ಹತ್ಯೆಗೀಡಾದ ಉಗ್ರರ ಶವವನ್ನು ತಾವೇ ಮಣ್ಣು ಮಾಡಲು ಮುಂದಾದ ಕಾಶ್ಮೀರ ಪೊಲೀಸರು

ಅಲ್-ಖೈದಾದ ಕಾಶ್ಮೀರ-ಪ್ರದೇಶದ ಅಂಗಸಂಸ್ಥೆಯಾದ ಅನ್ಸಾರ್ ಘಜ್ವಾತುಲ್ ಹಿಂದ್​ಗೆ​ ಸೇರಿದವರು ಎನ್ನಲಾಗಿರುವ ನಾಲ್ವರು ಉಗ್ರರನ್ನು  ಏಪ್ರಿಲ್ 22 ರಂದು ಸರ್ಕಾರದ ಸ್ಮಶಾನದಲ್ಲಿ ಸಮಾಧಿ ಮಾಡಲಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
   ಶ್ರೀನಗರ(ಏ. 25): ಹತ್ಯೆಗೀಡಾದ ಭಯೋತ್ಪಾದಕರ ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸದಿರಲು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ನಿರ್ಧರಿಸಿದ್ದಾರೆ. ಹತ್ಯೆಗೀಡಾದ ಉಗ್ರರ ಶವಗಳಿಗೆ ತಾವೇ ಸಂಸ್ಕಾರ ಮಾಡಲು ಪೊಲೀಸರು ಮುಂದಾಗಿದ್ದಾರೆ.

  ಈ ಬಗ್ಗೆ ಉನ್ನತ ಮಟ್ಟದ ಸರ್ಕಾರಿ ಮೂಲಗಳು ನೆಟ್‌ವರ್ಕ್ 18 ಗೆ ಮಾಹಿತಿ ನೀಡಿವೆ. ಮ್ಯಾಜಿಸ್ಟ್ರೇಟ್ ಮೇಲ್ವಿಚಾರಣೆಯಲ್ಲಿ ಸ್ಥಳೀಯ ಅಧಿಕಾರಿಗಳು ಉಗ್ರರ ಶವಗಳನ್ನು ಸಮಾಧಿ ಮಾಡುತ್ತಿದ್ದಾರೆ. ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮತ್ತು ಧಾರ್ಮಿಕ ವಿಧಿ ವಿಧಾನಗಳನ್ನು ಸಂಪೂರ್ಣವಾಗಿ ಅನುಸರಿಸಿ ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ  ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಇದನ್ನೂ ಓದಿ: 48 ದಿನ, 21 ಬಾರಿ ಪರೀಕ್ಷೆ; ಕೊನೆಗೂ ಕೊರೋನಾ ಜಯಿಸಿ ಡಿಸ್ಚಾರ್ಜ್ ಆದ ಕೇರಳದ ಮಹಿಳೆ

  ಈ ತಿಂಗಳ ಆರಂಭದಲ್ಲಿ ಸೊಪೋರ್​ನಲ್ಲಿ ಹತ್ಯೆಗೀಡಾದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಜ್ಜಾದ್ ನವಾಬ್ದಾರ್​ನ ಅಂತ್ಯಕ್ರಿಯೆ ಸಮಯದಲ್ಲಿ ಹಲವಾರು ಜನರು ಭಾಗವಹಿಸಿದ್ದ ಕಾರಣ ಕಾಶ್ಮೀರ ಸರ್ಕಾರಿ ಅಧಿಕಾರಿಗಳು ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಕುಲ್ಗಾಂನ ಅರ್ವಾನಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಅವರ ಮೊಹಮ್ಮದ್ ಅಶ್ರಫ್ ಮಲಿಕ್ ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಕೂಡ ಹೆಚ್ಚಿನ ಜನಸಂದಣಿ ನೆರೆದಿತ್ತು.

  ಆದರೂ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸದಿರುವುದರಿಂದ ಜಿಹಾದಿ ಗುಂಪುಗಳನ್ನು ಪ್ರಚೋದಿಸಿದಂತಾಗಬಹುದು ಎಂದು ಎಚ್ಚರಿಸಿದ್ದಾರೆ. ಜನರು ದೇಹಗಳನ್ನು ಅಗೆದು ತೆಗೆದು ಅವುಗಳನ್ನು ಮತ್ತೆ ಹಳ್ಳಿಗಳಿಗೆ ಕೊಂಡೊಯ್ಯುವ ಸಾಧ್ಯತೆಯಿದೆ ಇದೆ ಎಂದಿದ್ದಾರೆ.

  ಇದನ್ನೂ ಓದಿ: ಪುಲ್ವಾಮದಲ್ಲಿ ಬೆಳ್ಳಂಬೆಳಗ್ಗೆ ಎನ್​ಕೌಂಟರ್; ಸೇನಾಪಡೆಯಿಂದ ಇಬ್ಬರು ಉಗ್ರರ ಹತ್ಯೆ

  ಗುರುತಿಸಲಾಗದ ಭಯೋತ್ಪಾದಕರ ಅಂತ್ಯಕ್ರಿಯೆಯ ಜವಾಬ್ದಾರಿಯು ಕಾಶ್ಮೀರದ ಸ್ಥಳೀಯ ಅಧಿಕಾರಿಗಳದ್ದಾಗಿದೆ. ಅಲ್ಲದೇ ಸಾವಿರಾರು ಪಾಕಿಸ್ತಾನಿ ಪ್ರಜೆಗಳು ನಿಯಂತ್ರಣ ರೇಖೆಯನ್ನು ( ಎಲ್ ಓ ಸಿ) ದಾಟಲು ಪ್ರಯತ್ನಿಸುವಾಗ ಭಾರತೀಯ ಸೇನೆಯೊಂದಿಗಿನ ಮುಖಾಮುಖಿಯಾದಾಗ ಹತರಾಗಿದ್ದಾರೆ.

  (ವರದಿ: ಸಂಧ್ಯಾ ಎಂ)
  First published: