HOME » NEWS » Coronavirus-latest-news » KERALA CHIEF MINISTER KERALA TO IMPLEMENT ODD EVEN FOR VEHICLES AFTER APRIL 20 SNVS

ಏ. 20ರ ನಂತರ ವಾಹನ ಸಂಚಾರಕ್ಕೆ ಕೇರಳದಲ್ಲಿ ಸಮ-ಬೆಸ ಯೋಜನೆ ಜಾರಿ: ಸಿಎಂ ಪಿಣಾರಯಿ ವಿಜಯನ್

ಕೊರೋನಾ ಪ್ರಕರಣಗಳ ತೀವ್ರತೆಯ ಆಧಾರದ ಮೇಲೆ ಕೇರಳದ ವಿವಿಧ ಜಿಲ್ಲೆಗಳನ್ನ ನಾಲ್ಕು ವಲಯಗಳಾಗಿ ವಿಂಗಡಣೆ ಮಾಡಲು ಕೇರಳ ಸರ್ಕಾರ ಯೋಜಿಸಿದೆ.

news18
Updated:April 17, 2020, 2:34 PM IST
ಏ. 20ರ ನಂತರ ವಾಹನ ಸಂಚಾರಕ್ಕೆ ಕೇರಳದಲ್ಲಿ ಸಮ-ಬೆಸ ಯೋಜನೆ ಜಾರಿ: ಸಿಎಂ ಪಿಣಾರಯಿ ವಿಜಯನ್
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್
  • News18
  • Last Updated: April 17, 2020, 2:34 PM IST
  • Share this:
ತಿರುವನಂತಪುರಂ: ಏಪ್ರಿಲ್ 20 ರ ನಂತರ ಭಾಗಶಃ ನಿರ್ಬಂಧಗಳೊಂದಿಗೆ ವಾಹನಗಳಿಗೆ ಸಮ ಬೆಸ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ನಿರ್ಬಂಧಗಳನ್ನು ಹೊಂದಿರುವ ಕೇರಳದ ಜಿಲ್ಲೆಗಳಲ್ಲಿ ಏಪ್ರಿಲ್ 20 ರ ನಂತರ ವಾಹನಗಳ ಸಂಚಾರಕ್ಕೆ ಸಮ ಬೆಸ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಮಹಿಳೆಯರು ಚಾಲನೆ ಮಾಡುವ ವಾಹನಗಳಿಗೆ ವಿವಾಯಿತಿ ನೀಡಲಾಗುವುದು ಎಂದು ವಿಜಯನ್ ಹೇಳಿದರು. ದೆಹಲಿಯಲ್ಲಿ ಅಲ್ಲಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅನೇಕ ಬಾರಿ ಸಮ-ಬೆಸ ಕ್ರಮವನ್ನು ಜಾರಿಗೆ ತಂದಿದ್ದಾರೆ. ವಾಯುಮಾಲಿನ್ಯ ನಿಗ್ರಹಕ್ಕೆ ಅವರು ಈ ತಂತ್ರ ಹೂಡಿದ್ದರು. ಈಗ ಕೋವಿಡ್ ಬಿಕ್ಕಟ್ಟಿನ ವೇಳೆಯೂ ಇದೇ ತಂತ್ರ ಅನುಸರಿಸಲು ಯೋಜಿಸಿದ್ದಾರೆ. ದೆಹಲಿ ನಂತರ ಕೇರಳ ಈಗ ಸಮ-ಬೆಸ ಯೋಜನೆಗೆ ಪ್ರಯತ್ನ ಹಾಕುತ್ತಿದೆ.

ಏತನ್ಮಧ್ಯೆ, ಕೇರಳ ಸರ್ಕಾರವು ವಿವಿಧ ಜಿಲ್ಲೆಗಳನ್ನ ನಾಲ್ಕು ವಲಯಗಳಾಗಿ ವಿಂಗಡಣೆ ಮಾಡಲು ಕೇಂದ್ರದ ಅನುಮತಿಯನ್ನು ಕೇಳಲಿದೆ ಎಂದರು.

ಇದನ್ನೂ ಓದಿ: Shaktikanta Das; ದೇಶದ ಆರ್ಥಿಕ ಪುನಶ್ಚೇತನಕ್ಕೆ ಆರ್‌ಬಿಐನಿಂದ 10 ಅಂಶಗಳ ಘೋಷಣೆ, ರಿವರ್ಸ್ ರೆಪೋ ದರ ಇಳಿಕೆ!

ಕಾಸರಗೋಡು, ಕಣ್ಣೂರು, ಮಲಪ್ಪುರಂ, ಕೋಳಿಕೋಡ್ ಸೇರಿದಂತೆ ಹೆಚ್ಚಿನ ಕೋವಿಡ್ ಪ್ರಕರಣಗಳಿರುವ ಪ್ರದೇಶಗಳನ್ನು ಮೊದಲ ವಲಯದಲ್ಲಿಡಬಹುದು. ಈ ವಲಯದಲ್ಲಿ, ಮೇ 3 ರವರೆಗೆ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಮುಂದುವರಿಸಬಹುದು.

ಎರಡನೇ ವಲಯದಲ್ಲಿ ಪಟ್ಟನಂತಿಟ್ಟ, ಎರ್ನಾಕುಲಂ, ಕೊಲ್ಲಂ ಜಿಲ್ಲೆಗಳನ್ನು ಸೇರ್ಪಡೆಗೊಳಿಸಬಹುದು. ಈ ವಲಯಗಳಲ್ಲಿ ಹಾಟ್​ಸ್ಪಾಟ್ ಪ್ರದೇಶಗಳನ್ನು ಗುರುತಿಸಿ ಸೀಲ್ ಡೌನ್ ಮಾಡಬಹುದು.

ಇದನ್ನೂ ಓದಿ: 2ನೇ ಹಂತದ ಲಾಕ್​ಡೌನ್ ಸಂಕಷ್ಟಕ್ಕೆ ಕೇಂದ್ರದಿಂದ ಇನ್ನೊಂದು ಪ್ಯಾಕೇಜ್ ಘೋಷಣೆ ಸಾಧ್ಯತೆಮೂರನೇ ವಲಯದಲ್ಲಿ ಆಲಪ್ಪುಳ, ತಿರುವನಂತಪುರಂ, ಪಾಲಕ್ಕಾಡ್, ತ್ರಿಶೂರ್, ವಯನಾಡ್ ಜಿಲ್ಲೆಗಳನ್ನು ಸೇರಿಸಲಾಗುವುದು. ಈ ವಲಯಕ್ಕೆ ಭಾಗಶಃ ವಿನಾಯಿತಿ ನೀಡಲಾಗುವುದು. ನಾಲ್ಕನೇ ವಲಯದಲ್ಲಿ ಯಾವುದೇ ಕೋವಿಡ್ 19 ಪ್ರಕರಣಗಳಿಲ್ಲದ ಕೊಟ್ಟಾಯಂ ಮತ್ತು ಇಡುಕ್ಕಿ ಸೇರಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿಗಳು ತಮ್ಮ ಯೋಜನೆ ತಿಳಿಸಿದರು.

ಕೇರಳ ಸರ್ಕಾರವು ಇದನ್ನು ಮಾಡಲು ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆಯುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಗುರುವಾರ ಸಂಜೆ ವೇಳೆಗೆ ಕೇರಳ ಸರ್ಕಾರ ನೀಡಿರುವ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 394 ಕೋವಿಡ್-19 ಪ್ರಕರಣಗಳಿದ್ದು, ಅದರಲ್ಲಿ 147 ಪ್ರಕರಣಗಳು ಸಕ್ರಿಯವಾಗಿದೆ. 245 ಜನರು ಚೇತರಿಸಿಕೊಂಡಿದ್ದರೆ, ಈವರೆಗೆ ಎರಡು ಜನರು ಸಾವನ್ನಪ್ಪಿದ್ದಾರೆ.

- ಸಂಧ್ಯಾ ಎಂ.

First published: April 17, 2020, 2:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories