ಹೆದ್ದಾರಿಯಲ್ಲಿ ಸರಕು ಸಾಗಣೆಗೆ ಕರ್ನಾಟಕ ಪೊಲೀಸರಿಂದ ತಡೆ: ಪ್ರಧಾನಿಗೆ ಕೇರಳ ಸಿಎಂ ದೂರು

ವೀರಾಜಪೇಟೆಯ ಮೂಲಕ ಕರ್ನಾಟಕದ ಕೂರ್ಗ್ನೊಂದಿಗೆ ಕೇರಳವನ್ನು ಸಂಪರ್ಕಿಸುವ ಥಲಶೇರಿ-ಕೂರ್ಗ್ ರಸ್ತೆಯು ಸರಕು ಲಾರಿಗಳು ಮತ್ತು ಅಗತ್ಯ ಸರಕುಗಳನ್ನು ಕೇರಳಕ್ಕೆ ಸಾಗಿಸುವ ಪ್ರಮುಖ ಹೆದ್ದಾರಿಯಾಗಿದೆ.

ಪಿಣಾರಯಿ ವಿಜಯನ್

ಪಿಣಾರಯಿ ವಿಜಯನ್

 • News18
 • Last Updated :
 • Share this:
  ತಿರುವನಂತಪುರಂ: ಕೇರಳಕ್ಕೆ ಅಗತ್ಯ ಸರಕುಗಳನ್ನು ಸಾಗಿಸುವ ಪ್ರಮುಖ ಹೆದ್ದಾರಿಯನ್ನು ಕರ್ನಾಟಕ ಪೊಲೀಸರು ನಿರ್ಬಂಧಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ಧಾರೆ. ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸುವಂತೆ ಅವರು ಪ್ರಧಾನಿಗೆ ಒತ್ತಾಯಿಸಿದ್ದಾರೆ.

  ವೀರಾಜಪೇಟೆಯ ಮೂಲಕ ಕೊಡಗು ಮತ್ತು ಕೇರಳವನ್ನು ಸಂಪರ್ಕಿಸುವ ತಲಶೇರಿ-ಕೊಡಗು ರಸ್ತೆಯು ಅಗತ್ಯ ಸರಕುಗಳನ್ನು ಸಾಗಿಸುವ ಪ್ರಮುಖ ಹೆದ್ದಾರಿಯಾಗಿದೆ ಎಂದು ಮೋದಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

  ಈ ಮಾರ್ಗವನ್ನು ನಿರ್ಬಂಧಿಸಿದರೆ, ಸರಕು ಲಾರಿಗಳು ಕೇರಳ ತಲುಪಲು ಬೇರೆ ದೂರದ ಮಾರ್ಗದಲ್ಲಿ ಬರಬೇಕಾಗುತ್ತದೆ ಎಂದು ಕೇರಳ ಸಿಎಂ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

  ಇದನ್ನೂ ಓದಿ: ಕಾಶ್ಮೀರದಲ್ಲಿ ಮುಂದುವರಿದ ನಿರ್ಬಂಧ; ಶುಕ್ರವಾರದ ಪ್ರಾರ್ಥನೆ ಆಯೋಜಿಸಿದವರ ವಿರುದ್ಧ ಪ್ರಕರಣ ದಾಖಲು

  "ಈ ಮಾರ್ಗವು ಕೇರಳಕ್ಕೆ ಅಗತ್ಯ ಸರಕುಗಳ ಸಾಗಣೆಗೆ ಮುಖ್ಯ ದಾರಿಯಾಗಿದೆ. ಇದನ್ನು ನಿರ್ಬಂಧಿಸಿದರೆ, ಅಗತ್ಯ ಸರಕುಗಳನ್ನು ಸಾಗಿಸುವ ವಾಹನಗಳು ನಮ್ಮ ರಾಜ್ಯವನ್ನು ತಲುಪಲು ಹೆಚ್ಚು ದೂರ ಪ್ರಯಾಣಿಸಬೇಕಾಗುತ್ತದೆ. ಲಾಕ್‌ಡೌನ್‌ನ ಪರಿಸ್ಥಿತಿಯನ್ನು ಗಮನಿಸಿದರೆ, ಇದು ಜನರಿಗೆ ಹೆಚ್ಚು ಕಷ್ಟವಾಗುತ್ತದೆ. ಬಿಕ್ಕಟ್ಟಿನ ಈ ಕ್ಷಣದಲ್ಲಿ ಅಗತ್ಯ ವಸ್ತುಗಳ ಸಾಗಣೆಗೆ ತೊಂದರೆಯಾಗುವ ಯಾವುದೇ ಕ್ರಮಕ್ಕೆ ತೆಗೆದುಕೊಳ್ಳಬಾರದು ಎಂಬುದನ್ನು ಪ್ರಧಾನಿಗಳಾದ ನೀವು ಒಪ್ಪುತ್ತೀರಿ "ಎಂದು ಅವರು ತಿಳಿಸಿದ್ದಾರೆ.

  ಶುಕ್ರವಾರ ಅವರು ಕಳುಹಿಸಿದ ಈ ಪತ್ರದ ಪ್ರತಿಯನ್ನು ಮಾಧ್ಯಮಗಳಿಗೆ ಇಂದು ಬಿಡುಗಡೆ ಮಾಡಲಾಗಿದೆ.

  - ಸಂಧ್ಯಾ ಎಂ.

  First published: