Karnataka Coronavirus: ಕರ್ನಾಟಕದಲ್ಲಿ ಇಂದು ಬರೋಬ್ಬರಿ 248 ಕೊರೋನಾ ಕೇಸ್ ಪತ್ತೆ; ಚಿಕ್ಕಬಳ್ಳಾಪುರದ ರೋಗಿ ಸಾವು

Karnataka Corona Death: ಇಂದು ಚಿಕ್ಕಬಳ್ಳಾಪುರದ 50 ವರ್ಷದ ಮಹಿಳೆ ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.

news18-kannada
Updated:May 29, 2020, 6:14 PM IST
Karnataka Coronavirus: ಕರ್ನಾಟಕದಲ್ಲಿ ಇಂದು ಬರೋಬ್ಬರಿ 248 ಕೊರೋನಾ ಕೇಸ್ ಪತ್ತೆ; ಚಿಕ್ಕಬಳ್ಳಾಪುರದ ರೋಗಿ ಸಾವು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮೇ 29): ರಾಜ್ಯದಲ್ಲಿ ಕೊರೋನಾ ಅಬ್ಬರ ಮುಂದುವರೆದಿದೆ. ಇಂದು ಒಂದೇ ದಿನ ಕರ್ನಾಟಕದಲ್ಲಿ 248 ಕೊರೋನಾ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,781ಕ್ಕೆ ಏರಿಕೆಯಾಗಿದೆ. ಇಂದು ಓರ್ವ ರೋಗಿ ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಇಂದು 60 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಚಿಕ್ಕಬಳ್ಳಾಪುರದ 50 ವರ್ಷದ ಮಹಿಳೆ ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೇ 24ರಂದು ಆಸ್ಪತ್ರೆಗೆ ದಾಖಲಾಗಿದ್ದ ಈ ಮಹಿಳೆಯನ್ನು ಮೇ 28ರಂದು ನ್ಯುಮೋನಿಯ ಮತ್ತು ಕಿಡ್ನಿ ಸಮಸ್ಯೆಯಿಂದ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ವೈದ್ಯಕೀಯ ಪರೀಕ್ಷೆ ವೇಳೆ ಈಕೆಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿತ್ತು. ಇವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 15 ಕೊರೋನಾ ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Bangalore Rains: ಗುಡುಗು, ಬಿರುಗಾಳಿಸಹಿತ ಭಾರೀ ಮಳೆಗೆ ಬೆಚ್ಚಿದ ಬೆಂಗಳೂರು

ಇಂದು ಚಿಕ್ಕಬಳ್ಳಾಪುರ 5, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು 12, ಮೈಸೂರು 2, ಚಿತ್ರದುರ್ಗ 1, ಶಿವಮೊಗ್ಗ 1, ರಾಯಚೂರು 62, ಯಾದಗಿರಿ 60, ಮಂಡ್ಯ 2, ಕಲಬುರಗಿ 61, ಉಡುಪಿ 15, ಧಾರವಾಡ 1, ದಾವಣಗೆರೆ 4, ಹಾಸನ 4, ವಿಜಯಪುರ 4, ಬಳ್ಳಾರಿ 9, ತುಮಕೂರು 2, ಚಿಕ್ಕಮಗಳೂರು 2 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.
First published: May 29, 2020, 6:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading