Pinarayi Vijayan| ಉಚಿತ ಸಾರ್ವಜನಿಕ ಲಸಿಕೆ ನೀಡಿ: ಕೇರಳ ಅಸೆಂಬ್ಲಿಯಲ್ಲಿ ನಿರ್ಣಯ ಅಂಗೀಕರಿಸಿದ ಪಿಣರಾಯಿ ವಿಜಯನ್ ಸರ್ಕಾರ!

ಕೇರಳ ರಾಜ್ಯವು COVID-19 ಲಸಿಕೆಯ ತೀವ್ರ ಕೊರತೆಯನ್ನು ಎದುರಿಸುತ್ತಿರುವ ಕಾರಣ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಅವರು ಜೂನ್ 2 ರಂದು ಸದನದಲ್ಲಿ ಈ ನಿರ್ಣಯವನ್ನು ಮಂಡಿಸಿದರು.

ಪಿಣರಾಯಿ ವಿಜಯನ್.

ಪಿಣರಾಯಿ ವಿಜಯನ್.

  • Share this:
    ಕೊಚ್ಚಿ (ಜೂನ್ 02); ಕೊರೋನಾ ಸೋಂಕನ್ನು ಗೆಲ್ಲಲು ಇರುವ ಏಕೈಕ ದಾರಿ ಎಲ್ಲರಿಗೂ ಲಸಿಕೆಯನ್ನು ನೀಡುವುದು. ಆದರೆ, ಮೇ.01 ರಂದು ಲಸಿಕೆ ಕಾರ್ಯಕ್ರ ಮಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದರೂ ಸಹ ಈವರೆಗೆ ಯಾವ ರಾಜ್ಯಕ್ಕೂ ಸಹ ಸಂಪೂರ್ಣ ಲಸಿಕೆಯನ್ನು ನೀಡಿಲ್ಲ. ಅಲ್ಲದೆ, ಲಸಿಕೆಯನ್ನು ಉಚಿತವಾಗಿ ನೀಡಬೇಕು ಎಂದು ಎಲ್ಲಾ ರಾಜ್ಯಗಳು ಮನವಿಯನ್ನು ಸಲ್ಲಿಸಿದರೂ ಸಹ ಕೇಂದ್ರ ಸರ್ಕಾರ ಈವರೆಗೆ ಉಚಿತ ಲಸಿಕೆಗೆ ಒಪ್ಪಿಗೆ ನೀಡಿಲ್ಲ. ಹೀಗಾಗಿ ಕೋವಿಡ್ -19 ಲಸಿಕೆಯನ್ನು ಕೇರಳ ರಾಜ್ಯಕ್ಕೆ ಉಚಿತವಾಗಿ ನೀಡಬೇಕು ಮತ್ತು ಲಸಿಕೆಗಳನ್ನು ಸಕಾಲಿಕವಾಗಿ ನಾಗರಿಕರಿಗೆ ವಿತರಿಸಬೇಕು ಎಂದು ಕೇರಳ ಶಾಸಕಾಂಗವು ಇಂದು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದೆ.

    ಕೇರಳ ರಾಜ್ಯವು COVID-19 ಲಸಿಕೆಯ ತೀವ್ರ ಕೊರತೆಯನ್ನು ಎದುರಿಸುತ್ತಿರುವ ಕಾರಣ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಅವರು ಜೂನ್ 2 ರಂದು ಸದನದಲ್ಲಿ ಈ ನಿರ್ಣಯವನ್ನು ಮಂಡಿಸಿದರು. ತಮ್ಮ ಸರ್ಕಾರವು ನಾಗರಿಕರಿಗೆ ಉಚಿತವಾಗಿ COVID-19 ಲಸಿಕೆಯನ್ನು ನೀಡಲಿದೆ ಮತ್ತು ಶೀಘ್ರದಲ್ಲಿ 1 ಕೋಟಿ ಲಸಿಕೆ ನೀಡುವಂತೆ ಕೇಂದ್ರಕ್ಕೆ ಸಿಎಂ ಪಿಣರಾಯಿ ವಿಜಯನ್ ಮನವಿ ಸಲ್ಲಿಸಿದ್ದಾರೆ ಎಂದು ಅವರು ಈ ವೇಳೆ ತಿಳಿಸಿದ್ದಾರೆ.

    ಆರೋಗ್ಯ ಸಚಿವರು ಮಂಡಿಸಿದ ನಿರ್ಣಯವು ಕೇಂದ್ರ ಸರ್ಕಾರದ ಲಸಿಕೆ ನೀತಿಯನ್ನು ಟೀಕಿಸಿದೆ. ಇದು ಉತ್ಪಾದಕರಿಂದ ಲಸಿಕೆ ಖರೀದಿಗೆ ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ರಾಜ್ಯಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಪಾಯಕಾರಿ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಉಚಿತ ಲಸಿಕೆಗಳನ್ನು ಈ ಮೊದಲು ರಾಷ್ಟ್ರೀಯ ನೀತಿಯಾಗಿ ಸ್ವೀಕರಿಸಲಾಗಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರ ರಾಜ್ಯಗಳೇ ಲಸಿಕೆಯನ್ನು ಖರೀದಿಸುವಂತೆ ತಾಕೀತು ಮಾಡಿದೆ. ಇದು ಅತ್ಯಂತ ಖಂಡನೀಯವಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

    ಇದನ್ನೂ ಓದಿ: Amit Shah: ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ, ಕಠಿಣ ಕಾಯ್ದೆ ರೂಪಿಸಲು ಗೃಹ ಸಚಿವ ಅಮಿತ್ ಶಾಗೆ IMA ಪತ್ರ!

    COVID-19 ರ ಮೊದಲ ಅಲೆಯು ಆರ್ಥಿಕತೆಯನ್ನು ದುರ್ಬಲಗೊಳಿಸಿದೆ ಮತ್ತು ಈಗ ದೇಶವು ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ನಿವಾರಿಸಲು ಹೋರಾಡುತ್ತಿದೆ. ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸುವುದು ಆರ್ಥಿಕತೆಗೆ ಸಹಾಯ ಮಾಡುತ್ತದೆ ಮತ್ತು ಜನರ ಜೀವ ಉಳಿಸುತ್ತದೆ ಎಂದು ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಅವರು ಸದನಕ್ಕೆ ತಿಳಿಸಿದರು.

    ತುರ್ತು ಬಳಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅನುಮೋದನೆ ಪಡೆದ ಇತರ ಲಸಿಕೆಗಳನ್ನು ಮತ್ತು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ, ಮೆಡಿಸಿನ್ಸ್ ಮತ್ತು ಹೆಲ್ತ್‌ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ, ಫಾರ್ಮಾಸ್ಯುಟಿಕಲ್ಸ್ ಮತ್ತು ಮೆಡಿಕಲ್ ಡಿವೈಸಸ್ ಏಜೆನ್ಸಿ, ಆಹಾರ ಮತ್ತು ಔಷಧ ಆಡಳಿತದಿಂದ ಅನುಮೋದನೆ ಪಡೆದ ಇತರ ಲಸಿಕೆಗಳನ್ನು ಅನುಮತಿಸಲು ಕೇಂದ್ರವನ್ನು ನಿರ್ಣಯದಲ್ಲಿ ಕೋರಲಾಗಿದೆ.

    ಇದನ್ನೂ ಓದಿ: Karnataka Lockdown Extension | ಕರ್ನಾಟಕದಲ್ಲಿ ಮತ್ತೆ ಲಾಕ್​ಡೌನ್ ಫಿಕ್ಸ್​; ಸಿಎಂ ಯಡಿಯೂರಪ್ಪ ಘೋಷಣೆ

    ಪ್ರತಿಪಕ್ಷಗಳು ಮಂಡಿಸಿದ ತಿದ್ದುಪಡಿಗಳನ್ನು ಸೇರಿಸಿದ ನಂತರ ಈ ನಿರ್ಣಯವನ್ನು ಸದನವು ಅಂಗೀಕರಿಸಿತು. 15 ನೇ ಕೇರಳ ವಿಧಾನಸಭೆಯ ಆಡಳಿತಾರೂ ಸಿಪಿಐ (ಎಂ) ನೇತೃತ್ವದ ಎಡ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಮತ್ತು ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮೊದಲ ಅಧಿವೇಶನದಲ್ಲಿ ಅಂಗೀಕರಿಸುತ್ತಿರುವ ಎರಡನೇ ಸರ್ಕಾರದ ನಿರ್ಣಯ ಇದಾಗಿದೆ.

    ಮೊದಲನೆಯದು ಮೇ 31 ರಂದು ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರನ್ನು ವಾಪಸ್ ಕರೆಸಿಕೊಳ್ಳಬೇಕು ಮತ್ತು ಅವರು ಹೊರಡಿಸಿದ ವಿವಾದಾತ್ಮಕ ಆದೇಶಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಡಿಸಿದ ನಿರ್ಣಯವನ್ನು ಕೇರಳ ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿತ್ತು. ಕಾಂಗ್ರೆಸ್​ ನೇತೃತ್ವದ ವಿರೋಧ ಪಕ್ಷಗಳು ಸಹ ಇದಕ್ಕೆ ಒಪ್ಪಿಗೆ ನೀಡಿದ್ದವು. ಈ ಎರಡನೇ ನಿರ್ಣಯಕ್ಕೆ ಕೇಂದ್ರ ಹೇಗೆ ಪ್ರತಿಕ್ರಿಯೆ ನೀಡಲಿದೆ? ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.
    Published by:MAshok Kumar
    First published: