ಜೂನ್ 1ರಿಂದ ದೇವಸ್ಥಾನಗಳು ಓಪನ್; ಲಾಕ್​ಡೌನ್​ನಿಂದ ಕೊನೆಗೂ ದೇವರಿಗೆ ಮುಕ್ತಿ

ಭಕ್ತರು ತರುವ ಹೂವು, ಹಣ್ಣು ಕಾಯಿಗಳನ್ನು ಒಂದು ಕಡೆ ಇರಿಸಲು ವ್ಯವಸ್ಥೆ ಮಾಡಲಾಗುತ್ತದೆ. ನಂತರ ಅವುಗಳಿಗೆ ರಾಸಾಯನಿಕ ಸಿಂಪಡಣೆ ಮಾಡಿ ಬಳಸಲು ಯೋಚನೆ ಮಾಡಲಾಗಿದೆ.

news18-kannada
Updated:May 29, 2020, 7:27 PM IST
ಜೂನ್ 1ರಿಂದ ದೇವಸ್ಥಾನಗಳು ಓಪನ್; ಲಾಕ್​ಡೌನ್​ನಿಂದ ಕೊನೆಗೂ ದೇವರಿಗೆ ಮುಕ್ತಿ
ಕೊಲ್ಲೂರು ಮೂಕಾಂಬಿಕಾ ದೇವಾಲಯ
  • Share this:
ಬೆಂಗಳೂರು (ಮೇ 29): ಮುಜರಾಯಿ ಇಲಾಖೆ ದೇವಸ್ಥಾನಗಳನ್ನು ಜೂನ್ 1 ರಿಂದ ತೆರೆಯಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ದೇವಾಲಯಗಳ ಆಡಳಿತ ಮಂಡಳಿ ಶುಚಿತ್ವದ ಕೆಲಸದ ಜೊತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಲು ಸಜ್ಜಾಗಿವೆ. ಭಕ್ತಾದಿಗಳಿಗೆ ಟೆಂಪರೇಚರ್ ಪರೀಕ್ಷಿಸಲು, ಸ್ಯಾನಿಟೈಸರ್ ನೀಡಲು, ಕೈ ತೊಳೆಯುವ ಮತ್ತು ಮಾಸ್ಕ್ ಧರಿಸುವುದನ್ನು ಚೆಕ್ ಮಾಡಲು ಸಿಬ್ಬಂದಿ ನಿಯೋಜನೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಇನ್ನು ಭಕ್ತಾದಿಗಳು ದೇವರ ದರ್ಶನ ಮಾತ್ರ ಮಾಡಲು ಅವಕಾಶ ನೀಡಲಾಗುತ್ತದೆ. ಅಭಿಷೇಕ-ಅರ್ಚನೆಗಳನ್ನು ಸದ್ಯದ ಮಟ್ಟಿಗೆ ನಡೆಸುವುದಿಲ್ಲ. ಯಾಕೆಂದರೆ ಪ್ರತಿಯೊಬ್ಬರೂ ವಿಶೇಷ ಪೂಜೆ ಮಾಡಿಸೋಕೆ ಆರಂಭಿಸಿದರೆ ಹೆಚ್ಚು ಸಮಯ ಭಕ್ತರು ದೇವಸ್ಥಾನದಲ್ಲಿ ಉಳಿಯಬೇಕಾಗುತ್ತದೆ. ಇದು ಸೋಂಕು ಹರಡಲು ಅಪಾಯಕಾರಿ ವಾತಾವರಣ ನಿರ್ಮಿಸಿದಂತಾಗುತ್ತದೆ. ಅದನ್ನು ತಪ್ಪಿಸಲು ಒಟ್ಟಿಗೆ ಪೂಜೆ, ಅಲಂಕಾರ ಅಭಿಷೇಕ, ಆರತಿ ನಡೆಸಲು ನಿರ್ಧರಿಸಲಾಗಿದೆ. ಇದಲ್ಲದೇ ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಪಂಚಾಮೃತ, ಪ್ರಸಾದ ವಿನಿಯೋಗವಿರುವುದಿಲ್ಲ.‌

ಇದನ್ನೂ ಓದಿ: Bangalore Rains: ಗುಡುಗು, ಬಿರುಗಾಳಿಸಹಿತ ಭಾರೀ ಮಳೆಗೆ ಬೆಚ್ಚಿದ ಬೆಂಗಳೂರು

ದೇವರ ಅಭಿಷೇಕ ಮಾಡಿದ ಸುಗಂಧಮಿಶ್ರಿತ ನೀರು ಮಾತ್ರ ತೀರ್ಥವಾಗಿ ಹಂಚಲು ನಿರ್ಧಾರ ಮಾಡಲಾಗಿದೆ. ಭಕ್ತರು ತರುವ ಹೂವು, ಹಣ್ಣು ಕಾಯಿಗಳನ್ನು ಒಂದು ಕಡೆ ಇರಿಸಲು ವ್ಯವಸ್ಥೆ ಮಾಡಲಾಗುತ್ತದೆ. ನಂತರ ಅವುಗಳಿಗೆ ರಾಸಾಯನಿಕ ಸಿಂಪಡಣೆ ಮಾಡಿ ಬಳಸಲು ಯೋಚನೆ ಮಾಡಲಾಗಿದೆ. ಇನ್ನು ಸ್ಯಾನಿಟೈಸರ್ ಮತ್ತು ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು ದೇವಸ್ಥಾನದಲ್ಲೂ ಮುಂದುವರಿಸಲಾಗುತ್ತದೆ. ಭಕ್ತರು ಬೆಳಗ್ಗೆ ಪೂಜೆಗೆ ನೀಡಿದ ಹಣ್ಣು ಕಾಯಿಗಳನ್ನು ಸಂಜೆಯ ವೇಳೆಗೆ ಬಳಸಲು ಕೂಡಾ ಆಲೋಚಿಸಲಾಗುತ್ತಿದೆ. ಇಲಾಖೆಯಿಂದ ಈ ಬಗ್ಗೆ ನಿರ್ದಿಷ್ಟ ನಿಯಮಗಳ ಸುತ್ತೋಲೆ ಬಂದ ನಂತರ ಅದರಲ್ಲಿರುವ ಬೇರೆ ನಿಯಮಗಳನ್ನೂ ಪಾಲಿಸಲು ದೇವಸ್ಥಾನ ಆಡಳಿತ ಮಂಡಳಿಗಳು ಸಜ್ಜಾಗಿವೆ.


First published: May 29, 2020, 7:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading