ಕರ್ನಾಟಕ ರಾಜ್ಯದಲ್ಲಿ ಸಂಡೇ ಲಾಕ್​​ಡೌನ್​​ ಮುಕ್ತಾಯ: ಮತ್ತೆ ಸಹಜ ಸ್ಥಿತಿಯತ್ತ ಜನ ಜೀವನ

Karnataka Sunday Lockdown: ಇದರ ಜತೆಗೆ ಲಾಕ್​ಡೌನ್​​ ಸಡಿಲಗೊಳಿಸಿ ಕೆಲವು ಕ್ಷೇತ್ರಗಳಿಗೆ ಸರ್ಕಾರದಿಂದ ನೀಡಲಾದ ವಿನಾಯಿತಿಗಳು ಎಂದಿನಂತೆಯೇ ಮುಂದುವರೆಯಲಿದೆ. ಪ್ರತಿದಿನ ಸಂಜೆ 7 ರಿಂದ ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ಕೂಡ ಇರಲಿದೆ.

news18-kannada
Updated:May 25, 2020, 8:40 AM IST
ಕರ್ನಾಟಕ ರಾಜ್ಯದಲ್ಲಿ ಸಂಡೇ ಲಾಕ್​​ಡೌನ್​​ ಮುಕ್ತಾಯ: ಮತ್ತೆ ಸಹಜ ಸ್ಥಿತಿಯತ್ತ ಜನ ಜೀವನ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮೇ.25): ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸಿದ್ದ 36 ಗಂಟೆ ಕರ್ಫ್ಯೂ ಮಾದರಿ ಸಂಡೇ ಲಾಕ್​​ಡೌನ್​​​ ಮುಕ್ತಾಯವಾಗಿದೆ. ಶನಿವಾರ ಸಂಜೆ 7 ಗಂಟೆಯಿಂದ ಇಂದು ಸೋಮವಾರ ಬೆಳಗ್ಗೆ 7 ಗಂಟೆಯವರೆಗೂ ಕರ್ಫ್ಯೂ ಮಾದರಿ ಲಾಕ್​​ಡೌನ್​​ ಜಾರಿಗೊಳಿಸಲಾಗಿತ್ತು. ಆದರೀಗ, ಈ ಲಾಕ್​​ಡೌನ್​​ ಅಂತ್ಯಗೊಂಡಿದ್ದು, ಎಂದಿನಂತೆಯೇ ಇಂದಿನಿಂದ ಸಹಜ ಸ್ಥಿತಿಯತ್ತ ಜನ ಜೀವನ ಮರಳಿದೆ.

ಇಂದಿನಿಂದ ಮುಂದಿನ ಶನಿವಾರದ ಸಂಜೆ 7 ಗಂಟೆಯವರೆಗೂ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅವಕಾಶ ಇರುತ್ತದೆ. ಜನರಿಗೆ ಬೇಕಾದ ಅಗತ್ಯ ವಸ್ತುಗಳ ಕೊಂಡುಕೊಳ್ಳಲು ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳು ಓಪನ್ ಆಗಲಿವೆ. ಜತೆಗೆ ಬಸ್, ಆಟೋ, ಟ್ಯಾಕ್ಸಿ, ರೈಲು ಸಂಚಾರವೂ ಮತ್ತೆ ಶುರುವಾಗಲಿದೆ.

ಇನ್ನು, ಬೀದಿ ಬದಿ ವ್ಯಾಪಾರ, ಬಾರ್​​ ಅಂಡ್​​ ರೆಸ್ಟೋರೆಂಟ್​​, ಹೋಟೆಲ್ಸ್​, ಮದ್ಯದಂಗಡಿ, ಹಣ್ಣು, ತರಕಾರಿ, ಮಾಂಸ, ದಿನಸಿ ಅಂಗಡಿಯೂ ಓಪನ್​​ ಇರಲಿದೆ. ಸರ್ಕಾರವೂ ಹೇಳಿರುವ ಮಾರ್ಗಗಳಲ್ಲಿ ವಿಮಾನ ಸಂಚಾರಕ್ಕೂ ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ: Domestic Flights: ಇಂದಿನಿಂದ ಭಾರತದಲ್ಲಿ ವಿಮಾನ ಹಾರಾಟ; ಇಲ್ಲಿದೆ ಹೊಸ ಮಾರ್ಗಸೂಚಿ ಪಟ್ಟಿ

ಇದರ ಜತೆಗೆ ಲಾಕ್​ಡೌನ್​​ ಸಡಿಲಗೊಳಿಸಿ ಕೆಲವು ಕ್ಷೇತ್ರಗಳಿಗೆ ಸರ್ಕಾರದಿಂದ ನೀಡಲಾದ ವಿನಾಯಿತಿಗಳು ಎಂದಿನಂತೆಯೇ ಮುಂದುವರೆಯಲಿದೆ. ಪ್ರತಿದಿನ ಸಂಜೆ 7 ರಿಂದ ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ಕೂಡ ಇರಲಿದೆ.
First published: May 25, 2020, 7:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading