HOME » NEWS » Coronavirus-latest-news » KERALA BEGINS CULLING OF BIRDS TO CONTAIN BIRD FLU RH

ಹಕ್ಕಿ ಜ್ವರ ಪತ್ತೆ; ಕೇರಳದಲ್ಲಿ ಕೋಳಿಗಳ ನಾಶಕ್ಕೆ ಸರ್ಕಾರ ಆದೇಶ

ಕೊರೋನಾ ಹಾಗೂ ಹಕ್ಕಿ ಜ್ವರ ಭೀತಿಯಿಂದ ಜನರು ಚಿಕನ್ ತಿನ್ನುವುದನ್ನು ಕಡಿಮೆ ಮಾಡಿರುವ ಕಾರಣ ಕರ್ನಾಟಕದಲ್ಲಿ ಕೋಳಿ ದರ ತೀರ ಕಡಿಮೆಯಾಗಿದೆ. ಇದರಿಂದಾಗಿ ಕೋಳಿ ಸಾಕಾಣಿಕೆದಾರರು ನಷ್ಟ ಅನುಭವಿಸುತ್ತಿದ್ದಾರೆ.


Updated:March 14, 2020, 4:17 PM IST
ಹಕ್ಕಿ ಜ್ವರ ಪತ್ತೆ; ಕೇರಳದಲ್ಲಿ ಕೋಳಿಗಳ ನಾಶಕ್ಕೆ ಸರ್ಕಾರ ಆದೇಶ
ಸಾಂದರ್ಭಿಕ ಚಿತ್ರ.
  • Share this:
ಮಲ್ಲಪುರಂ (ಕೇರಳ): ಕೇರಳದಲ್ಲಿ ಇದೀಗ ಕೊರೋನಾ ಬಳಿಕ ಮತ್ತೊಂದು ಸಮಸ್ಯೆ ಎದುರಾಗಿದೆ. ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರ ನಡುವೆಯೇ ಹಕ್ಕಿ ಜ್ವರ ಕಾಣಿಸಿಕೊಂಡು ಮತ್ತಷ್ಟು ಆತಂಕವನ್ನು ಹುಟ್ಟುಹಾಕಿದೆ. ಹಕ್ಕಿ ಜ್ವರ ಕಾಣಿಸಿಕೊಂಡ ಸ್ಥಳದ 1 ಕಿ.ಮೀ. ಸುತ್ತಮುತ್ತಲಿನ ಕೋಳಿ ಫಾರಂ, ಕೋಳಿ ಮೊಟ್ಟೆ, ಪಾರಿವಾಳ ಸೇರಿದಂತೆ ಇತರೆ ಪಕ್ಷಿಗಳನ್ನು ತೆರವುಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಮಲ್ಲಪುರಂನ ಪರಪ್ಪನಂಗಡಿ ಸುತ್ತಮುತ್ತ ಎರಡು ಹಕ್ಕಿಜ್ವರ ಪ್ರಕರಣಗಳು ಪತ್ತೆಯಾಗಿವೆ. ಈ ಕಾರಣದಿಂದಾಗಿ ಈ ಪ್ರದೇಶದ ಸುತ್ತಮುತ್ತಲಿನ ಕೋಳಿಫಾರಂಗಳಲ್ಲಿದ್ದ ಕೋಳಿಗಳನ್ನು ನಾಶಪಡಿಸಲಾಗಿದೆ.

ಸ್ಥಳೀಯ ಆರೋಗ್ಯಾಧಿಕಾರಿಗಳು ತೆರವು ಕಾರ್ಯಕ್ಕಾಗಿ ಹತ್ತು ತಂಡಗಳನ್ನು ನಿಯೋಜಿಸಿದ್ದಾರೆ. ಈ ತಂಡಗಳು ಎಲ್ಲ ಕೋಳಿಫಾರಂಗಳನ್ನು ತಪಾಸಣೆ ಮಾಡಿ ಕೋಳಿಗಳು, ಮೊಟ್ಟೆಗಳು, ನಾಟಿ ಕೋಳಿಗಳು, ಪಾರಿವಾಳಗಳನ್ನು ಪತ್ತೆ ಹಚ್ಚಿ ಅವುಗಳ ಗೂಡುಗಳನ್ನು ನಾಶಪಡಿಸುತ್ತಿವೆ.

ಕೇರಳ ಆರೋಗ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಎಲ್ಲೆಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆಯೋ ಆ ಪ್ರದೇಶಗಳ ಸುತ್ತಮುತ್ತಲಿನ ಕೋಳಿಫಾರಂಗಳನ್ನು ನಾಶಪಡಿಸಲಾಗುತ್ತಿದೆ. ಕರ್ನಾಟಕ –ಕೇರಳ ಗಡಿಭಾಗವಾದ ಮೈಸೂರು, ಮಡಿಕೇರಿ, ಕಾಸರಗೋಡು ಪ್ರದೇಶಗಳಲ್ಲಿ ರಾಜ್ಯ ಸರ್ಕಾರ ಕಟ್ಟೆಚ್ಚರ ವಹಿಸಿದೆ.

ಇದನ್ನು ಓದಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆ; 10 ಸೋಂಕಿತರು ಚೇತರಿಕೆ

ಕೊರೋನಾ ಹಾಗೂ ಹಕ್ಕಿ ಜ್ವರ ಭೀತಿಯಿಂದ ಜನರು ಚಿಕನ್ ತಿನ್ನುವುದನ್ನು ಕಡಿಮೆ ಮಾಡಿರುವ ಕಾರಣ ಕರ್ನಾಟಕದಲ್ಲಿ ಕೋಳಿ ದರ ತೀರ ಕಡಿಮೆಯಾಗಿದೆ. ಇದರಿಂದಾಗಿ ಕೋಳಿ ಸಾಕಾಣಿಕೆದಾರರು ನಷ್ಟ ಅನುಭವಿಸುತ್ತಿದ್ದಾರೆ.
First published: March 14, 2020, 4:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories