Vaccine Campaign| ಮೆಗಾ ಲಸಿಕೆ ಅಭಿಯಾನದ ಮೂಲಕ ದಾಖಲೆ ಬರೆದ ಕರ್ನಾಟಕ; ಈವರೆಗೆ 5 ಕೋಟಿ ಡೋಸ್ ಹಂಚಿಕೆ!

ಲಸಿಕಾ ಅಭಿಯಾನಕ್ಕೆ ರಾಜ್ಯಾದ್ಯಂತ 12,700 ಸರ್ಕಾರಿ ಲಸಿಕಾ ಕೇಂದ್ರ, 300 ಖಾಸಗಿ ಕೇಂದ್ರಗಳು ಹಾಗೂ 14,666 ವಿಶೇಷ ಕ್ಯಾಂಪ್ ಗಳನ್ನು ಸಿದ್ದಪಡಿಸಿದ್ದು, ಈ ಎಲ್ಲಾ ಕೇಂದ್ರಗಳಿಗೆ 34 ಲಕ್ಷ ಡೋಸ್​ ಗಳನ್ನು ಹಂಚಿಕೆ ಮಾಡಲಾಗಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 5 ಕೋಟಿ‌ ಡೋಸ್ ಹಂಚಿಕೆಯಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಬೆಂಗಳೂರು: ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಮೆಗಾ ಲಸಿಕಾ ಅಭಿಯಾನದಲ್ಲಿ (Mega Vaccine Campaign) ಕರ್ನಾಟಕ ಮಹತ್ವದ ಮೈಲಿಗಲ್ಲು ಮುಟ್ಟಿದೆ. ರಾಜ್ಯದಲ್ಲಿ 5 ಕೋಟಿಗೂ ಅಧಿಕ ಡೋಸ್ ಲಸಿಕೆ (First Dose) ಹಂಚಿಕೆಯಾಗಿದೆ. 3,64,07,149 ಮಂದಿ ಮೊದಲ ಡೋಸ್ ಪಡೆದಿದ್ದರೆ, ‘ 1,36,21,258 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಈ ಮೂಲಕ ಮಹಾ ಲಸಿಕಾ ಅಭಿಯಾನ ಅರ್ಧ ಯಶಸ್ಸು ಪಡೆದುಕೊಂಡಿದೆ.

  ಇಂದು ಒಂದೇ ದಿನ 15 ಲಕ್ಷ ಡೋಸ್ ಹಂಚಿಕೆ ಮಾಡುವ ಮೂಲಕ ರಾಜ್ಯ ಸರ್ಕಾರ ದಾಖಲೆ ಬರೆದಿದೆ. 31,75,000 ಡೋಸ್ ಹಂಚಿಕೆಯ ಟಾರ್ಗೆಟ್ ಇಟ್ಟುಕೊಳ್ಳಲಾಗಿದೆ. ಈ ಪೈಕಿ 15,47,305 ಡೋಸ್ ಲಸಿಕೆ ಈವರೆಗೆ ಹಂಚಿಕೆಯಾಗಿದೆ. ಈ ಮೂಲಕ ಒಟ್ಟಾರೆ 5 ಕೋಟಿ ಡೋಸ್ ಲಸಿಕೆ ಹಂಚಿಕೆಯಾಗಿದೆ.

  ಈವರೆಗಿನ ಜಿಲ್ಲಾವಾರು ಲಸಿಕೆ ಹಂಚಿಕೆ‌ ವಿವರ

  • ಶಿವಮೊಗ್ಗ - 68,070

  • ರಾಮನಗರ - 33,110

  • ತುಮಕೂರು - 77,373

  • ಹಾಸನ - 44,216

  • ಮಂಡ್ಯ - 62,594

  • ಚಿಕ್ಕಮಗಳೂರು - 29,440

  • ದಕ್ಷಿಣ ಕನ್ನಡ - 73,432

  • ಧಾರವಾಡ - 41,362

  • ದಾವಣಗೆರೆ - 38,819

  • ಹಾವೇರಿ - 33,857

  • ಕೊಡಗು - 8,732

  • ಬೀದರ್ - 29,997

  • ಚಿಕ್ಕಬಳ್ಳಾಪುರ - 29,992

  • ಬಳ್ಳಾರಿ - 63,283

  • ಕಲಬುರ್ಗಿ - 25,199

  • ಗದಗ - 11,617

  • ಕೊಪ್ಪಳ - 14,457

  • ರಾಯಚೂರು - 23,080

  • ಉತ್ತರ ಕನ್ನಡ - 25,337

  • ಉಡುಪಿ - 23,948

  • ಕೋಲಾರ - 23,587

  • ಚಾಮರಾಜನಗರ - 16,502

  • ಬೆಳಗಾವಿ - 1,01,324

  • ವಿಜಯಪುರ - 35,573

  • ಚಿತ್ರದುರ್ಗ - 25,488

  • ಮೈಸೂರು - 48,141

  • ಯಾದಗಿರಿ - 17,440

  • ಬಾಗಲಕೋಟೆ - 30,196

  • ಬೆಂಗಳೂರು ‌ನಗರ - 1,96,980

  • ಬೆಂಗಳೂರು ಗ್ರಾ. - 26,515

  • ಒಟ್ಟು : 13,09,935 - 41%


  ಇದನ್ನು ಓದಿ: HD Devegowda: ನಾವು ಕೂಡ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡ್ತೀವಿ; ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ

  ಕೊರೋನಾ ಎರಡನೇಯ (Corona 2nd Wave) ಅಲೆಗೆ ಈಗಾಗಲೇ ತತ್ತರಿಸಿದ್ದ ದೇಶ ಮತ್ತು ರಾಜ್ಯ ಈಗ ಮೆಲ್ಲನೆ ಸುಧಾರಿಸಿಕೊಳ್ಳುತ್ತಿದೆ. ಆದರೆ, ಮೂರನೇ ಅಲೆ (Corona 3rd Wave) ಆರಂಭ ವಾಗಲಿದೆ ಎಂಬ ಎಚ್ಚರಿಕೆ ಸರ್ಕಾರಗಳಿಗೆ ತಲೆನೋವಾಗಿ ಪರಿಣಮಿಸಿದೆ. ಆದರೆ, ಎಲ್ಲರಿಗೂ ಲಸಿಕೆ ನೀಡುವುದೊಂದೆ ಈ ಸೋಂಕನ್ನು ನಿವಾರಿಸಲು ಇರುವ ಏಕೈಕ ದಾರಿ. ಇದೇ ಕಾರಣಕ್ಕೆ ಕಳೆದ ಮೇ ತಿಂಗಳಿನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲರಿಗೂ ಉಚಿತ ಲಸಿಕೆ ನೀಡಲು ಮುಂದಾಗಿದೆ. ಆದರೂ, ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಇಂದು ಬೃಹತ್ ಲಸಿಕಾ ಅಭಿಯಾನವನ್ನು (Vaccine Campaign) ಕೈಗೊಂಡಿದೆ. ಈ ಅಭಿಯಾನಕ್ಕೆ 27,666 ಲಸಿಕಾ ಕೇಂದ್ರಗಳನ್ನು ಸಿದ್ದಪಡಿಸಿದ್ದು, ಮಹಾ ಲಸಿಕಾ ಅಭಿಯಾನಕ್ಕೆ‌ 34 ಲಕ್ಷ ಡೋಸ್ ಮೀಸಲು ಇರಿಸಲಾಗಿದೆ.

  ಲಸಿಕಾ ಅಭಿಯಾನಕ್ಕೆ ರಾಜ್ಯಾದ್ಯಂತ 12,700 ಸರ್ಕಾರಿ ಲಸಿಕಾ ಕೇಂದ್ರ, 300 ಖಾಸಗಿ ಕೇಂದ್ರಗಳು ಹಾಗೂ 14,666 ವಿಶೇಷ ಕ್ಯಾಂಪ್ ಗಳನ್ನು ಸಿದ್ದಪಡಿಸಿದ್ದು, ಈ ಎಲ್ಲಾ ಕೇಂದ್ರಗಳಿಗೆ 34 ಲಕ್ಷ ಡೋಸ್​ ಗಳನ್ನು ಹಂಚಿಕೆ ಮಾಡಲಾಗಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 5 ಕೋಟಿ‌ ಡೋಸ್ ಹಂಚಿಕೆಯಾಗಿದೆ. ರಾಜ್ಯದಲ್ಲಿ ಶೇ.73 ರಷ್ಟು ಮೊದಲ ಡೋಸ್ ಹಾಗೂ ಶೇ.27 ರಷ್ಟು ಎರಡನೇ ಡೋಸ್ ನೀಡಲಾಗಿದೆ. ಹೀಗಾಗಿ ಶೇ.100 ರಷ್ಟು ಲಸಿಕೆ ಗುರಿಯನ್ನು ಯಶಸ್ವಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಲಸಿಕೆ ಅಭಿಯಾನವನ್ನು ಆರಂಭಿಸಲಾಗಿದೆ.

  ಇಂದಿನ ಬೃಹತ್ ಲಸಿಕೆ ಅಭಿಯಾನದಲ್ಲಿ ಬೆಂಗಳೂರಿಗೆ 5 ಲಕ್ಷ ಲಸಿಕೆ ಹಂಚುವ ಗುರಿಯನ್ನು ಬಿಬಿಎಂಪಿ ಹೊಂದಿದೆ. ಒಂದು ವಾರ್ಡ್ ನಲ್ಲಿ 10 ಲಸಿಕೆ ಕೇಂದ್ರ ಓಪನ್ ಮಾಡಲಾಗಿದ್ದು, ನಗರದ ಖಾಸಗಿ ಆಸ್ಪತ್ರೆ ಕೂಡ ದೊಡ್ಡ ಮಟ್ಟದಲ್ಲಿ ಲಸಿಕೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ನಗರದಾದ್ಯಂತ ಖಾಸಗಿ ಆಸ್ಪತ್ರೆ ಯಲ್ಲಿ ಬಿಬಿಎಂಪಿ ಬ್ಯಾನರ್ ನಲ್ಲಿ ಲಸಿಕೆ ಅಭಿಯಾನ ನಡೆಯಲಿದ್ದು, ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ - 12 ಗಂಟೆಗಳ ಕಾಲ ಲಸಿಕೆ ನೀಡಲಾಗು ವುದು. 
   ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: