ನವದೆಹಲಿ: ಸಿಂಗಾಪುರವು ಬುಧವಾರ ಭಾರತೀಯ ರಾಯಭಾರಿಯನ್ನು ಕರೆದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ “ಸಿಂಗಾಪುರ್ ರೂಪಾಂತರ” ಕುರಿತ ಹೇಳಿಕೆಗೆ “ಬಲವಾದ ಆಕ್ಷೇಪಣೆ” ವ್ಯಕ್ತಪಡಿಸಿದೆ ಎಂದು ಸರ್ಕಾರ ಹೇಳಿದೆ. ಕೋವಿಡ್ ರೂಪಾಂತರ ಬಗ್ಗೆ ಹೇಳಲು ಕೇಜ್ರಿವಾಲ್ ಅವರಿಗೆ “ಯಾವುದೇ ಸಾಮರ್ಥ್ಯವಿಲ್ಲ” ಎಂದು ರಾಯಭಾರಿ ಹೇಳಿದ್ದಾಗಿ ಎಂದು ಹೇಳಿದರು.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭಾರತ ಮತ್ತು ಸಿಂಗಾಪುರ ಸಂಬಂಧವನ್ನು ಶ್ಲಾಘಿಸುತ್ತಾ, ದೆಹಲಿ ಸಿಎಂ ಕೇಜ್ರಿವಾಲ್ ಅವರು ಭಾರತಕ್ಕಾಗಿ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
"ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಸಿಂಗಾಪುರ ಮತ್ತು ಭಾರತವು ಅತ್ಯುತ್ತಮ ಸಹಕಾರ, ಸಂಬಂಧ ಹೊಂದಿವೆ. ಲಾಜಿಸ್ಟಿಕ್ಸ್ ಹಬ್ ಮತ್ತು ಆಮ್ಲಜನಕ ಪೂರೈಕೆದಾರರಾಗಿ ಸಿಂಗಾಪುರದ ಪಾತ್ರವನ್ನು ಶ್ಲಾಘಿಸಬೇಕು. ನಮಗೆ ಸಹಾಯ ಮಾಡಲು ಮಿಲಿಟರಿ ವಿಮಾನಗಳನ್ನು ನಿಯೋಜಿಸಿರುವುದು ನಮ್ಮ ಸಂಬಂಧವನ್ನು ಹೇಳುತ್ತದೆ. ಬೇಜವಾಬ್ದಾರಿ ಟೀಕೆಗಳು ದೀರ್ಘಕಾಲದ ಸಂಬಂಧವನ್ನು ಹಾನಿಗೊಳಿಸುತ್ತವೆ ಎಂಬುದನ್ನು ಟೀಕೆ ಮಾಡುವವರು ತಿಳಿದುಕೊಳ್ಳಬೇಕು. ಆದ್ದರಿಂದ, ನಾನು ಸ್ಪಷ್ಟಪಡಿಸುತ್ತೇನೆ ದೆಹಲಿ ಸಿಎಂ ಭಾರತಕ್ಕಾಗಿ ಮಾತನಾಡುವುದಿಲ್ಲ,"ಎಂದು ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: Vaccine: ಶೀಘ್ರದಲ್ಲಿ ಮಕ್ಕಳಿಗೆ ಲಸಿಕೆ?; 10ರಿಂದ 12 ದಿನದಲ್ಲಿ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಪ್ರಯೋಗ ಆರಂಭ- ಕೇಂದ್ರ ಸರ್ಕಾರ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಿಂಗಾಪುರದೊಂದಿಗಿನ ಎಲ್ಲಾ ವಾಯು ಸೇವೆಗಳನ್ನು ತಕ್ಷಣವೇ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಸಿಂಗಾಪುರದಲ್ಲಿ ಕಂಡುಬಂದಿರುವ ಹೊಸ ರೂಪಾಂತರಿ ಕೊರೋನಾ ವೈರಸ್ ಮಕ್ಕಳಿಗೆ ಮೇಲೆ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತದೆ. ಈ ಹೊಸ ವೈರಸ್ ಮೂರನೇ ತರಂಗ ರೂಪದಲ್ಲಿ ಭಾರತವನ್ನು ಆಕ್ರಮಿಸಬಹುದು ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದರು.
“ಸಿಂಗಾಪುರದಲ್ಲಿ ಕಂಡುಬಂದಿರುವ ಹೊಸ ರೂಪದ ಕೊರೋನಾ ವೈರಸ್ ಮಕ್ಕಳಿಗೆ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತದೆ. ಇದು ಮೂರನೇ ಅಲೆಯ ರೂಪದಲ್ಲಿ ದೆಹಲಿಯನ್ನು ತಲುಪಬಹುದು. ಹೀಗಾಗಿ ಕೇಂದ್ರ ಸರ್ಕಾರಕ್ಕೆ ನನ್ನ ಮನವಿ ಏನೆಂದರೆ ಸಿಂಗಾಪುರದೊಂದಿಗಿನ ಎಲ್ಲಾ ವಾಯು ಸೇವೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಮಾಡಬೇಕು. ಮತ್ತು ಆದ್ಯತೆಯ ಆಧಾರದ ಮೇಲೆ ಮಕ್ಕಳಿಗೆ ಲಸಿಕೆ ಪರ್ಯಾಯಗಳ ಬಗ್ಗೆ ಕೆಲಸ ಮಾಡಬೇಕು,"ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಮನವಿ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ