news18-kannada Updated:May 23, 2020, 2:42 PM IST
ಚರ್ಚ್ ಫಾದರ್
ತಿರುವನಂತಪುರಂ(ಮೇ.23): ಮಾರಕ ಕೊರೋನಾ ವೈರಸ್ ತಹಬದಿಗೆ ತರಲು ದೇಶದಲ್ಲಿ ನಾಲ್ಕನೇ ಬಾರಿಗೆ ಲಾಕ್ಡೌನ್ ಜರಿಗೊಳಿಸಲಾಗಿದೆ. ಕೆಲವು ಕ್ಷೇತ್ರಗಳಿಗೆ ವಿನಾಯಿತಿ ನೀಡಿ ಧಾರ್ಮಿಕ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಯಾವುದೇ ಕಾರಣಕ್ಕೂ ದೇವಸ್ಥಾನ, ಚರ್ಚ್, ಮಸೀದಿಗಳನ್ನು ತೆರೆಯಬಾರದು ಎಂದು ಆದೇಶಿಸಿಲಾಗಿದೆ. ಹೀಗಿರುವಾಗ ಕೇರಳದ ಇಡುಕ್ಕಿ ಜಿಲ್ಲೆಯ ಫಾದರ್ ಓರ್ವ ತನ್ನ ಕಾಮದಾಟಕ್ಕೆ ಚರ್ಚ್ವೊಂದನ್ನು ಬಳಸಿಕೊಂಡು ರೆಡ್ ಹ್ಯಾಂಡ್ಆಗಿ ಸಿಕ್ಕಿಬಿದ್ದ ದುರ್ಘಟನೆ ನಡೆದಿದೆ ಎಂಬುದು ವರದಿಯಾಗಿದೆ.
ಕೇರಳದ ಇಡುಕ್ಕಿ ಜಿಲ್ಲೆಯ ಕ್ಯಾಥೋಲಿಕ್ ಚರ್ಚ್ನ ಫಾದರ್ ಜೇಮ್ಸ್ ಮಂಗಲಾಶೇರಿ ಎಂಬಾತ ಚರ್ಚನ್ನ ಕಾಮದಾಟಕ್ಕೆ ಬಳಿಸಿಕೊಂಡಿರುವುದು ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದೆ. ಲಾಕ್ಡೌನ್ನಿಂದ ಯಾರು ಚರ್ಚ್ಚತ್ತ ಮುಖ ಮಾಡುವುದಿಲ್ಲ ಎಂದು ಭಾವಿಸಿ ಮಹಿಳೆಯೊಂದಿಗೆ ಸೆಕ್ಸ್ನಲ್ಲಿ ತೊಡಗಿದ್ದರು. ಆದರೆ, ಯಾರದ್ದೋ ಮೊಬೈಲ್ನಲ್ಲಿ ಈ ವಿಡಿಯೋ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಏನು ಕೆಲಸ ಇಲ್ಲದಿದ್ದರೂ ಮಹಿಳೆ ಚರ್ಚ್ಗೆ ಆಗಮಿಸುತ್ತಿದ್ದಳು. ಇದನ್ನು ಗಮನಿಸಿದ ಗ್ರಾಮಸ್ಥರು ಒಂದು ದಿನ ಮಹಿಳೆಯನ್ನು ಹಿಂಬಾಲಿಸಿದ್ದಾರೆ. ಆಗ ನೇರ ಚರ್ಚ್ಗೆ ಹೋದ ಮಹಿಳೆಯೂ ಫಾದರ್ನೊಂದಿಗೆ ಸೆಕ್ಸ್ನಲ್ಲಿ ತೊಡಗಿದ್ದಾಳೆ. ಇದನ್ನು ವಿಡಿಯೋ ಮಾಡಿ ಈಗ ಗ್ರಾಮಸ್ಥರು ವೈರಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಮೊಬೈಲ್ ಅಂಗಡಿಯೊಂದರಿಂದಲೂ ಈ ವಿಡಯೋ ಲೀಕ್ ಆಗಿರುವುದಾಗಿಯೂ ಹೇಳಲಾಗುತ್ತಿದೆ.
ಇದನ್ನೂ ಓದಿ: KPCC President: ಜೂನ್ 7ಕ್ಕೆ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಪ್ರಮಾಣವಚನ
ಇನ್ನು, ಫಾದರ್ನೊಂದಿಗೆ ಸೆಕ್ಸ್ ಮಾಡುತ್ತಾ ಸಿಕ್ಕಿಬಿದ್ದ ಮಹಿಳೆ ಇಬ್ಬರು ಮಕ್ಕಳ ತಾಯಿ. ಸುಮಾರು ಎರಡು ತಿಂಗಳಿನಿಂದ ಈ ಕಾಮದಾಟ ಇಬ್ಬರು ನಡುವೆ ನಡೆಯುತ್ತಿತ್ತು. ಆದರೀಗ ಸಿಕ್ಕಿಬಿದ್ದಿದ್ದು, ಚರ್ಚ್ ಫಾದರ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫಾದರ್ ಮೇಲೆ ಇಂತಹ ಆರೋಪಗಳು ಸಾಕಷ್ಟು ಬಾರಿ ಕೇಳಿ ಬಂದಿವೆ. ಹಾಗಾಗಿ ಚರ್ಚ್ನ ಫಾದರ್ ಸ್ಥಾನದಿಂದ ಆತನನ್ನು ಅಮಾನತು ಮಾಡಲಾಗಿದೆ ಎನ್ನಲಾಗಿದೆ.
(ವರದಿ: ಎಂ.ಎಸ್ ಅನೀಶ್ ಕುಮಾರ್)
First published:
May 23, 2020, 2:34 PM IST