‘ದೆಹಲಿಯಲ್ಲಿ ಕೊರೋನಾ ರೋಗಿಗಳು ಶೀಘ್ರ ಗುಣಮುಖ ಆಗಲಿದ್ದಾರೆ, ಭಯ ಪಡಬೇಕಿಲ್ಲ‘ - ಕೇಜ್ರೀವಾಲ್

ಕಳೆದ ವಾರ ದೆಹಲಿಯಲ್ಲಿ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ನಾವು ಜೂನ್ ತಿಂಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ಪ್ರತಿದಿನ 20ರಿಂದ 24 ಸಾವಿರ ಪರೀಕ್ಷೆ ನಡೆಸುತ್ತಿದ್ದೇವೆ. ಈ ಮೊದಲು ಹಾಸಿಗೆಗಳ ಸಮಸ್ಯೆ ಇತ್ತು. ಈಗ ಎಲ್ಲಾ ಆಸ್ಪತ್ರೆಗಳಲ್ಲಿ ಸರಿ ಸುಮಾರು 5,100 ರೋಗಿಗಳಿದ್ದಾರೆ. ಸುಮಾರು 10,000 ಹಾಸಿಗೆಗಳು ಖಾಲಿಯಾಗಿವೆ ಎಂದು ಕೇಜ್ರಿವಾಲ್​ ವಿವರಿಸಿದರು.

news18-kannada
Updated:July 6, 2020, 2:04 PM IST
‘ದೆಹಲಿಯಲ್ಲಿ ಕೊರೋನಾ ರೋಗಿಗಳು ಶೀಘ್ರ ಗುಣಮುಖ ಆಗಲಿದ್ದಾರೆ, ಭಯ ಪಡಬೇಕಿಲ್ಲ‘ - ಕೇಜ್ರೀವಾಲ್
ಅರವಿಂದ್ ಕೇಜ್ರಿವಾಲ್
  • Share this:
ನವದೆಹಲಿ(ಜು.06): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷದ ಗಡಿ ದಾಟುತ್ತಿದೆ. ಆದರೂ ಭಯಪಡುವ ಅಗತ್ಯ ಇಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಜನತೆಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅರವಿಂದ ಕೇಜ್ರೀವಾಲ್, ದೆಹಲಿಯಲ್ಲಿ ಕರೋನಾ ಪೀಡಿತರ ಸಂಖ್ಯೆ ಲಕ್ಷ ದಾಟುತ್ತಿದ್ದರೂ ಜನ ಭಯಪಡುವ ಅಗತ್ಯವಿಲ್ಲ. ಏಕೆಂದರೆ ಆ ಲಕ್ಷದ ಪೈಕಿ ಈಗಾಗಲೇ 72,000 ಜನ ಗುಣಮುಖರಾಗಿದ್ದಾರೆ ಎಂದು ಹೇಳಿದರು.

ಕಳೆದ ವಾರ ದೆಹಲಿಯಲ್ಲಿ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ನಾವು ಜೂನ್ ತಿಂಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ಪ್ರತಿದಿನ 20ರಿಂದ 24 ಸಾವಿರ ಪರೀಕ್ಷೆ ನಡೆಸುತ್ತಿದ್ದೇವೆ. ಈ ಮೊದಲು ಹಾಸಿಗೆಗಳ ಸಮಸ್ಯೆ ಇತ್ತು. ಈಗ ಎಲ್ಲಾ ಆಸ್ಪತ್ರೆಗಳಲ್ಲಿ ಸರಿ ಸುಮಾರು 5,100 ರೋಗಿಗಳಿದ್ದಾರೆ. ಸುಮಾರು 10,000 ಹಾಸಿಗೆಗಳು ಖಾಲಿಯಾಗಿವೆ ಎಂದು ವಿವರಿಸಿದರು.

ಸುದ್ದಿಗೋಷ್ಟಿಯಲ್ಲಿ ಪ್ಲಾಸ್ಮಾ ದಾನ ಮಾಡುವ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ ಅರವಿಂದ ಕೇಜ್ರೀವಾಲ್, ಜನರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಪ್ಲಾಸ್ಮಾ ದಾನ ಮಾಡಬೇಕು. ಪ್ಲಾಸ್ಮಾ ದಾನ ಮಾಡುವ ಬಗ್ಗೆ ಭಯಪಡಬೇಕಾದ ಅಗತ್ಯವಿಲ್ಲ. ಇದರಿಂದ ದಾನಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗುವುದಿಲ್ಲ. ಯಾವುದೇ ನೋವು ಆಗವುದಿಲ್ಲ ಎಂದರು.

ಇನ್ನು, ದೆಹಲಿಯಲ್ಲಿ ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ ಕಾರ್ಯಾರಂಭ ಮಾಡಿದೆ.‌ ಕೊರೋನಾ ವಿರುದ್ಧ ಹೋರಾಡಲು ಪ್ಲಾಸ್ಮಾ ಮಧ್ಯಮ ಪರಿಣಾಮಕಾರಿಯಾದುದಾಗಿದೆ. ಇದರಿಂದ ರೋಗಿಗಳ ಸ್ಥಿತಿಯನ್ನು ಸುಧಾರಿಸಬಹುದಾಗಿದೆ.‌ ಇದು ಸಾವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಕೋವಿಡ್​​-19 ಅಕ್ರಮ: ದಾಖಲೆ ಸಮೇತ ಆರೋಪ ಮಾಡುವಂತೆ ಸಿದ್ದರಾಮಯ್ಯಗೆ ಸಿಎಂ ಬಿ.ಎಸ್​​ ಯಡಿಯೂರಪ್ಪ ಸವಾಲ್​ಪ್ಲಾಸ್ಮಾ ದಾನದ ವಿಷಯದಲ್ಲಿ ಇದ್ದ ಎಲ್ಲಾ ಅವ್ಯವಸ್ಥೆಗಳು ಕಡಿಮೆಯಾಗಿವೆ. ಈಗ ಪ್ಲಾಸ್ಮಾ ಬೇಡಿಕೆ ಹೆಚ್ಚಾಗಿದೆ. ಜೂನ್ ತಿಂಗಳಲ್ಲಿ ಒಂದೇ ದಿನ ಪ್ಲಾಸ್ಮಾ ಕೊರತೆಯಿಂದ 125 ಸಾವು ಸಂಭವಿಸಿದ್ದವು. ಪ್ಲಾಸ್ಮಾ ದಾನ ಮಾಡುವವರ ಸಂಖ್ಯೆ ಹೆಚ್ಚಾದ ಪರಿಣಾಮ ಈಗ ಇಡೀ ಜುಲೈನಲ್ಲಿ 60 ಜನ ಮಾತ್ರ ಮೃತಪಟ್ಟಿದ್ದಾರೆ ಎಂದು ವಿವರಿಸಿದರು.

ಮಾರಕ ರೋಗ ಕೊರೋನಾದಿಂದ ಗುಣ ಆದವರಿಗೆ ಪ್ಲಾಸ್ಮಾ ದಾನ ಮಾಡುವಂತೆ ಮನವೊಲಿಸಬೇಕು. ಈ ನಿಟ್ಟಿನಲ್ಲಿ ಕೊರೋನಾ ಆಸ್ಪತ್ರೆಗಳು ಗುಣ ಆದವರನ್ನು ಸಂಪರ್ಕಿಸಿ ಕಾರ್ಯಪೃವತ್ತರಾಗಬೇಕು ಎಂದು ಅರವಿಂದ ಕೇಜ್ರೀವಾಲ್ ಸೂಚನೆ ನೀಡಿದರು.
Published by: Ganesh Nachikethu
First published: July 6, 2020, 2:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading