ದೆಹಲಿಯ ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕದ 12 ಜನರ ವರದಿ ನೆಗೆಟಿವ್

ಈ ಪ್ರಾರ್ಥನೆಯಲ್ಲಿ ಇಂಡೋನೇಷ್ಯಾ ಮತ್ತು ಮಲೇಶಿಯಾದ 62 ಮಂದಿ ಭಾಗಿಯಾಗಿದ್ದರು. ಈ 62 ಜನರು ಕರ್ನಾಟಕಕ್ಕೆ ಬಂದಿದ್ದು ಅವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

news18-kannada
Updated:April 1, 2020, 2:45 PM IST
ದೆಹಲಿಯ ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕದ 12 ಜನರ ವರದಿ ನೆಗೆಟಿವ್
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಏ.01): ರಾಷ್ಟ್ರ ರಾಜಧಾನಿ ನವದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ಭಾಗಿಯಾಗಿದ್ದ ಕರ್ನಾಟಕದ 300 ಜನರ ಪೈಕಿ 1 ಜನರ ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಟ್ವೀಟ್​ ಮಾಡಿರುವ ಸಚಿವ ಶ್ರೀರಾಮುಲು, ದೆಹಲಿಯ ನಿಜಾಮುದ್ದೀನ್​ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಕರ್ನಾಟಕದ ಒಟ್ಟು 300 ಮಂದಿ ಪಾಲ್ಗೊಂಡಿದ್ದರು. ಆರೋಗ್ಯ  ಇಲಾಖೆ ಈ 300 ಜನರ ಮಾಹಿತಿ ಪಡೆದಿದೆ. ಇವರಲ್ಲಿ 40 ಜನರನ್ನು ಪತ್ತೆ ಹಚ್ಚಿ ಕ್ವಾರಂಟೈನ್​ ಮಾಡಲಾಗುತ್ತಿದೆ. ಸದ್ಯ ಈ 40 ಜನರ ಪೈಕಿ 12 ಮಂದಿಯ ವರದಿಯಲ್ಲಿ ನೆಗೆಟಿವ್ ಇರುವುದು ದೃಢಪಟ್ಟಿದೆ ಎಂದು ಹೇಳಿದ್ದಾರೆ.ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರು ಎರಡಲ್ಲ, 4 ಸಾವಿರ ಮಂದಿ!ಈ ಪ್ರಾರ್ಥನೆಯಲ್ಲಿ ಇಂಡೋನೇಷ್ಯಾ ಮತ್ತು ಮಲೇಶಿಯಾದ 62 ಮಂದಿ ಭಾಗಿಯಾಗಿದ್ದರು. ಈ 62 ಜನರು ಕರ್ನಾಟಕಕ್ಕೆ ಬಂದಿದ್ದು ಅವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ದೇಶ ಹಾಗೂ ವಿದೇಶಗಳಿಂದ ಸುಮಾರು 4 ಸಾವಿರ ಮಂದಿ ಭಾಗವಹಿದ್ದರು. ಇಲ್ಲಿ ಕೊರೋನಾ ತಗುಲಿರುವ ಪರಿಣಾಮ ನಿನ್ನೆ ದೆಹಲಿಯೊಂದರಲ್ಲೇ ತೆಲಂಗಾಣದ 6 ಮಂದಿ ಸೇರಿ 10 ಮಂದಿ ಸಾವನ್ನಪ್ಪಿದ್ದರು. ಕರ್ನಾಟಕದ ಶಿರಾದಲ್ಲಿ ಕೊರೋನಾ ಸೋಂಕು ಸಾವನ್ನಪ್ಪಿದ ವ್ಯಕ್ತಿಯೂ ಸಹ ದೆಹಲಿಯಲ್ಲಿ ನಡೆದ ಆ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಎಂದು ದೃಢಪಟ್ಟಿದೆ.

ಇನ್ನು, ಈ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ತಮಿಳುನಾಡಿನ 50 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.  19 ಜನರು ಕಿರ್ಗಿಸ್ತಾನ್, 20 ಜನರು ಇಂಡ್ಯೋನೇಷ್ಯಾ, 4 ಜನರು ದಕ್ಷಿಣ ಆಫ್ರಿಕಾ, 3 ಜನರು ಗ್ಯಾಂಬಿಯಾ ಹಾಗೂ ಅಮೇರಿಕ, ಯು.ಕೆ, ಪ್ರಾನ್ಸ್, ಕೀನ್ಯಾದ ತಲಾ ಒಬ್ಬರನ್ನು ಕ್ವಾರಂಟೈನ ಗೆ ಒಳಪಡಿಸಲಾಗಿದೆ. ಇದರಲ್ಲಿ ಕೆಲವರು ದೆಹಲಿಯ ನಿಜಾಮುದ್ದೀನ್​ನಲ್ಲಿ ನಡೆದ ಮರ್ಕಾಜ್ ಧಾರ್ಮಿಕ ಸಭೆಗೆ ಹಾಜರಾಗಿರುವ ಶಂಕೆ ವ್ಯಕ್ತವಾಗಿದೆ.
First published:April 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading