‘ಕಲಬುರಗಿಯ ವೃದ್ಧ ಕೊರೋನಾ ಸೋಂಕಿನಿಂದಲೇ ಮೃತಪಟ್ಟ‘: ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ

ದುಬೈನಿಂದ ಆಗಮಿಸಿದ್ದ ಈ ವೃದ್ಧ ಶಂಕಿತ ಕೊರೋನಾ ವೈರಸ್‌ನಿಂದಲೇ ಸಾವನ್ನಪ್ಪಿದ್ದರು ಎನ್ನಲಾಗಿತ್ತು. ಹಾಗಾಗಿಯೇ ಸೂಕ್ತ ನಿಗಾವಹಿಸುವಂತೆ ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆಗೆ ರಾಜ್ಯ ಸರ್ಕಾರ ಸುತ್ತೊಲೆ ಹೊರಡಿಸಿತ್ತು. ಆದರೆ ಇನ್ನೂ ಲ್ಯಾಬ್ ರಿಪೋರ್ಟ್ ಬರಬೇಕಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಸುತ್ತೊಲೆಯಲ್ಲಿ ತಿಳಿಸಿದ್ದರು.

ರಾಜ್ಯದಲ್ಲಿ ಒಟ್ಟು 18 ಕೊರೋನಾ ಶಂಕಿತರನ್ನು ಐಸೋಲೇಟೆಡ್ ವಾರ್ಡ್ಗಳಲ್ಲಿ ಇರಿಸಲಾಗಿದೆ. ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 10 ಜನ, ಇತರೆ ಆಸ್ಪತ್ರೆಯಲ್ಲಿ ಇಬ್ಬರನ್ನು, ಹಾಸನದಲ್ಲಿ ಇಬ್ಬರು, ದಕ್ಷಿಣ ಕನ್ನಡದಲ್ಲಿ ಮೂವರು ಹಾಗೂ ಬಳ್ಳಾರಿಯಲ್ಲಿ ಒಬ್ಬ ಕೊರೋನಾ ಶಂಕಿತರನ್ನು ಐಸೋಲೇಟೆಡ್ ವಾರ್ಡ್ಗಳಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಒಟ್ಟು 18 ಕೊರೋನಾ ಶಂಕಿತರನ್ನು ಐಸೋಲೇಟೆಡ್ ವಾರ್ಡ್ಗಳಲ್ಲಿ ಇರಿಸಲಾಗಿದೆ. ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 10 ಜನ, ಇತರೆ ಆಸ್ಪತ್ರೆಯಲ್ಲಿ ಇಬ್ಬರನ್ನು, ಹಾಸನದಲ್ಲಿ ಇಬ್ಬರು, ದಕ್ಷಿಣ ಕನ್ನಡದಲ್ಲಿ ಮೂವರು ಹಾಗೂ ಬಳ್ಳಾರಿಯಲ್ಲಿ ಒಬ್ಬ ಕೊರೋನಾ ಶಂಕಿತರನ್ನು ಐಸೋಲೇಟೆಡ್ ವಾರ್ಡ್ಗಳಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

 • Share this:
  ಬೆಂಗಳೂರು(ಮಾ.12): ಕಲಬುರಗಿಯಲ್ಲಿ ಸಾವನ್ನಪ್ಪಿದ್ದ 76 ವರ್ಷದ ವೃದ್ಧನಲ್ಲಿ ಕೊರೋನಾ ವೈರಸ್‌ ಇದ್ದದ್ದು ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ. ಭಾರತದಲ್ಲೇ ಕೊರೋನಾಗೆ ಬಲಿಯಾದ ಮೊದಲ ಪ್ರಕರಣ ಇದಾಗಿದೆ. ಆದರೆ, ಇನ್ನೂ ಕೇಂದ್ರ ಸರ್ಕಾರ ಭಾರತದಲ್ಲೇ ಇದೇ ಮೊದಲ ಪ್ರಕರಣವಾ? ಎಂಬ​ ಬಗ್ಗೆ ಯಾವುದೇ ಖಚಿತವಾದ ಮಾಹಿತಿ ನೀಡಿಲ್ಲ.

  ದುಬೈನಿಂದ ಆಗಮಿಸಿದ್ದ ಈ ವೃದ್ಧ ಶಂಕಿತ ಕೊರೋನಾ ವೈರಸ್‌ನಿಂದಲೇ ಸಾವನ್ನಪ್ಪಿದ್ದರು ಎನ್ನಲಾಗಿತ್ತು. ಹಾಗಾಗಿಯೇ ಸೂಕ್ತ ನಿಗಾವಹಿಸುವಂತೆ ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆಗೆ ರಾಜ್ಯ ಸರ್ಕಾರ ಸುತ್ತೊಲೆ ಹೊರಡಿಸಿತ್ತು. ಆದರೆ ಇನ್ನೂ ಲ್ಯಾಬ್ ರಿಪೋರ್ಟ್ ಬರಬೇಕಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಸುತ್ತೊಲೆಯಲ್ಲಿ ತಿಳಿಸಿದ್ದರು. ಅದರಂತೆಯೇ ಈಗ ಲ್ಯಾಬ್​ ರಿಪೋರ್ಟ್​ ಲಭ್ಯವಾಗಿದ್ದು, ಇವರು ಕೊರೋನಾ ಸೋಂಕಿಗೆ ಬಲಿಯಾದರು ಎಂದು ಅಧಿಕೃತವಾಗಿ ಮಾಹಿತಿ ನೀಡಲಾಗಿದೆ.

  ಇನ್ನು, ತೀರ್ಥಯಾತ್ರೆಗೆಂದು ಹೋಗಿದ್ದ ಮಹಮ್ಮದ್ ಹುಸೇನ್ ಸಿದ್ದಿಕಿ (76) ಹೈದರಾಬಾದ್ ಮೂಲಕ ಫೆಬ್ರವರಿ 29 ರಂದು ಕಲಬುರ್ಗಿಗೆ ವಾಪಸ್ಸಾಗಿದ್ದ. ಹೈದರಾಬಾದ್ ಏರ್ಪೋರ್ಟ್​ನಲ್ಲಿ ಈತನಿಗೆ ಸ್ಕ್ರೀನಿಂಗ್ ಮಾಡಿಯೇ ಹೊರಗೆ ಬಿಡಲಾಗಿತ್ತು. ಬಂದ ನಂತರ ಆರೋಗ್ಯದಿಂದಲೇ ಇದ್ದ ಮಹ್ಮದ್ ಹುಸೇನ್ ಗೆ ಮಾರ್ಚ್ 6 ರಂದು ಶೀತ, ಕೆಮ್ಮು, ಜ್ವರ ಕಾಣಿಸಿಕೊಂಡಿದೆ. ತಮ್ಮ ಕುಟುಂಬದ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದ. ಅದೆ ಜ್ವರ ಜಾಸ್ತಿಯಾದ ನಂತರ ಮಾರ್ಚ್ 09 ರಂದು ಕಲಬುರ್ಗಿಯ ಸನ್ ರೈಸ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದ.

  ಈ ವೇಳೆ ಆತನ ಥ್ರೋಟ್ ಸ್ಯಾಂಪಲ್ ತೆಗೆದುಕೊಂಡು ಬೆಂಗಳೂರಿಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಇಷ್ಟರೊಳಗಾಗಿಯೇ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬದ ಸದಸ್ಯರು ಆತನನ್ನು ಹೈದರಾಬಾದ್ ಗೆ ಕರೆದೊಯ್ದು ಕೇರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲಿಯೂ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಆತನನ್ನು ಕಲಬುರ್ಗಿಗೆ ವಾಪಸ್ ಕರೆತರೋ ವೇಳೆ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ.

  ಇನ್ನು ಕೊರೋನಾ ವೈರಸ್​ನಿಂದಲೇ ವೃದ್ಧ ಸಾವನ್ನಪ್ಪಿದ್ಧಾನೆ ಎಂದು ತಿಳಿದ ಕೂಡಲೇ ಕಲಬುರ್ಗಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ  ಮೃತ ಸಿದ್ದಕಿ ಕುಟುಂಬದ ಸದಸ್ಯರು ಮತ್ತು ಆತನ ಜತೆ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಕುಟುಂಬದ 9 ಜನ, ಚಿಕಿತ್ಸೆ ನೀಡಿದ ಮುವ್ವರು ಆಸ್ಪತ್ರೆ ಸಿಬ್ಬಂದಿ ಮತ್ತು ಆತನ ಸಂಪರ್ಕದಲ್ಲಿದ್ದ 30 ಜನ ಸೇರಿದಂತೆ ಒಟ್ಟು 43 ಜನರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.

  ಇನ್ನು, ಈ ಸಂಬಂಧ ಟ್ವೀಟ್​ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ಕಲಬುರ್ಗಿಯಲ್ಲಿ ಮೊನ್ನೆ ಮೃತಪಟ್ಟ 76 ವರ್ಷದ #COVID19 ಶಂಕಿತರಿಗೆ ಸೋಂಕು ತಗಲಿದ್ದು ಖಚಿತವಾಗಿದೆ. ಇವರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಗುರುತಿಸಿ ಪ್ರತ್ಯೇಕವಾಗಿರಿಸಿ ನಿಗಾವಹಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.


  First published: