ಕೇರಳದಲ್ಲಿಂದು 19 ಪಾಸಿಟಿವ್​​​ ಕೇಸ್​​ ಪತ್ತೆ: ಸೋಂಕಿತರ ಸಂಖ್ಯೆ 426ಕ್ಕೇರಿಕೆ, 307 ಮಂದಿ ಸಂಪೂರ್ಣ ಗುಣಮುಖ

ಇನ್ನು, ಕೇವಲ ಕಾಸರಗೋಡು ಒಂದರಲ್ಲೇ ಇದುವರೆಗೂ 171 ಮಂದಿಗೆ ಕೊರೋನಾ ಬಂದಿದೆ. ಇದರಲ್ಲಿ 27 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

news18-kannada
Updated:April 21, 2020, 7:24 PM IST
ಕೇರಳದಲ್ಲಿಂದು 19 ಪಾಸಿಟಿವ್​​​ ಕೇಸ್​​ ಪತ್ತೆ: ಸೋಂಕಿತರ ಸಂಖ್ಯೆ 426ಕ್ಕೇರಿಕೆ, 307 ಮಂದಿ ಸಂಪೂರ್ಣ ಗುಣಮುಖ
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್
  • Share this:
ನವದೆಹಲಿ(ಏ.21): ಕೇರಳದಲ್ಲಿ ಕೊರೋನಾ ವೈರಸ್​ ಆರ್ಭಟ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ 19 ಹೊಸ ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳು ಪತ್ತೆಯಾದ ಪರಿಣಾಮ  ಸೋಂಕಿತರ ಸಂಖ್ಯೆ 426ಕ್ಕೇರಿದೆ. ಇದುವರೆಗೂ ಇಬ್ಬರು ಕೊರೋನಾಗೆ ಬಲಿಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ಇಂದು ಪತ್ತೆಯಾದ 19 ಕೊರೋನಾ ಪಾಸಿಟಿವ್​​ ಪ್ರಕರಣಗಳ ಪೈಕಿ ಮೂರು ಕಾಸರಗೋಡು ಜಿಲ್ಲೆಗೆ ಸೇರಿವೆ. ಕಣ್ಣೂರು 10 , ಪಾಲಕ್ಕಾಡ್ 4, ಮಲಪ್ಪುರಂ, ಕೊಲ್ಲಂ ನಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ. ಒಟ್ಟು426 ಸೋಂಕಿತರಲ್ಲಿ 307 ಮಂದಿ ಸಂಪೂರ್ಣ ಗುಖಮುಖರಾಗಿದ್ದಾರೆ.  ಕೇವಲ 117 ಆ್ಯಕ್ಟೀವ್​​ ಕೇಸುಗಳ ಮಾತ್ರ ಉಳಿದಿವೆ.

ಇನ್ನು, ಕೇವಲ ಕಾಸರಗೋಡು ಒಂದರಲ್ಲೇ ಇದುವರೆಗೂ 171 ಮಂದಿಗೆ ಕೊರೋನಾ ಬಂದಿದೆ. ಇದರಲ್ಲಿ 27 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಇಂದು 10 ಮಂದಿಗೆ ಕೊರೋನಾ: ಸೋಂಕಿತರ ಸಂಖ್ಯೆ 418ಕ್ಕೇರಿಕೆ, 17 ಸಾವು

ದೇಶಾದ್ಯಂತ ಕೋವಿಡ್-19 ವೈರಸ್ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದೆ. ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕಂಗೆಡಿಸಿದೆ. ಭಾರತದಲ್ಲಿ ಮೃತರ ಸಂಖ್ಯೆ 503ಕ್ಕೇರಿರುವುದು ಆತಂಕಕಾರಿಯಾಗಿದೆ. ಮತ್ತೊಂದಡೆ 18,985 ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ.
First published: April 21, 2020, 7:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading