ನವದೆಹಲಿ (ಮೇ. 31): ಕೊರೋನಾ ವೈರಸ್ ಸೋಂಕು ಜನರ ಜೀವನ ಶೈಲಿಯನ್ನೇ ಸಂಪೂರ್ಣವಾಗಿ ಬದಲಾಯಿಸಿ ಬಿಟ್ಟಿದೆ. ಮನೆಗಳೇ ಆಫೀಸ್, ಶಾಲೆ ಎಲ್ಲಾ ಆಗಿದೆ. ಅದರಲ್ಲೂ ಶಾಲೆ, ಮೈದಾನಗಳಲ್ಲಿ ಸ್ನೇಹಿತರೊಂದಿಗೆ ಮುಕ್ತವಾಗಿ ಆಡಿಕೊಂಡಿದ್ದ ಮಕ್ಕಳನ್ನು ಈ ಲಾಕ್ಡೌನ್ನಿಂದ ಕಳೆದೊಂದು ವರ್ಷದಿಂದ ಮನೆಯಲ್ಲಿಯೇ ಕಟ್ಟಿ ಹಾಕಲಾಗಿದೆ. ಯಾವುದೇ ಸಾಮಾಜಿಕ ಬೆರೆಯುವಿಕೆ ಇಲ್ಲದೇ ಮಕ್ಕಳು ಈಗಾಗಲೇ ಸಾಕಷ್ಟು ಒತ್ತಡಕ್ಕೆ ಸಿಲುಕಿದ್ದಾರೆ. ಈ ನಡುವೆಯೇ ಮಕ್ಕಳು ಪಠ್ಯಗಳಿಂದ ಹಿಂದುಳಿಯದಂತೆ ತಡೆಯಲು ಶಾಲೆಗಳು ಆನ್ ಲೈನ್ ಕ್ಲಾಸ್ ಮೊರೆ ಹೋಗಿವೆ. ಎಳೆವಯಸ್ಸಿನ ಮಕ್ಕಳನ್ನು ಈ ಆನ್ಲೈನ್ ಕಲಿಕೆ ಬಿಡುತ್ತಿಲ್ಲ. ಇದರ ಜೊತೆಗೆ ಹೋಂ ವರ್ಕ್ ಎಂಬ ಪೆಡಂಭೂತ ಅವರನ್ನು ಇನ್ನಷ್ಟು ಕಂಗೆಡಿಸುತ್ತಿದೆ. ಎಳೆಯ ಮಕ್ಕಳಿಗೆ ಇವುಗಳು ಸಾಕಷ್ಟು ತೊಂದರೆ ಒಡ್ಡಿ, ಜಿಗುಪ್ಸೆ ಮೂಡಿಸುತ್ತಿರುವುದು ಸುಳ್ಳಲ್ಲ. ಮಕ್ಕಳ ಮೇಲೆ ಆಗುತ್ತಿರುವ ಈ ಎಲ್ಲಾ ಸಮಸ್ಯೆಗಳ ಕುರಿತು 6 ವರ್ಷದ ಪುಟಾಣಿ ಪೋರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ದೂರಿದ್ದಾಳೆ. ಸಣ್ಣ ಮಕ್ಕಳಿಗೆ ಯಾಕೆ ಇಷ್ಟು ಕಷ್ಟ ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದಾಳೆ.
A six-year-old Kashmiri girl's complaint to @PMOIndia @narendramodi regarding long hours of online classes and too much of school work. pic.twitter.com/S7P64ubc9H
— Aurangzeb Naqshbandi (@naqshzeb) May 29, 2021
ಬೆಳಗ್ಗೆ 10 ರಿಂದ 2 ಗಂಟೆವರೆಗೆ ಆನ್ಲೈನ್ ಕ್ಲಾಸ್ ನಡೆಯುತ್ತದೆ, ಮೊದಲು ಇಂಗ್ಲಿಷ್, ನಂತರ ಗಣಿತ, ಉರ್ದು ಬಳಿಕ ಇವಿಎಸ್ ಜೊತೆಗೆ ಕಂಪ್ಯೂಟರ್ ಕ್ಲಾಸ್ ನಡೆಸುತ್ತಾರೆ. ಜೊತೆಗೆ ಹೋಂ ವರ್ಕ್ ಹೊರೆ ಇನ್ನಷ್ಟು ಇರುತ್ತದೆ. ಮಕ್ಕಳಿಗೆ ಎಷ್ಟೆಲ್ಲಾ ಕೆಲಸ ಗಳಿರುತ್ತದೆ ಎಂದು ಬಾಲಕಿ ತನ್ನ ಒತ್ತಡವನ್ನು ತೊಡಿಕೊಂಡಿದ್ದಾಳೆ.
ಸಣ್ಣ ಮಕ್ಕಳು ಯಾಕೆ ಇಷ್ಟೊಂದು ಕೆಲಸ ಮಾಡಬೇಕು. ಮೋದಿ ಸಾಹೇಬ್ ಎಂದು ಬಾಲಕಿ ವಿಡಿಯೋದಲ್ಲಿ ಪ್ರಶ್ನಿಸಿದ್ದಾಳೆ.
What a cutie. Modi ji are you listening to the woes of this young girl who is representing many young minds. Save them frm this torture called online classes.
— jayashree rangarajan (@jayaranga) May 30, 2021
ಇದನ್ನು ಓದಿ: ಮಗನ ಚಿಕಿತ್ಸೆಗೆ ಮೂರು ದಿನಗಳ ಕಾಲ ಸೈಕಲ್ ತುಳಿದು ಅಪ್ಪ; ಮೈಸೂರಿನಲ್ಲೊಂದು ಮನಕಲುಕುವ ಘಟನೆ
ಸಾಂಕ್ರಾಮಿಕ ಸೋಂಕು ಮಕ್ಕಳ ಮುಗ್ದತೆ, ಸ್ವಾತಂತ್ರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಅವರ ಕಲಿಕೆಯ ವಿಧಾನ ಎಷ್ಟು ಕಷ್ಟವಾಗಿದೆ ಎಂಬುದಕ್ಕೆ ಸಾಕ್ಷಿ ಇದಾಗಿದೆ ಎಂದು ಇಂದಿನ ಮಕ್ಕಳ ಸ್ಥಿತಿ ಕಂಡ ಕೆಲವರು ಮರುಕ ವ್ಯಕ್ತಪಡಿಸಿದ್ದಾರೆ.
ಈ ಬಾಲಕಿ ಪ್ರಶ್ನೆಗೆ ಕೆಲವರು ಸಹಮತ ಕೂಡ ವ್ಯಕ್ತಪಡಿಸಿದ್ದಾರೆ. ವಯಸ್ಸಿನಲ್ಲಿ ಆಡಿ ಕಲಿಯಬೇಕಾದ ಮಕ್ಕಳಿಗೆ ಕಲಿಕೆ ಎಂಬುದು ಈಗ ಹೊರೆಯಾಗಿದೆ, ಮಕ್ಕಳಿಗೆ ಕಲಿಕೆಗಿಂತ ಹೆಚ್ಚು ಆಟ, ಮೋಜು ಮಸ್ತಿ ಅವಶ್ಯಕತೆ ಇದೆ. ಆದರೆ, ಮಕ್ಕಳ ಬಾಲ್ಯ ಎಲ್ಲಾ ಕಲಿಕೆಯಲ್ಲ ಕಳೆದು ಹೋಗುತ್ತಿದೆ. ಅದರಲ್ಲೂ ಬೇರೆ ಮಕ್ಕಳ ಸಂಪರ್ಕವಿಲ್ಲದೇ, ತರಗತಿ ವಾತಾವರಣ ವಿಲ್ಲದೇ ಮನೆಯ ಗೋಡಯ ಮಧ್ಯೆ ಆನ್ಲೈನ್ ತರಗತಿಯಲ್ಲಿ ಕಲಿವುದು ನಿಜಕ್ಕೂ ಅಸಾಧ್ಯ ಎನಿಸುತ್ತದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ