು ಒಂದೇ ದಿನ ಅಂದರೆ ಕೇವಲ 24 ಗಂಟೆಗಳಲ್ಲಿ 3,900 ಮಂದಿಯಲ್ಲಿ ಹೊಸದಾಗಿ ವೈರಸ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 46,711ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ: ದೇಶದಲ್ಲಿ 24 ಗಂಟೆಗಳಲ್ಲಿ 3,900 ಮಂದಿಗೆ ಕೊರೋನಾ; ಸೋಂಕಿತರ ಸಂಖ್ಯೆ 46,711ಕ್ಕೆ ಏರಿಕೆ

ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರವೊಂದರಲ್ಲೇ 14,541 ಮಂದಿಗೆ ಕೊರೋನಾ ಬಂದಿದೆ. ಇನ್ನು, ಗುಜರಾತ್​​​ 5,804 ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳ ಮೂಲಕ ಎರಡನೇ ಸ್ಥಾನದಲ್ಲಿದೆ. ರಾಜಸ್ಥಾನ 3,061, ತಮಿಳುನಾಡು 3,550, ದೆಹಲಿ 4,898 ಹೀಗೆ ಕೊರೋನಾ ಪ್ರಕರಣಗಳು ದಾಖಲಾಗಿವೆ. ಹೀಗಿರುವಾಗ ಕೇರಳದಲ್ಲಿ ಮಾತ್ರ ಕೊರೋನಾ ಬಹುತೇಕ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದೆ.
First published: May 5, 2020, 10:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading