Karnataka CET Exam 2020 Date: ಕೊನೆಗೂ ಕೆ-ಸೆಟ್‌ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿದ ಮೈಸೂರು ವಿಶ್ವವಿದ್ಯಾಲಯ

KCET Exam 2020 Date: ಪರೀಕ್ಷೆ ತೆಗೆದುಕೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳಿಗಾಗಿ ಮೈಸೂರು ವಿಶ್ವವಿದ್ಯಾಲಯ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ಮೇ 25ರವರೆಗೆ ದಂಡ ಶುಲ್ಕ ರೂ.250ರ ಜೊತೆಗೆ ಪರೀಕ್ಷೆಗೆ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಾರಣಾಂತಿಕ ಕೊರೋನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿತ್ತು. ಅಲ್ಲದೆ, ಶಾಲಾ-ಕಾಲೇಜು ಮತ್ತು ಪರೀಕ್ಷೆಗಳನ್ನೂ ಸಹ ಮುಂದೂಡಲಾಗಿತ್ತು. ಆದರೆ, ಇದೀಗ ಲಾಕ್‌ಡೌನ್ ಹಂತ ಹಂತವಾಗಿ ತೆರವಾಗುತ್ತಿದ್ದು K-SET (ಕೆಸೆಟ್) ಪರೀಕ್ಷೆಗಳನ್ನು ನಡೆಸಲು ಮೈಸೂರು ವಿಶ್ವವಿದ್ಯಾಲಯ ಮುಂದಾಗಿದೆ. ಅಲ್ಲದೆ ಪರೀಕ್ಷಾ ದಿನಾಂಕವನ್ನೂ ಘೋಷಣೆ ಮಾಡಿದೆ.

ಮೈಸೂರು ವಿಶ್ವವಿದ್ಯಾಲಯ ಪ್ರತೀ ವರ್ಷ ಕರ್ನಾಟಕ ಪ್ರಾಧ್ಯಾಪಕರ್ ಅರ್ಹತಾ ಪರೀಕ್ಷೆ (K-SET)ಯನ್ನು ನಡೆಸುತ್ತದೆ. ಅದರಂತೆ ಈ ವರ್ಷವೂ ಕೊರೋನಾ ಭೀತಿಯ ನಡುವೆಯೂ ಪರೀಕ್ಷೆ ನಡೆಸಲು ಮುಂದಾಗಿರುವ ಮೈಸೂರು ವಿವಿ ಜೂನ್ 21, 2020ರ ಭಾನುವಾರದಂದು ಪರೀಕ್ಷೆ ನಡೆಸಲು ನಿರ್ಧರಿಸಿದೆ.

ಈ ಹಿಂದೆ ಕರ್ನಾಟಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು ಏಪ್ರಿಲ್ 12, 2020 ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೊರೋನಾ ಭೀತಿಯಿಂದಾಗಿ ಪರೀಕ್ಷೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.

ಪರೀಕ್ಷೆ ತೆಗೆದುಕೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳಿಗಾಗಿ ಮೈಸೂರು ವಿಶ್ವವಿದ್ಯಾಲಯ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ಮೇ 25ರವರೆಗೆ ದಂಡ ಶುಲ್ಕ ರೂ.250ರ ಜೊತೆಗೆ ಪರೀಕ್ಷೆಗೆ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬಹುದಾಗಿದೆ.

ಅಲ್ಲದೆ, ಕೆಸೆಟ್ ಪರೀಕ್ಷೆ ಕುರಿತು ಎಲ್ಲಾ ಮಾಹಿತಿಗಳನ್ನೂ ವಿಶ್ವವಿದ್ಯಾಲಯದ ವೆಬ್‌ಸೈಟಿನಲ್ಲಿ ನೀಡಲಾಗಿದ್ದು, ಆಸಕ್ತಿ ಇರುವವರು ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ : ಇಂದು ಸಂಜೆ 4 ಗಂಟೆಗೆ ಸಚಿವೆ ನಿರ್ಮಲಾ ಸೀತಾರಾಮನ್ ನೀಡಲಿದ್ದಾರೆ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ವಿವರ
First published: