HOME » NEWS » Coronavirus-latest-news » KARNATAKA WITNESS MORE THAN 11000 CORONA POSITIVE CASE TODAY AMTV SESR

Karnataka Covid 19: ರಾಜ್ಯದಲ್ಲಿಂದು ಬರೋಬ್ಬರಿ 11,265 ಪಾಸಿಟಿವ್​ ಕೇಸ್​​; ಮಹಾರಾಷ್ಟ್ರದಂತೆ ಬೆಂಗಳೂರಲ್ಲೂ ನಿಷೇಧಾಜ್ಞೆ ಜಾರಿ..?

ರಾಜ್ಯದಲ್ಲಿ ಇಂದು ಒಂದೇ ದಿನ ಬರೋಬ್ಬರಿ 11, 265 ಜನ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಕೊರೋನಾ 2ನೇ ಅಲೆ ಶುರುವಾದ ಬಳಿಕ ಇಂದೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

news18-kannada
Updated:April 14, 2021, 8:12 PM IST
Karnataka Covid 19: ರಾಜ್ಯದಲ್ಲಿಂದು ಬರೋಬ್ಬರಿ 11,265 ಪಾಸಿಟಿವ್​ ಕೇಸ್​​; ಮಹಾರಾಷ್ಟ್ರದಂತೆ ಬೆಂಗಳೂರಲ್ಲೂ ನಿಷೇಧಾಜ್ಞೆ ಜಾರಿ..?
ಕೊರೋನಾ ವೈರಸ್ ತಪಾಸಣೆ.
  • Share this:
ಬೆಂಗಳೂರು (ಏ. 14): ಯುಗಾದಿಯ ಹೊಸತೊಡಕಾದ ಇಂದು ಹೆಮ್ಮಾರಿ ಕೊರೋನಾ ರಾಜ್ಯದಲ್ಲಿ ಹೊಸ ದಾಖಲೆ ಬರೆದಿದೆ. ರಾಜ್ಯದಲ್ಲಿ ಇಂದು ಒಂದೇ ದಿನ ಬರೋಬ್ಬರಿ 11, 265 ಜನ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಕೊರೋನಾ 2ನೇ ಅಲೆ ಶುರುವಾದ ಬಳಿಕ ಇಂದೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ರಾಜ್ಯಾದ್ಯಂತ ಸೋಂಕಿನಿಂದ 38 ಮಂದಿ ಸಾವನ್ನಪ್ಪಿದ್ದರೆ, 4,364 ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರು ನಗರದಲ್ಲಿ ಇಂದು ಕೊರೋನಾ ಸ್ಫೋಟಗೊಂಡಿದ್ದು, 8, 155 ಪಾಸಿಟಿವ್ ಕೇಸ್​ಗಳು ಪತ್ತೆಯಾಗಿವೆ. ನಿನ್ನೆಗಿಂತ ಇಂದು ಬೆಂಗಳೂರಿನ ಸಾವಿನ ಸಂಖ್ಯೆ ಕೊಂಚ ತಗ್ಗಿದ್ದು 23 ಮಂದಿ ಮೃತಪಟ್ಟಿದ್ದಾರೆ. ನೈಟ್ ಕರ್ಫ್ಯೂ ಆಚೆಗೂ ಬೆಂಗಳೂರು ನಗರದಲ್ಲಿ ಕೊರೋನಾ ಕಂಟ್ರೋಲ್​ಗೆ ಬರುತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ, ದಿನೇ ದಿನೇ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ಕಂಟ್ರೋಲ್ ಮಾಡೋದಕ್ಕೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ ಎಂದಿದ್ದಾರೆ

ಸೋಂಕಿನ ಹೆಚ್ಚಳ ಹಿನ್ನಲೆ ಬಿಬಿಎಂಪಿ ಕಡೆಯಿಂದ 10 ಕೋವಿಡ್ ಕೇರ್ ಸೆಂಟರ್​ಗಳನ್ನು ತೆರೆಯಲಿದ್ದೇವೆ. ಈಗಾಗಲೇ 800 ಬೆಡ್ ಗಳ ಎರಡು ಕೋವಿಡ್ ಕೇರ್ ಸೆಂಟರ್ ಕಾರ್ಯ ನಿರ್ವಹಿಸುತ್ತಿವೆ. ಹೊಸದಾಗಿ ತೆರೆಯಲಿರುವ 10 ಕೋವಿಡ್ ಕೇರ್ ಸೆಂಟರ್ ನಲ್ಲಿ 1,500 ಬೆಡ್ ಗಳ ವ್ಯವಸ್ಥೆ ಇರಲಿದೆ. ಇನ್ನೆರಡು ದಿನದಲ್ಲಿ ಕೇರ್ ಸೆಂಟರ್ ವ್ಯವಸ್ಥೆಯಾಗಲಿದೆ. ಹೋಟೆಲ್ ನಲ್ಲಿಯೂ ಕೇರ್ ಸೆಂಟರ್ ತೆರೆಯಲಿದ್ದೇವೆ ಎಂದು ತಿಳಿಸಿದ್ದಾರೆ.

ಮಾರುಕಟ್ಟೆಗಳಲ್ಲಿ ನಿಷೇಧಾಜ್ಞೆ ಹೇರಿಕೆಯ ಎಚ್ಚರಿಕೆ..!

ಬೆಡ್ ಗಳ ಕೊರತೆ ಎಲ್ಲೂ ಕಾಡದಂತೆ ಬಿಬಿಎಂಪಿ ಎಚ್ಚರವಹಿಸುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ 5 ಸಾವಿರ ಬೆಡ್​ಗಳಿಗೆ ಬೇಡಿಕೆ ಇಟ್ಟಿದೆ. ಈ ಪೈಕಿ 2,500 ಬೆಡ್ ಗಳು ಈಗಾಗಲೇ ಖಾಸಗಿ ಆಸ್ಪತ್ರೆಗಳು ಮೀಸಲಿಟ್ಟಿದೆ. ಇನ್ನು ಕೊರೋನಾ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ 14410 ಆಪ್ತಮಿತ್ರ ಹೆಲ್ಪ್ ಲೈನ್​ನ್ನು ಬಿಬಿಎಂಪಿ ತೆರದಿದೆ. ಇದರ ಜೊತೆಗೆ ಮಾರ್ಕೆಟ್​ಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು ಅಗತ್ಯವಿದ್ದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗುತ್ತೆ ಎಂದು ಕಮಿಷನರ್ ಎಚ್ಚರಿಸಿದ್ದಾರೆ. ಅಲ್ಲದೇ ದೊಡ್ಡ ದೊಡ್ಡ ಮಾರುಕಟ್ಟೆಗಳನ್ನು ವಿಕೇಂದ್ರಿಕರಿಸಲೂ ಚಿಂತನೆ ನಡೆಸಲಾಗುತ್ತಿದೆ.

ಇದನ್ನು ಓದಿ: ಬೆಂಗಳೂರಲ್ಲಿ ಹಬ್ಬದಂದೇ ಅತಿ ಹೆಚ್ಚು ಕೋವಿಡ್ ಸಾವು; ಅಂತ್ಯಕ್ರಿಯೆಗಾಗಿ ಚಿತಾಗಾರಗಳ ಮುಂದೆ ಸರತಿ ಸಾಲು!

ಚಿತಾಗಾರಗಳ ಎದುರು ಅಂತ್ಯಕ್ರಿಯೆಗಾಗಿ ಸರತಿ ಸಾಲು!

ನಿನ್ನೆ ಒಂದೇ ದಿನ ಬೆಂಗಳೂರಲ್ಲಿ ಸೋಂಕಿನಿಂದ 55 ಮಂದಿ ಮೃತಪಟ್ಟಿದ್ದರು ಹೀಗಾಗಿ ಇಂದು ಚಿತಾಗಾರಗಳ ಮುಂದೆ ಸೋಂಕಿತರ ಅಂತ್ಯಕ್ರಿಯೆಗೆ ಸರತಿ ಸಾಲಲ್ಲಿ ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ನಗರದ ಪ್ರಮುಖ ಚಿತಾಗಾರಗಳ ಎದುರು ಸೋಂಕಿತರ ಶವಗಳನ್ನು ಹೊತ್ತ ಆಂಬ್ಯುಲೆನ್ಸ್​​ಗಳು ಸರತಿ ಸಾಲಿನಲ್ಲಿ ನಿಂತಿರುವ ಮನಕಲಕುವ ದೃಶ್ಯ ಕಂಡು ಬಂದಿದೆ. ಯಲಹಂಕದ ಮೇಡಿ ಅಗ್ರಹಾರ, ಸುಮ್ಮನಹಳ್ಳಿ ಚಿತಾಗಾರದ ಎದುರು ಸರತಿಯಾಗಿ ಆಂಬ್ಯುಲೆನ್ಸ್ ವಾಹನಗಳು ನಿಂತಿವೆ. ಕೋವಿಡ್ ನಿಯಮಾವಳಿಯಂತೆ ಸೋಂಕಿತರ ಶವಗಳನ್ನು ಅಂತ್ಯಕ್ರಿಯೆ ಮಾಡಬೇಕಾದ ಕಾರಣ ಚಿತಾಗಾರಗಳಲ್ಲಿ ಮೃತರ ಕುಟುಂಬಸ್ಥರು ಅಂತ್ಯಕ್ರಿಯೆಗಾಗಿ ಗಂಟೆಗಟ್ಟಲೇ ಕಾಯುವಂತಾಗಿದೆ.ಚಿತಾಗಾರಗಳ ಎದುರು ಮೃತರ ಕುಟುಂಬಸ್ಥರ ಸಂಕಟ ಹೇಳತೀರದಾಗಿದೆ. ಸೋಂಕಿನಿಂದ ಮೃತಪಟ್ಟವರ ಶವದ ಬಳಿಯೇ ಇರುವಂತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಸ್ಥರು, ಸಂಬಂಧಿಕರು ಸೇರುವಂತಿಲ್ಲ. ಶವದ ಪಕ್ಕದಲ್ಲಿ ಕೂತ ಅತ್ತು ನೋವು ಹೊರ ಹಾಕವಂತೆಯೂ ಇಲ್ಲ. ಅಂತ್ಯಕ್ರಿಯೆಗಾಗಿ ದೂರದಲ್ಲೇ ಗಂಟೆಗಟ್ಟಲೇ ಕಾಯುವುದು ಕುಟುಂಬಸ್ಥರನ್ನು ಮಾನಸಿಕವಾಗಿ ಜರ್ಜರಿತಗೊಳಿಸುತ್ತಿದೆ.

(ವರದಿ: ಕಾವ್ಯಾ. ವಿ)
Published by: Seema R
First published: April 14, 2021, 8:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories