• ಹೋಂ
  • »
  • ನ್ಯೂಸ್
  • »
  • Corona
  • »
  • Corona 3rd Wave| ಲಾಕ್​ಡೌನ್ ಸಡಿಲಿಕೆಯಿಂದ ಏರುತ್ತಿರುವ ಕೊರೋನಾ ಕೇಸ್; ಕೇರಳದಲ್ಲಿ ಮತ್ತೆ ನೈಟ್​ ಕರ್ಫ್ಯೂ ಜಾರಿ

Corona 3rd Wave| ಲಾಕ್​ಡೌನ್ ಸಡಿಲಿಕೆಯಿಂದ ಏರುತ್ತಿರುವ ಕೊರೋನಾ ಕೇಸ್; ಕೇರಳದಲ್ಲಿ ಮತ್ತೆ ನೈಟ್​ ಕರ್ಫ್ಯೂ ಜಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೇರಳವು ಸತತ ನಾಲ್ಕನೇ ದಿನಕ್ಕೆ 30,000 ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ. ಶನಿವಾರ, ರಾಜ್ಯದಲ್ಲಿ 31,265 ಹೊಸ ಕೊರೋನಾ ವೈರಸ್ ಪ್ರಕರಣಗಳು ಮತ್ತು 153 ಸಾವುಗಳು ವರದಿಯಾಗಿವೆ.

  • Share this:

    ಕೊಚ್ಚಿ (ಸೆಪ್ಟೆಂಬರ್​ 28); ಕೇರಳದಲ್ಲಿ 10 ದಿನಗಳ ಓನಂ ಹಬ್ಬ ಮುಗಿದಿದೆ. ಆದರೆ, ಓನಂ ಮುಗಿಯುತ್ತಿದ್ದಂತೆ ಕೇರಳದಲ್ಲಿ (Kerala) ಕೊರೋನಾ (CoronaVirus) ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಈ ಪ್ರಸಂಗ ಸಾಮಾನ್ಯವಾಗಿ ಕೊರೋನಾ ಮೂರನೇ ಅಲೆಯ (Corona 3rd wave) ಬೆದರಿಕೆಯಾಗಿದ್ದು, ಕೇರಳದ ಅಕ್ಕ ಪಕ್ಕ ರಾಜ್ಯಗಳೂ ಸಹ ಕೇರಳದ ಗಡಿಯನ್ನು ಸಂಪೂರ್ಣವಾಗಿ ಮುಚ್ಚಿದೆ. ಪರಿಣಾಮ ಇಂದು ಈ ಬಗ್ಗೆ ಮಾತನಾಡಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan), "ಕೊರೋನಾ ವೈರಸ್ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಕೊರೋನಾ ನಿಯಮಗಳನ್ನು ಕಡ್ಡಾಯಾಗಿ ಪಾಲಿಸಲೇಬೇಕಾದ ಪರಿಸ್ಥಿತಿಗೆ ಕೇರಳ ಬಂದಿದೆ. ಹೀಗಾಗಿ ಸೋಂಕಿನ ಮತ್ತಷ್ಟು ಹರಡುವಿಕೆಯನ್ನು ನಿಯಂತ್ರಿಸುವ ಗುರಿಯೊಂದಿಗೆ, ಮುಂದಿನ ವಾರದಿಂದ (ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ) ರಾತ್ರಿ ಕರ್ಫ್ಯೂ ಅನ್ನು ಮರಳಿ ಜಾರಿಗೊಳಿಸುತ್ತಿರುವುದಾಗಿ" ಅವರು ಘೋಷಣೆ ಮಾಡಿದ್ದಾರೆ.


    "ಕೇರಳದಲ್ಲಿ ಕೊರೋನಾ ಸಂಖ್ಯೆ ಏರಿಕೆಯಾಗಲು ಲಾಕ್​ಡೌನ್ ಸಡಿಲಿಕೆಯೇ ಕಾರಣ. ಓನಂ ನಂತರ ಕೊರೋನಾ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಆದರೆ, ಹಬ್ಬದ ನಂತರ ಈ ರೀತಿಯ ಬೆಳವಣಿಗೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಮುಂಚೆಯೇ ನಿರೀಕ್ಷೆಗಳಿದ್ದವು. ಅದಕ್ಕಾಗಿಯೇ ನಾವು ರಾಜ್ಯದಲ್ಲಿ ಚಿಕಿತ್ಸಾ ಸೌಲಭ್ಯಗಳನ್ನು ಹೆಚ್ಚಿಸಿದ್ದೇವೆ. ಅಲ್ಲದೆ, ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕೊರೋನಾ ನಿಯಮಗಳನ್ನು ಪಾಲಿಸಲು ಮುಂದಾಗಲಿದ್ದೇವೆ" ಎಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ.


    ರಾಜ್ಯದಲ್ಲಿ ನಡೆಯುತ್ತಿರುವ ಲಸಿಕೆ ಅಭಿಯಾನದ ಕುರಿತು ಮಾತನಾಡಿದ ಸಿಎಂ ಪಿಣರಾಯಿ ವಿಜಯನ್, "ಕೇರಳದಲ್ಲಿ ಚುಚ್ಚುಮದ್ದು ಅಭಿಯಾನ ಚುರುಕಾಗಿ ನಡೆಯುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ, ಕೇರಳವು ದೇಶದಲ್ಲಿ ವೇಗವಾಗಿ ಚುಚ್ಚುಮದ್ದು ನೀಡುವ ರಾಜ್ಯವಾಗಿದೆ. ನಾವು ಒಂದೇ ದಿನದಲ್ಲಿ 5 ಲಕ್ಷ ಡೋಸ್‌ಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದೇವೆ. ಸಾವಿನ ಪ್ರಮಾಣ ಇನ್ನೂ ನಿಯಂತ್ರಣದಲ್ಲಿದೆ, ಆದಾಗ್ಯೂ, ಪ್ರಕರಣಗಳ ಸಂಖ್ಯೆಯಲ್ಲಿ ಇತ್ತೀಚೆಗೆ ಹೆಚ್ಚಳವಾಗುತ್ತಿದೆ. ಸೆಪ್ಟೆಂಬರ್‌ನಲ್ಲಿಯೇ, 18 ಕ್ಕಿಂತ ಹೆಚ್ಚಿನ ಎಲ್ಲಾ ವಯೋಮಾನದವರಿಗೆ ನಾವು ಸಂಪೂರ್ಣ ಮೊದಲ ಡೋಸ್ ನೀಡಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ತಿಳಿಸಿದ್ದಾರೆ.


    ಇದನ್ನೂ ಓದಿ: IMA Scam Case| ಕುತೂಹಲ ಮೂಡಿಸಿದ ಜಮೀರ್ ಅಹ್ಮದ್ ಮತ್ತು ಸಚಿವ ಆರ್. ಅಶೋಕ್ ಭೇಟಿ


    ಕೇರಳವು ಸತತ ನಾಲ್ಕನೇ ದಿನಕ್ಕೆ 30,000 ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ. ಶನಿವಾರ, ರಾಜ್ಯದಲ್ಲಿ 31,265 ಹೊಸ ಕೊರೋನಾ ವೈರಸ್ ಪ್ರಕರಣಗಳು ಮತ್ತು 153 ಸಾವುಗಳು ವರದಿಯಾಗಿವೆ. ಕೇರಳ ಆರೋಗ್ಯ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1,67,497 ಮಾದರಿಗಳನ್ನು ಪರೀಕ್ಷಿಸಲಾಗಿದೆ.


    ಇದನ್ನೂ ಓದಿ: Mysore Gang Rape Case| ಜನಾಕ್ರೋಶಕ್ಕೆ ಮಣಿದು ಮಹಿಳಾ ವಿರೋಧಿ ಆದೇಶವನ್ನು ಹಿಂಪಡೆದ ಮೈಸೂರು ವಿಶ್ವವಿದ್ಯಾಲಯ


    ಕೇರಳ ಸರ್ಕಾರ ಭಾನುವಾರದಿಂದ ಲಾಕ್‌ಡೌನ್ ಮುಂದುವರಿಸಲು ನಿರ್ಧರಿಸಿದೆ. ರಾಜ್ಯದಲ್ಲಿ ಕಳಪೆ ಕೋವಿಡ್ -19 ನಿರ್ವಹಣೆಗೆ ಪ್ರತಿಪಕ್ಷಗಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರಿಂದ ಟೀಕೆಗಳನ್ನು ಎದುರಿಸುತ್ತಿರುವ ಸರ್ಕಾರ, ಭಾನುವಾರ ಮಾತ್ರ ಸೀಮಿತ ಅನುಮತಿಸುವ ಚಟುವಟಿಕೆಗಳೊಂದಿಗೆ ಲಾಕ್‌ಡೌನ್ ಜಾರಿಯಲ್ಲಿರುತ್ತದೆ ಎಂದು ತಿಳಿಸಿದೆ.


    ಈ ನಡುವೆ ಕೇರಳದಲ್ಲಿ ವೇಗವಾಗಿ ಹರಡುತ್ತಿರುವ ಮುಂಬೈಗೂ ಮಾರಕವಾಗಲಿದೆ ಎನ್ನಲಾಗುತ್ತಿದೆ. ಮುಂಬೈ ನಗರದಲ್ಲಿ ಸೆಪ್ಟೆಂಬರ್​ ಅಂತ್ಯದ ವೇಳೆಗೆ ಕೊರೋನಾ ಮೂರನೇ ಅಲೆ ಅಪ್ಪಳಿಸಲಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದು, ಕೇರಳದಲ್ಲಿ ಕೊರೋನಾ ಸಂಖ್ಯೆ ಏರಿಕೆಯಾಗುತ್ತಿರುವುದು ತಜ್ಞರ ಅಭಿಪ್ರಾಯಕ್ಕೆ ಪೂರಕವಾಗಿದೆ. ಹೀಗಾಗಿ ಕೇರಳ ಮಹಾರಾಷ್ಟ್ರ ಜೊತೆಗೆ ದಕ್ಷಿಣದ ಎಲ್ಲಾ ರಾಜ್ಯಗಳೂ ಮೂರನೇ ಅಲೆಗೆ ಸಿದ್ಧತೆ ನಡೆಸಿಕೊಳ್ಳುವ ಅಗತ್ಯ ಇದೆ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರವೂ ಈಗಾಗಲೇ ಎಲ್ಲಾ ರಾಜ್ಯಗಳು ಮೂರನೇ ಅಲೆಗೆ ಸಿದ್ದವಾಗಿರಿ ಎಂದು ಎಚ್ಚರಿಕೆಯನ್ನೂ ನೀಡಿರುವುದು ಗಮನಾರ್ಹ.

    Published by:MAshok Kumar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು