HOME » NEWS » Coronavirus-latest-news » KARNATAKA STATE GOVERNMENT START WAR ROOM FOR CONTROLLED CORONAVIRUS RH

ಕೊರೋನಾ ನಿಯಂತ್ರಣಕ್ಕೆ ವಾರ್​ ರೂಮ್ ನಿರ್ಮಾಣ; ಹಬ್ಬಕ್ಕೆ ಊರಿಗೆ ಹೋಗುವವರಿಗೆ ಇಂದು ರಾತ್ರಿ ತೆರಳಲು ಅವಕಾಶ

ಸಚಿವ ಶ್ರೀರಾಮುಲು ಇಡೀ ರಾಜ್ಯ ಪ್ರವಾಸ ಮಾಡ್ತಾರೆ. ಆದರೆ ಅವರು ಇಲ್ಲಿ ಇರದೇ ಇದ್ದಾಗ ಸುಧಾಕರ್ ಇರ್ತಾರೆ. ಹೀಗಾಗಿ ಇಬ್ರು ನೋಡಿಕೊಳ್ಳಲಿ ಎಂದು ಖಾತೆಯನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ ಎಂದು ಸಮರ್ಥನೆ ನೀಡಿದರು.

news18-kannada
Updated:March 24, 2020, 6:39 PM IST
ಕೊರೋನಾ ನಿಯಂತ್ರಣಕ್ಕೆ ವಾರ್​ ರೂಮ್ ನಿರ್ಮಾಣ; ಹಬ್ಬಕ್ಕೆ ಊರಿಗೆ ಹೋಗುವವರಿಗೆ ಇಂದು ರಾತ್ರಿ ತೆರಳಲು ಅವಕಾಶ
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ದೇಶದಲ್ಲಿ ಮೊದಲ‌ ಬಾರಿಗೆ‌ ರಾಜ್ಯದಲ್ಲಿ ವಾರ್ ರೂಮ್ ತೆರೆಯಲಾಗಿದೆ. ಕೊರೋನಾ ಸೋಂಕಿತರ ಮಾಹಿತಿಗಾಗಿ ಇದನ್ನು ಮಾಡಲಾಗಿದೆ. ಸೋಂಕಿತನಿಗೆ ಚಿಕಿತ್ಸೆ ಕುರಿತು ಈ ವಾರ್ ರೂಮ್ ಮೂಲಕ ಸಲಹೆ ಕೊಡಬಹುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ವಾರ್​ ರೂಮ್ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಮಂಗಳೂರು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ 127629 ಮಂದಿ ತಪಾಸಣೆ ಮಾಡಲಾಗಿದೆ. 12029 ಪ್ರಯಾಣಿಕರು ಕ್ವಾರಂಟೇನ್ ನಲ್ಲಿ ಇದ್ದಾರೆ. ಅವರನ್ನು 173 ಪ್ರತ್ಯೇಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇಲ್ಲಿಯವರೆಗೆ 38 ಪಾಸಿಟಿವ್ ಪ್ರಕರಣ ದೃಢಪಟ್ಟಿವೆ ಎಂದು ಮಾಹಿತಿ ನೀಡಿದರು.

ನಾಳೆ ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸಬೇಕು. ಹೊರಗೆ ಬಾರದೆ ಎಚ್ಚರಿಕೆ ವಹಿಸಬೇಕು‌ ಎಂದು ಹೇಳಿದ ಸಿಎಂ ಬಿಎಸ್​ವೈ ಯುಗಾದಿ ಹಬ್ಬಕ್ಕೆ ಊರಿಗೆ ಹೋಗಲು ಇಂದು ರಾತ್ರಿ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು. ಊರಿಗೆ ಹೋಗುವವರು, ಅಥವಾ ಬೆಂಗಳೂರಿಗೆ ಬರುವವರು ಇಂದು ರಾತ್ರಿ ತೆರಳಬಹುದು ಅಥವಾ ಬರಬಹುದು. ಈ ರಾತ್ರಿ ಅದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ನಾಳೆಯಿಂದ ಎಲ್ಲಿ ಇರ್ತೀರೋ ಎಲ್ಲರೂ ಅಲ್ಲೇ ಇರಬೇಕು. ನಾಳೆಯಿಂದ ಕಠಿಣ ನಿರ್ಬಂಧ ಜಾರಿ ಯಾಗುತ್ತದೆ. ಜನರು ಅದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ನಾಳೆ ನೀವು ಹೊರಗೆ ಹೋದ್ರೆ ಬಿಡಲ್ಲ. ಹೊರಗಡೆಯಿಂದ ಬೆಂಗಳೂರಿಗೆ ಬಂದ್ರು ಬಿಡಲ್ಲ. ಹೀಗಾಗಿ ಹೋಗೋರು ಬರೋರಿಗೆ ಇವತ್ತು ರಾತ್ರಿವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದ ಸಿಎಂ ತಿಳಿಸಿದರು.

ಇದನ್ನು ಓದಿ: ಕರ್ನಾಟಕದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್​​ ಪ್ರಕರಣ; ಸೋಂಕಿತರ ಸಂಖ್ಯೆ 39ಕ್ಕೇರಿಕೆ

ಖಾತೆ ಗೊಂದಲ‌ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಅವರು, ನಾವೆಲ್ಲರೂ ಒಟ್ಟಾಗಿ ಇದ್ದೇವೆ. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಏನೇ ಆದರೂ ಇಬ್ಬರೂ ಕುಳಿತು ತೀರ್ಮಾನ ಮಾಡಬೇಕು. ಅದಕ್ಕಾಗಿ ಇಬ್ಬರಿಗೂ ಖಾತೆ ಜವಾಬ್ದಾರಿ ಕೊಡಲಾಗಿದೆ. ಸಚಿವ ಶ್ರೀರಾಮುಲು ಇಡೀ ರಾಜ್ಯ ಪ್ರವಾಸ ಮಾಡ್ತಾರೆ. ಆದರೆ ಅವರು ಇಲ್ಲಿ ಇರದೇ ಇದ್ದಾಗ ಸುಧಾಕರ್ ಇರ್ತಾರೆ. ಹೀಗಾಗಿ ಇಬ್ರು ನೋಡಿಕೊಳ್ಳಲಿ ಎಂದು ಖಾತೆಯನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ ಎಂದು ಸಮರ್ಥನೆ ನೀಡಿದರು.

 
First published: March 24, 2020, 6:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading