HOME » NEWS » Coronavirus-latest-news » KERALA CONFIRMS 3RD CASE OF WUHAN CORONAVIRUS SESR

Coronavirus: ಕೊರೊನಾ ವೈರಸ್​ ಭೀತಿ: ಕೇರಳದಲ್ಲಿ ಮೂರನೇ ಪ್ರಕರಣ ಪತ್ತೆ

ಕೇರಳದ ಈ ವ್ಯಕ್ತಿ ಚೀನಾದ ವುಹುನಾ ನಗರದಿಂದ ಹಿಂತಿರುಗಿದ್ದ. ಇದಾದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದ. ಈತನನ್ನು ಪರೀಕ್ಷಿಸಿದ ವೇಳೆ ಕೊರೊನಾ ವೈರಸ್​ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ.

Seema.R | news18-kannada
Updated:February 3, 2020, 1:00 PM IST
Coronavirus: ಕೊರೊನಾ ವೈರಸ್​ ಭೀತಿ: ಕೇರಳದಲ್ಲಿ ಮೂರನೇ ಪ್ರಕರಣ ಪತ್ತೆ
ಸಾಂದರ್ಭಿಕ ಚಿತ್ರ
  • Share this:
ತಿರುವನಂತಪುರ (ಫೆ.3): ವಿಶ್ವದೆಲ್ಲೆಡೆ ಭೀತಿ ಮೂಡಿಸಿರುವ ಕೊರೊನಾ ವೈರಸ್​ನ ಸೋಂಕಿಗೆ ಕೇರಳದಲ್ಲಿ ಮತ್ತೊಬ್ಬರು ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಪತ್ತೆಯಾದ ಮೂರನೇ ಪ್ರಕರಣವಿದಾಗಿದೆ.

ಕೇರಳದ ಕಾಸರಗೋಡಿನ ಈ ವ್ಯಕ್ತಿ ಚೀನಾದ ವುಹುನಾ ನಗರದಿಂದ ಹಿಂತಿರುಗಿದ್ದ. ಇದಾದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದ. ಈತನನ್ನು ಪರೀಕ್ಷಿಸಿದ ವೇಳೆಕೊರೊನಾ ವೈರಸ್​ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ.

ಸೋಂಕಿಗೆ ಒಳಪಟ್ಟಿರುವ ವ್ಯಕ್ಕಿಯನ್ನು ಗೌಪ್ಯವಾಗಿ, ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಆರೋಗ್ಯ ಸ್ಥಿರವಾಗಿದ್ದು, ಆತನ ತಪಾಸಣೆ ನಡೆಯುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಹಿಂದೆ ಕೂಡ ಕೇರಳದ ಇಬ್ಬರು ವ್ಯಕ್ತಿಗಳು ಈ ಸೋಂಕಿಗೆ ಬಲಿಯಾಗಿರುವುದು ಪತ್ತೆಯಾಗಿತ್ತು.

ಇದನ್ನು ಓದಿ: ಕೇರಳದ ವಿದ್ಯಾರ್ಥಿಯಲ್ಲಿ ಮಹಾಮಾರಿ ಕರೋನಾ ವೈರಸ್​ ಪತ್ತೆ; ಹೆಚ್ಚಿದ ಭೀತಿ

ಇನ್ನು ಕೊರೊನಾ ವೈರಸ್​ ಬಗ್ಗೆ ವಿಶ್ವಸಂಸ್ಥೆ ಕೂಡ ಎಚ್ಚರಿಕೆ ನೀಡಿದ್ದು, ದೇಶದಲ್ಲಿ ಕೂಡ ಕಟ್ಟೆಚ್ಚರ ವಹಿಸಲಾಗಿದೆ. ಚೀನಾದಿಂದ ಬರುವ ಭಾರತೀಯರ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ಚೀನಿಯರಿಗೆ ಭಾರತದ ಇ ವೀಸಾ ನೀಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
First published: February 3, 2020, 12:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories