Kerala: ಕೊರೋನಾ ರೋಗಿ ಮೇಲೆ ಆ್ಯಂಬುಲೆನ್ಸ್​ನಲ್ಲೇ ಅತ್ಯಾಚಾರ; ಕೇರಳದಲ್ಲೊಂದು ಅಮಾನುಷ ಘಟನೆ

Kerala Rape Case: ಅತ್ಯಾಚಾರ ನಡೆಸಿದ ನಂತರ ಚಾಲಕ ಆ್ಯಂಬುಲೆನ್ಸ್​ನಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ. ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದ ಕೊರೋನಾ ಸೋಂಕಿತ ಯುವತಿ ಆಸ್ಪತ್ರೆಯ ಸಿಬ್ಬಂದಿ ಬಳಿ ನಡೆದ ಘಟನೆಯನ್ನು ವಿವರಿಸಿದ್ದಳು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ (ಸೆ. 6): ದೇಶದಲ್ಲಿ ಕೊರೋನಾ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಈ ನಡುವೆ ಕೊರೋನಾ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್​ ಚಾಲಕನೇ ಆ ರೋಗಿಯ ಮೇಲೆ ಅತ್ಯಾಚಾರವೆಸಗಿರುವ ಅಮಾನುಷ ಘಟನೆ ಕೇರಳದ ಪಥನಾಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಕೇರಳದಲ್ಲಿ ಈ ಘಟನೆ ನಡೆದಿದ್ದು, ತನ್ನ ಸಂಬಂಧಿಕರ ಮನೆಯಲ್ಲಿ ಕ್ವಾರಂಟೈನ್ ಆಗಿದ್ದ ಯುವತಿಗೆ ನಿನ್ನೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಆ್ಯಂಬುಲೆನ್ಸ್​ ಚಾಲಕ ಮಾರ್ಗಮಧ್ಯೆ ಆ್ಯಂಬುಲೆನ್ಸ್​ನಲ್ಲೇ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲು ಆ್ಯಂಬುಲೆನ್ಸ್​ ಕರೆಸಲಾಗಿತ್ತು.  ಆರೋಗ್ಯ ಕಾರ್ಯಕರ್ತರು ಇಬ್ಬರು ಕೊರೋನಾ ಸೋಂಕಿತ ಯುವತಿಯರನ್ನು ಆ್ಯಂಬುಲೆನ್ಸ್​ನಲ್ಲಿ ಕಳುಹಿಸಿದ್ದರು. ಒಬ್ಬಳನ್ನು ಒಂದು ಆಸ್ಪತ್ರೆಯಲ್ಲಿ ಇಳಿಸಿದ ಆ್ಯಂಬುಲೆನ್ಸ್​ ಚಾಲಕ ಇನ್ನೊಬ್ಬಾಕೆಯನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ಅಲ್ಲಿಂದ ಹೊರಟಿದ್ದ. ಆಗ ನಿರ್ಜನ ಪ್ರದೇಶಕ್ಕೆ ಆ್ಯಂಬುಲೆನ್ಸ್​ ತೆಗೆದುಕೊಂಡು ಹೋಗಿ, ಅಲ್ಲಿ ಆ್ಯಂಬುಲೆನ್ಸ್​ನಲ್ಲೇ ಆ ಸೋಂಕಿತ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Coronavirus India: ಭಾರತದಲ್ಲಿ 41 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ; ಒಂದೇ ದಿನ 90 ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆ

ಅತ್ಯಾಚಾರ ನಡೆಸಿದ ನಂತರ ಚಾಲಕ ಆ್ಯಂಬುಲೆನ್ಸ್​ನಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ. ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದಕೊರೋನಾ  ಸೋಂಕಿತ ಯುವತಿ ಆಸ್ಪತ್ರೆಯ ಸಿಬ್ಬಂದಿ ಬಳಿ ನಡೆದ ಘಟನೆಯನ್ನು ವಿವರಿಸಿದ್ದಳು. ಅವರು ಪೊಲೀಸರಿಗೆ ಈ ವಿಷಯ ತಿಳಿಸಿದ್ದು, ಅತ್ಯಾಚಾರವೆಸಗಿದ್ದ ಆ್ಯಂಬುಲೆನ್ಸ್​ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ವರದಿಯಲ್ಲೂ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಖಚಿತವಾಗಿದೆ.

ಅತ್ಯಾಚಾರದ ಆರೋಪಿಯಾಗಿರುವ ಆ್ಯಂಬುಲೆನ್ಸ್​ ಚಾಲಕ ಅಲಪ್ಪುಝ ಜಿಲ್ಲೆಯವನಾಗಿದ್ದು, ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಆತನ ವಿರುದ್ಧ ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಕೇರಳದ ಆರೋಗ್ಯ ಇಲಾಖೆ ತಿಳಿಸಿದೆ. ಈ ಘಟನೆ ನಡೆದ 5 ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದೆ. ಈ ಹಿಂದೆ ಕೂಡ ಕೊಲೆ ಆರೋಪದಲ್ಲಿ ಆತನನ್ನು ಬಂಧಿಸಲಾಗಿತ್ತು.
Published by:Sushma Chakre
First published: